ವಿಶೇಷ ಜಾಗದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಹರ್ಷ ಭುವಿ..

ಕನ್ನಡ ಕಿರುತೆರೆಯ ಟಾಪ್ ಧಾರವಾಹಿಗಳಲ್ಲಿ ಕನ್ನಡತಿ ಧಾರವಾಹಿ ಕೂಡ ಒಂದು. ಶುರುವಾದ ಮೊದಲ ದಿನದಿಂದಲೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾಡಿಸಿಕೊಂಡಿದೆ ಕನ್ನಡತಿ ಧಾರಾವಾಹಿ. ಕಿರುತೆರೆಯ ಟಿ ಆರ್ ಪಿ ರೇಟಿಂಗ್ ನಲ್ಲಿಯೂ ಸಹ ಕನ್ನಡತಿ ಧಾರವಾಹಿ ಮೊದಲ ಸ್ಥಾನದಲ್ಲಿದೆ. ಇದೀಗ ಈ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿಯ ಮದುವೆಯ ಸಂಚಿಕೆಗಳು ಶುರುವಾಗಿದೆ. ಹರ್ಷ ಹಾಗೂ ಭುವಿ ಇಬ್ಬರ ನಿಶ್ಚಿತಾರ್ಥ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆದಿತ್ತು. ಇದೀಗ ಮದುವೆ ಕೂಡ ಅದರಂತೆ ಕನ್ನಡದಲ್ಲಿ ನಡೆಯಲಿದೆಯಂತೆ.. ಅದೂ ಸಹ ಹರ್ಷ ಭುವಿ ಮದುವೆಯಾಗುತ್ತಿರುವುದು ಒಂದು ವಿಶೇಷ ಜಾಗದಲ್ಲಿ ಎಂಬುದು ಮತ್ತೊಂದು ವಿಶೇಷ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿರುತೆರೆಯ ಟಾಪ್ ಧಾರವಾಹಿ ಕನ್ನಡತಿ. ಕನ್ನಡತಿ ಧಾರಾವಾಹಿ ಪ್ರಸಾರವಾದ ಮೊದಲ ದಿನದಿಂದಲೂ ವೀಕ್ಷಕರ ಮನಸ್ಸನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದಾದ ಮೇಲೆ ಒಂದು ಹೊಸ ತಿರುವುಗಳಿಂದ ಧಾರಾವಾಹಿ ಮುಂದಕ್ಕೆ ಸಾಗುತ್ತಿದೆ. ಕನ್ನಡ ಕಿರುತೆರೆಯ ಧಾರಾವಾಹಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದ್ದೆ ಕನ್ನಡತಿ ಧಾರವಾಹಿ. ಹಾಗೂ ಈ ಧಾರವಾಹಿಯ ಪಾತ್ರಗಳು ಕೂಡ ವೀಕ್ಷಕರ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದಾರೆ. ಈ ಧಾರಾವಾಹಿಯ ನಾಯಕ್ ಹರ್ಷ ಹಾಗೂ ನಾಯಕಿ ಭುವಿ ಇಬ್ಬರ ಜೋಡಿ ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ.

ಪ್ರತಿ ಸಂಚಿಕೆಯೂ ಹೊಸ ತಿರುವುಗಳಿಂದ ಕೂಡಿದ್ದು, ಈ ಧಾರವಾಹಿಯನ್ನು ಅಭಿಮಾನಿಗಳು ಮಿಸ್ ಮಾಡದೆ ನೋಡುತ್ತಾರೆ. ಮಹಿಳೆಯರು ಮಾತ್ರವಲ್ಲದೆ ಕಾಲೇಜು ಹಾಗೂ ಶಾಲಾ ವಿದ್ಯಾರ್ಥಿಗಳಿಗೂ ಕೂಡ ಈ ಧಾರಾವಾಹಿ ಅಚ್ಚುಮೆಚ್ಚು. ಇಷ್ಟು ದಿನ ಹರ್ಷನ ಮೇಲೆ ಪ್ರೀತಿ ಇದ್ದರೂ ಸಹ ತನ್ನ ಸ್ನೇಹಿತೆ ವರುಗಾಗಿ ಭುವಿ ತನ್ನ ಪ್ರೀತಿಯನ್ನು ಅಡಗಿಟ್ಟು ಕೊಂಡಿದ್ದಳು. ಇದೀಗ ತನ್ನ ಪ್ರೀತಿಯನ್ನು ಹರ್ಷನ ಮುಂದೆ ಒಪ್ಪಿಕೊಂಡು, ಈ ಜೋಡಿ ಇದೀಗ ಮದುವೆಯಾಗಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಮದುವೆಯನ್ನು ನಿಲ್ಲಿಸಲು ಕೆಲವರು ಅನೇಕ ಸಂಚುಗಳನ್ನು ಮಾಡುತ್ತಿದ್ದಾರೆ. ಇಷ್ಟು ದಿನ ಭುವಿಯ ಸ್ನೇಹಿತೆಯಾಗಿದ್ದ ವರು ಇದೀಗ ಅವಳ ಮೇಲೆ ಕಿಡಿ ಕಾರುತ್ತಿದ್ದಾಳೆ. ಮದುವೆ ನಿಲ್ಲಿಸಲು ಇನ್ನೇನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ.

