ಮದುವೆಯ ಸಿಹಿ ಸುದ್ದಿ ನೀಡಿದ ಕನ್ನಡತಿ ಧಾರಾವಾಹಿಯ ನಟ ಹರ್ಷ ಹಾಗೂ ಭುವಿ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯುತ್ತಮವಾದ ಧಾರವಾಹಿಗಳಲ್ಲಿ ಒಂದು ಕನ್ನಡತಿ. ಅಪ್ಪಟ ಕನ್ನಡಡ್ಸ್ ಸೊಬಗಿನಿಂದ ಕೂಡಿರುವ ಈ ಧಾರಾವಾಹಿ ಜನರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಿದೆ ಎನ್ನುವುದಕ್ಕೆ ಈ ಧಾರಾವಾಹಿಗೆ ಇರುವ ಅಭಿಮಾನಿ ಬಳಗವೇ ಸಾಕ್ಷಿ. ಹರ್ಷ ಭುವಿ ಜೋಡಿಗೆ ಅದೆಷ್ಟು ಫ್ಯಾನ್ ಪೇಜ್ ಗಳು ಇದೆ ಎಂದು ಎಣಿಸುತ್ತಾ ಕೂರಲು ಸಾಧ್ಯವಿಲ್ಲ. ಕನ್ನಡತಿ ಧಾರವಾಹಿ ವೀಕ್ಷಕರು ಬಹುದಿನಗಳಿಂದ ಆಸೆಪಟ್ಟಿದ್ದು, ಹರ್ಷ ಭುವಿ ಮದುವೆ ನೋಡಬೇಕು. ಇದೀಗ ಹರ್ಷ ಭುವಿ ಮದುವೆಗೆ ಡೇಟ್ ಫಿಕ್ಸ್ ಆಗಿದ್ದು, ದಿನಗಣನೆ ಆರಂಭವಾಗಿದೆ. ಹರ್ಷ ಭುವಿ ಮದುವೆಗೆ ಮುಹೂರ್ತ ಏನೋ ಫಿಕ್ಸ್ ಆಗಿದೆ, ಆದರೆ ಹರ್ಷ ಭುವಿ ಮದುವೆ ನಡೆಯುವುದು ಹೇಗೆ? ಇವರಿಬ್ಬರ ಮದುವೆ ಎಷ್ಟು ವಿಶೇಷವಾಗಿರುತ್ತದೆ ಎಂದು ಸ್ವತಃ ಹರ್ಷನೇ ತಿಳಿಸಿದ್ದಾನೆ..

ಕನ್ನಡತಿ ಧಾರಾವಾಹಿಯ ವೀಕ್ಷಕರು ಹರ್ಷ ಭುವಿ ಬೇಗ ಒಂದಾಗಬೇಕು, ಅವರಿಬ್ಬರ ಮದುವೆ ನೋಡಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ನಿರ್ದೇಶಕರಿಗೆ ಮತ್ತು ಧಾರವಾಹಿ ತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು. ವೀಕ್ಷಕರನ್ನು ಹೆಚ್ಚು ಕಾಯಿಸದೆ, ಇನ್ನೇನು ಕೆಲವೇ ದಿನಗಳಲ್ಲಿ ಹರ್ಷ ಭುವಿ ಮದುವೆ ನಡೆಯಲಿದೆ. ಭುವಿ ಅಪ್ಪಟ ಕನ್ನಡತಿ, ಇನ್ನು ಹರ್ಷ ಒಂದು ಬ್ರ್ಯಾಂಡ್, ಇವರಿಬ್ಬರ ಮದುವೆ ಅಂದ್ರೆ, ಅದೆಷ್ಟು ವಿಶೇಷವಾಗಿ ಇರಬಹುದು ಎನ್ನುವ ಕುತೂಹಲ ಎಲ್ಲಾ ಅಭಿಮಾನಿಗಳಲ್ಲಿ ಮೂಡಿದೆ. ಹರ್ಷ ಭುವಿ ಇಬ್ಬರು ಇಷ್ಟಗಳು ವಿಭಿನ್ನವಾಗಿದ್ದರೂ, ಒಬ್ಬರನ್ನೊಬ್ಬರು ಗೌರವಿಸುತ್ತಾರೆ. ಹಾಗಾಗಿ ಇವರಿಬ್ಬರ ಮದುವೆ ಕೂಡ ಬಹಳ ಸ್ಪೆಷಲ್ ಆಗಿರಲಿದೆ.

