ಇಬ್ಬರ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಕನ್ನಡತಿ ನಟ ಹರ್ಷ ಹಾಗೂ ಭುವಿ.. ನಿಜ ಜೀವನದಲ್ಲಿಯೂ ಒಂದಾಗಲಿದ್ದಾರಾ ಜೋಡಿ

ಕನ್ನಡತಿ.. ಸಧ್ಯಕ್ಕೆ ಕಿರುತೆರೆ ಲೋಕದ ದೊಡ್ಡ ಸೆನ್ಸೇಷನ್ ಆಗಿರುವ ಧಾರಾವಾಹಿ ಇದು. ಶುರುವಾಗು 2 ವರ್ಷ ಆಗಿದ್ದರು ಈಗಲೂ ಕರ್ನಾಟಕದ ಎಲ್ಲಾ ಜನರು ಕನ್ನಡತಿ ಧಾರಾವಾಹಿಯನ್ನು ಅಷ್ಟೇ ಪ್ರೀತಿಯಿಂದ ಇಷ್ಟಪಡುತ್ತಿದ್ದಾರೆ. ಭುವಿ ಹರ್ಷನ ಲವ್ ಸ್ಟೋರಿಯನ್ನು ನೋಡುವ ಸಲುವಾಗಿ ಟಿವಿ ಮುಂದೆ ಬಂದು ಕುಳಿತುಕೊಳ್ಳುವವರು ಇದ್ದಾರೆ. ಈ ಧಾರಾವಾಹಿ ಮೂಲಕ ನಟಿ ರಂಜನಿ ರಾಘವನ್ ಮತ್ತು ನಟ ಕಿರಣ್ ರಾಜ್ ಅವರಿಗೆ ಇದ್ದ ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಎಲ್ಲವೂ ದುಪ್ಪಟ್ಟಾಗಿದೆ. ಭುವಿ ಮಾತನಾಡುವ ಸ್ವಚ್ಛ ಕನ್ನಡ ಹಾಗೂ ಹರ್ಷನ ಪ್ರೀತಿ, ಚಾರ್ಮ್ ಇದೆಲ್ಲವು ವೀಕ್ಷಕರ ಫೇವರೆಟ್. ಎಲ್ಲಾ ಅಭಿಮಾನಿಗಳಲ್ಲೂ ಈಗ ಮೂಡಿರುವ ಪ್ರಶ್ನೆ ಹರ್ಷ ಭುವಿ ಮದುವೆ ಯಾವಾಗ? ಈ ಪ್ರಶ್ನೆಗೆ ಸ್ವತಃ ಹರ್ಷ ಭುವಿ ಕೊಟ್ಟಿರುವ ಉತ್ತರ ಏನು ಗೊತ್ತಾ? ನಿಜ ಜೀವನದಲ್ಲೂ ಒಂದಾಗ್ತಾರಾ ಈ ಜೋಡಿ?