ಹರ್ಷ ಹಾಗೂ ಭುವಿ ಇಬ್ಬರ ಎಂಗೇಜ್ಮೇಟ್ ಸರಳವಾಗಿ ಶಾಸ್ತ್ರೋಕ್ತವಾಗಿ ನಡೆದಿದೆ. ಇದೀಗ ಧಾರಾವಾಹಿಯಲ್ಲಿ ಮದುವೆಯ ಕೆಲಸಗಳು ಶುರುವಾಗಿದೆ. ಅಭಿಮಾನಿಗಳು ಭುವಿ ಹಾಗೂ ಹರ್ಷನ ಮದುವೆಗಾಗಿ ಇಷ್ಟು ದಿನ ಬಹಳ ಕಾದು ಕುಳಿತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆಯಂತೆ ಈ ಜೋಡಿ ಒಂದಾಗುತ್ತಿದೆ. ಇದೀಗ ಧಾರವಾಹಿ ತಂಡ ಮದುವೆ ಶೂಟಿಂಗ್ ಗಾಗಿ ಭುವನಗಿರಿ ತಲಿಪಿದೆ. ಭುವನಗಿರಿಯಲ್ಲಿ ಹರ್ಷ ಹಾಗೂ ಭುವಿಯ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಈ ರೀತಿಯ ಒಂದು ಪ್ರೊಮೋ ಧಾರವಾಹಿ ತಂಡ ಹಂಚಿಕೊಂಡಿದೆ.. ಇನ್ನು ಈ ಬಗ್ಗೆ ಸ್ವತಃ ಭುವಿ ಕೂಡ ವೀಡಿಯೋ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ..

ಕನ್ನಡತಿ ಧಾರವಾಹಿ ತಂಡ ಇದೀಗ ಭುವನಗಿರಿ ತಲುಪಿದೆ. ಭುವನಗಿರಿಯಲ್ಲಿ ಕನ್ನಡದ ತಾಯಿ ಭುವನೇಶ್ವರಿ ದೇವಿಯ ದೇವಸ್ಥಾನವಿದೆ. ಅಲ್ಲಿ ತಾಯಿ ಭುವನೇಶ್ವರಿ ದೇವಿಯ ಮುಂದೆ ಮದುವೆಯ ಆಹ್ವಾನ ಪತ್ರಿಕೆ ಇಟ್ಟು ಪೂಜೆ ಮಾಡಿಸಲಾಗಿದೆ. ಭುವನೇಶ್ವರಿ ತಾಯಿಯ ಆಶೀರ್ವಾದ ಪಡೆದು ಅಕ್ಷತೆ ಸ್ವೀಕರಿಸಿದ್ದಾರೆ ಹರ್ಷ ಹಾಗೂ ಭುವಿ. ಈ ರೀತಿಯ ಒಂದು ಪ್ರೊಮೋ ಬಿಡುಗಡೆ ಮಾಡಿದೆ ಧಾರವಾಹಿತಂಡ. ಇದೀಗ ಅಭಿಮಾನಿಗಳು ಕನ್ನಡತಿಯ ಮದುವೆ ಕನ್ನಡಾಂಭೆಯ ಎದುರು ನಡೆಯಲಿರುವ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ.. ಹರ್ಷ ಹಾಗೂ ಭುವಿಯ ಮದುವೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದೆ ಇರಲಿ ಎಂದು ಅಭಿಮಾನಿಗಳು ಕೇಳಿ ಕೊಳ್ಳುತ್ತಿದ್ದಾರೆ.