ಭುವಿ ಹಸಿರುಪೇಟೆಯ ಸಂಪ್ರದಾಯಸ್ಥ ಹುಡುಗಿ, ಹರ್ಷ ವೆಸ್ಟರ್ನ್ ಕಲ್ಚರ್ ಜೊತೆಗೆ ಬೆಳೆದರೂ ಸಹ, ಭುವಿ ಭೇಟಿಯಾದ ಮೇಲೆ ಕನ್ನಡದ ಬಗ್ಗೆ ಗೌರವ ಮೂಡಿದೆ. ಕನ್ನಡತನವನ್ನು ಇಷ್ಟಪಡುತ್ತಿದ್ದಾನೆ. ಇನ್ನು ಹರ್ಷ ಭುವಿ ನಿಶ್ಚಿತಾರ್ಥ ಅಪ್ಪಟ ಹಳ್ಳಿ ಸಂಪ್ರದಾಯದ ಪ್ರಕಾರ ನಡೆದಿತ್ತು. ಹಳ್ಳಿಯ ಅಚ್ಚಹಸಿರಿನ ವಾತಾವರಣದಲ್ಲಿ ಹರ್ಷ ಭುವಿ ನಿಶ್ಚಿತಾರ್ಥ ನಡೆದಿತ್ತು, ಇವರಿಬ್ಬರ ಮದುವೆ ಎಲ್ಲಿ ನಡೆಯುತ್ತದೆ, ಹೇಗೆ ನಡೆಯುತ್ತದೆ ಎಂದು ವೀಕ್ಷಕರಿಗೆ ಭಾರಿ ಕುತೂಹಲ ಇದೆ. ಹರ್ಷ ಭುವಿ ಮದುವೆಯ ಆಮಂತ್ರಣ ಪತ್ರಿಕೆ ಸಹ ಈಗಾಗಲೇ ಮುದ್ರಣವಾಗಿದೆ. ಮೊದಲ ಕಾರ್ಡ್ ವರುಧಿನಿಗೆ ಕೊಡಲು ಬಯಸಿದ್ದಾಳೆ ಭುವಿ.

ಇನ್ನು ಮದುವೆಯ ಕಾಂಟ್ರ್ಯಾಕ್ಟ್ ಅನ್ನು ಸಹ ವರುಧಿನಿಗೆ ಕೊಡಲಾಗಿದೆ. ಹರ್ಷ ಮತ್ತು ಭುವಿಯ ಮದುವೆ ಹೇಗೆ ನಡೆಯಬೇಕು ಎನ್ನುವ ಚರ್ಚೆಯನ್ನು ಹರ್ಷ, ಭುವಿ ಮತ್ತು ವರುಧಿನಿ ನಡೆಸಿದ್ದಾರೆ. ಈ ಚರ್ಚೆಯಲ್ಲಿ ಇವರಿಬ್ಬರ ಮದುವೆ ಹೇಗಾಗುತ್ತದೆ ಎನ್ನುವ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಲಿಲ್ಲವಾದರು, ಹರ್ಷ ಭುವಿ ಇಬ್ಬರು ಕನ್ನಡದ ಮದುವೆ ಆಗುತ್ತಾರೆ ಎನ್ನುವ ಸಣ್ಣ ಸುಳಿವು ಮಾತ್ರ ಸಿಕ್ಕಿದೆ. ಇದೇನಿದು ಕನ್ನಡದ ಮದುವೆ? ಹಾಗಂದ್ರೆ ಏನು? ಈ ಪ್ರಶ್ನೆ ಸಹ ವೀಕ್ಷಕರಲ್ಲಿ ಮೂಡುವುದು ಸಹಜ. ಇದಕ್ಕೆ ಸ್ವತಃ ಹರ್ಷ ಉತ್ತರ ನೀಡಿದ್ದಾನೆ. ಕನ್ನಡದ ಮದುವೆಯ ವಿಶೇಷತೆ ಏನೆಂದು ಹರ್ಷ ಹೇಳುವುದು ಹೀಗೆ..