ಕನ್ನಡತಿ ಧಾರಾವಾಹಿ 2020ರ ಆರಂಭದಲ್ಲಿ ಶುರುವಾಯಿತು. ಆಗಿನಿಂದ ಈಗಿನವರೆಗೂ ನ್ಯಾಚುರಲ್ ಆದ ಕಥೆ, ಭಾವನೆಗಳು ಮತ್ತು ಕಲಾವಿದರ ಅದ್ಭುತವಾದ ಅಭಿನಯದಿಂದ ವೀಕ್ಷಕರು ಪ್ರತಿದಿನ ಈ ಧಾರಾವಾಹಿಯನ್ನು ತಪ್ಪದೇ ವೀಕ್ಷಣೆ ಮಾಡುವ ಹಾಗೆ ಮಾಡಿದೆ ಕನ್ನಡತಿ ಚಿತ್ರತಂಡ. ಅದರಲ್ಲೂ ಹರ್ಷ ಭುವಿ ಪಾತ್ರಗಳು ಅಂದ್ರೆ ಜನರಿಗೆ ಕ್ರೇಜ್ ಜಾಸ್ತಿ. ಹರ್ಷ ಭುವಿ ಮೇಲೆ ತೋರಿಸುವ ಪ್ರೀತಿ, ಭುವಿಗೆ ಹರ್ಷನ ಮೇಲೆ ಇರುವ ಕಾಳಜಿ, ಇದೆಲ್ಲವನ್ನು ನೋಡುತ್ತಿದ್ದರೆ ಪ್ರೇಮಕೋಕದಲ್ಲಿ ಇರುವ ಭಾವ ಮೂಡುತ್ತದೆ. ಇವರಿಬ್ಬರ ಪ್ರೇಮ ನಿವೇದನೆ ಯಾವಾಗ ಆಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಹರ್ಷ ಭುವಿಗೆ ಪ್ರೊಪೋಸ್ ಮಾಡಿದ್ದು ಆಯಿತು, ಆದರೆ ತಕ್ಷಣಕ್ಕೆ ಭುವಿ ಹರ್ಷನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ವರುಧಿನಿಯ ಕಾರಣದಿಂದ ಹರ್ಷನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ ಭುವಿ. ಆದರೆ ಹರ್ಷನ ಪ್ರೀತಿಯ ಎದುರು ಭುವಿಯ ಈ ನಿರ್ಧಾರ ಸೋತಿತು. ಭುವಿ ತನ್ನ ಪ್ರೀತಿಯನ್ನು ಹೇಳಿಕೊಂಡಳು. ಇನ್ನೇನು ಹರ್ಷ ಭುವಿಯ ಮುದ್ದಾದ ಪ್ರೀತಿಯ ಸನ್ನಿವೇಶಗಳು ಶುರುವಾಗುತ್ತದೆ ಎನ್ನುವ ಸಮಯಕ್ಕೆ ನಟಿ ರಂಜನಿ ರಾಘವನ್ ಅವರಿಗೆ ಅನಾರೋಗ್ಯ ಉಂಟಾದ ಕಾರಣ ಕೆಲ ದಿನಗಳಿಂದ ಅವರು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಿಲ್ಲ. ಭುವಿ ಇಲ್ಲದೆ ಸಾನಿಯಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಸಂಚಿಕೆಗಳನ್ನು ಪ್ರಸಾರ ಮಾಡಲಾಗಿತ್ತು. ಅದರಿಂದ ಕನ್ನಡತಿ ಟಿ.ಆರ್.ಪಿ. ಕಡಿಮೆಯಾಗಿತ್ತು.

ಇದೀಗ ರಂಜನಿ ಅವರು ಹುಷಾರಾಗಿದ್ದು, ಚಿತ್ರೀಕರಣಕ್ಕೆ ಮರಳಿ ಬಂದಿದ್ದಾರೆ. ಭುವಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇನ್ನುಮುಂದೆ ಭುವಿಯನ್ನು ನೋಡಬಹುದು ಎನ್ನುವುದು ಗುಡ್ ನ್ಯೂಸ್. ಆದರೆ ಭುವಿ ಕಡೆಯಿಂದ ಎಲ್ಲಾ ವೀಕ್ಷಕರಿಗೂ ಒಂದು ದೊಡ್ಡ ಸರ್ಪ್ರೈಸ್ ಕಾದಿದೆ. ಅದೇನೆಂದರೆ ಒಂದು ಸ್ಪೆಷಲ್ ಎಪಿಸೋಡ್ ನಲ್ಲಿ ಭುವಿ ಹರ್ಷನಿಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲಿದ್ದಾಳೆ. ಇಷ್ಟು ದಿನ ಹರ್ಷ ಭುವಿಯನ್ನು ಜೊತೆಯಾಗಿ ನೋಡಲು ಬಯಸುವ ಎಲ್ಲಾ #ಹವಿ ಅಭಿಮಾನಿಗಳಿಗಾಗಿ ಈ ಸಂಚಿಕೆಯನ್ನು ಸ್ಪೆಷಲ್ ಆಗಿ ಸಮರ್ಪಣೆ ಮಾಡಲಾಗಿದೆ..ಈ ಸಂಚಿಕೆ ಇದೇ ವಾರಾಂತ್ಯದಲ್ಲಿ ವಿಶೇಷ ಸಂಚಿಕೆಯಾಗಿ ಪ್ರಸಾರವಾಗಲಿದೆ.

ಈ ಸ್ಪೆಶಲ್ ಎಪಿಸೊಡ್ ಬಗ್ಗೆ ಹರ್ಷ ಭುವಿ ಕೆಲವು ಕುತೂಹಲಕಾರಿ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಭುವಿ ಹರ್ಷ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಕ್ರೇಜ್ ಇದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಇವರಿಬ್ಬರು #ಹವಿ ಎಂದು ಹೆಸರಿಟ್ಟು, ಅನೇಕ ಫ್ಯಾನ್ ಪೇಜ್ ಗಳನ್ನು ಅಭಿಮಾನಿಗಳು ಶುರು ಮಾಡಿದ್ದಾರೆ. ಅವರೆಲ್ಲರ ಪ್ರೀತಿಗಾಗಿ ಈ ಸಂಚಿಕೆ ಚಿತ್ರೀಕರಣ ಮಾಡಿದ್ದಾರೆ. ಇದರ ಜೊತೆಗೆ ಧಾರಾವಾಹಿಯ ಟಿ.ಆರ್.ಪಿ ಯನ್ನು ಹಿಂಪಡೆಯುವ ಪ್ರಯತ್ನದಲ್ಲಿದೆ ಧಾರಾವಾಹಿ ತಂಡ. ಇದರಲ್ಲಿ ಹರ್ಷನ ಶರ್ಟ್ ಇಂದ ಶುರುವಾಗಿ ಎಲ್ಲವೂ ಸ್ಪೆಷಲ್ ಆಗಿದೆ. ಹರ್ಷನ ಶರ್ಟ್ ಬಟನ್ ಗಳಲ್ಲಿ ಭುವಿ ಇದ್ದಾಳೆ. ಯಾವಾಗಲೂ ಹರ್ಷ ಭುವಿಗೆ ಸರ್ಪ್ರೈಸ್ ಕೊಡುತ್ತಿದ್ದ ಆದರೆ ಈಗ ಭುವಿಯ ಸರದಿ.

ಈ ಸಂಚಿಕೆಯಲ್ಲಿ ಹರ್ಷ ಭುವಿ ಮಾತ್ರವೇ ಇರಲಿದ್ದಾರೆ. ಹರ್ಷನಿಗೆ ಇಷ್ಟ ಆಗುವಂತಹ ಸರ್ಪ್ರೈಸ್ ಪ್ಲಾನ್ ಮಾಡಿಕೊಂಡಿದ್ದಾಳೆ ಭುವಿ. ಇನ್ನು ಇವರಿಬ್ಬರ ಮದುವೆ ಬೇಗ ಆಗಲಿ ಎನ್ನುವುದೇ ಎಲ್ಲರ ಆಶಯ, ಮದುವೆ ಬಗ್ಗೆ ಮಾತನಾಡಿದ ಹರ್ಷ ಭುವಿ, ಎಲ್ಲಾ ಕಥೆಗೂ ಹ್ಯಾಪಿ ಎಂಡಿಂಗ್ ಇರುತ್ತದೆ. ನಿಮಗೆ ಬರೀ ಎಂಡಿಂಗ್ ಬೇಕಾ ಅಥವಾ ಹ್ಯಾಪಿ ಎಂಡಿಂಗ್ ಬೇಕಾ ಎನ್ನುವ ಹರ್ಷ, ಆ ಸಂತೋಷದ ಕ್ಷಣಕ್ಕೆ ಇನ್ನು ಸ್ವಲ್ಪ ದಿನ ಕಾಯಬೇಕು ಎಂದಿದ್ದಾರೆ. ಹರ್ಷ ತುಂಬಾ ಪ್ರಾಕ್ಟಿಕಲ್ ಹುಡುಗ ಆದರೆ ಭುವಿಗೆ ಪ್ರೊಪೋಸ್ ಮಾಡಿದ್ದು ಸುಂದರವಾಗಿತ್ತು, ಹಾಗೆಯೇ ಭುವಿ ತನ್ನ ಭಾವನೆ ಹೇಳಿಕೊಳ್ಳುವ ಕ್ಷಣ ಕೂಡ ಬಹಳ ಸ್ಪೆಷಲ್ ಆಗಿರಲಿದ್ದು, ವೀಕ್ಷಕರಿಗೆ ಇಷ್ಟವಾಗಲಿದೆ. ಹಾಗೆಯೇ ಸೀರಿಯ್ ಟಿ.ಆರ್.ಪಿ ಹೆಚ್ಚಾಗಬೇಕಾಗಿರುವ ಕಾರಣ ಎಲ್ಲರೂ ತಪ್ಪದೇ ಟಿವಿಯಲ್ಲೇ ಸಂಚಿಕೆ ನೋಡಿ.. ನಂತರ ವೂಟ್ ನಲ್ಲಿ ನೋಡಿ ಎಂದು ಹರ್ಷ ಭುವಿ ಎಲ್ಲಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.