ಹರ್ಷ ಭುವಿ ಮಾತನಾಡುವಾಗ, ಭುವಿಗೆ ಯಾವ ರೀತಿಯ ಮದುವೆ ಇಷ್ಟ ಎಂದು ಹರ್ಷ ಕೇಳುತ್ತಾನೆ.. ಆಗ ಉತ್ತರಿಸುವ ಭುವಿ, ರೋಸ್ ವೆಡ್ಡಿಂಗ್, ರಾಯಲ್ ವೆಡ್ಡಿಂಗ್ ಬಗ್ಗೆ ನೀವು ಹೇಳಿದ್ರಿ, ಅದಕ್ಕೂ ನಮಗೂ ಸಂಬಂಧ ಇಲ್ಲ ಅನ್ನಿಸಿತು. ಬೇರೆ ಯಾವುದೋ ಸಂಪ್ರದಾಯದಲ್ಲಿ ನಾವು ಒಂದು ಪಾತ್ರಡ್ಸ್ ಹಾಗೆ ನಿಂತು ಮದುವೆಯ ನಟನೆ ಮಾಡುವ ಹಾಗೆ ಅನ್ನಿಸಿತು. ಮದುವೆ ಅನ್ನುವ ಕನ್ನಡದ ಪದ ನೀವು ಹೇಳಿದಾಗ, ಒಂದು ಮಿಂಚು ಹುಟ್ಟಿಕೊಂಡಿತು. ಮದುವೆ ಅನ್ನುವುದು ಹೃದಯಕ್ಕೆ ತುಂಬಾ ಹತ್ತಿರವಾದದ್ದು, ನಾವು ಕನ್ನಡದ ಮದುವೆ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಎಂದಿದ್ದಾಳೆ ಭುವಿ. ಅದಕ್ಕೆ ಉತ್ತರ ನೀಡುವ ಹರ್ಷ.. ಹರ್ಷ ಮತ್ತು ಹಸಿರುಪೇಟೆ ಟೀಚರ್ ಮದುವೆ ಅಂದ್ರೆ, ಅದು ಕನ್ನಡದ ಮದುವೆಯೇ ಆಗಿರಬೇಕು.. ಎನ್ನುತ್ತಾನೆ ಹರ್ಷ..

ಇವರಿಬ್ಬರ ಮಾತು ಕೇಳಿಸಿಕೊಳ್ಳುವ ವರು, ಕನ್ನಡದ ಮದುವೆ ಅಂದ್ರೆ ಏನು.. ಅರ್ಥ ಆಗುವ ಹೇಳಿ ಎನ್ನುತ್ತಾಳೆ.. ಆಗ ಮದುವೆಯ ವಿವರಣೆ ಕೊಡುತ್ತಾನೆ ಹರ್ಷ.. ಕನ್ನಡದ ಮದುವೆ ಅಂದ್ರೆ, ನಮ್ಮ ಭಾಷೆಯಲ್ಲಿ ನಮಗೆ ಅರ್ಥ ಆಗುವ ಹಾಗೆ ಮಂತ್ರಗಳನ್ನು ಪಠಿಸಿ, ಶಾಸ್ತ್ರೋಕ್ತವಾಗಿ ಮದುವೆ ಆಗುವುದು. ಅಲ್ಲಿ ನಡೆಯುತ್ತಿರುವ ಪ್ರತಿಯೊಂದು ಶಾಸ್ತ್ರಗಳ ಅರ್ಥ ನಮಗೆ ಗೊತ್ತಿದ್ದರೆ, ನಾವು ಅದನ್ನು ಮನಸ್ಸಿನಿಂದ ಮಾಡುತ್ತೀವಿ. ಮದುವೆಯಾದ 50 ವರ್ಷಗಳ ನಂತರ ಕೂಡ ಅದು ನಮಗೆ ನೆನಪಿರಬೇಕು. ನಮ್ಮ ನಿಶ್ಚಿತಾರ್ಥ ನಡೆದಾಗ, ಅಮ್ಮಮ್ಮ ಅವರ ಮದುವೆ ಬಗ್ಗೆ ಹೇಳ್ತಾ ಇದ್ರು, ಅವರ ಮದುವೆಗೆ ಯಾರೆಲ್ಲಾ ಬಂದಿದ್ರು, ಅವರಿಗೆ ಆಗ ಎಷ್ಟು ವಯಸ್ಸು, ಉಡುಗೊರೆಯಾಗಿ ಯಾರೆಲ್ಲ ಸ್ಟೀಲ್ ಪಾತ್ರೆ ಕೊಟ್ರು ಅಂತ ಅವರು ಹೇಳಿದ್ದರು. ಅದೆಲ್ಲವೂ ಅವರ ಚೆನ್ನಾಗಿ ನೆನಪಿದೆ. ಹಾಗೆ ನಮ್ಮ ಮದುವೆ ಸಹ ಕನ್ನಡದ ಮದುವೆ ಆಗಬೇಕು ಎಂದಿದ್ದಾನೆ ಹರ್ಷ. ಒಟ್ಟಿನಲ್ಲಿ ವೀಕ್ಷಕರಿಗೆ ಕನ್ನಡತಿ ಧಾರಾವಾಹಿಯ ಮೂಲಕ ಹೊಸ ರೀತಿಯ ಕನ್ನಡದ ಮದುವೆ ನೋಡಲಿಕ್ಕೆ ಸಿಗುವುದಂತೂ ಖಂಡಿತ.