ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಇಂದಿನ ನಿಮ್ಮ ರಾಶಿಫಲ ತಿಳಿಯಿರಿ..

ಮೇಷ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ ಆಗಬಹುದಾಗಿದೆ, ಮಾನಸಿಕ ವೇದನೆ, ಮನೋರೋಗ, ವಿಪರೀತ ಕೋಪ, ತಾಯಿ ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ನಿಂದನೆಗೆ ಒಳಗಾಗುವ ಸಾಧ್ಯತೆ ಇದೆ ಎಚ್ಚರವಿರಲಿ..

ವೃಷಭ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ದೇವತಾಕಾರ್ಯ ಮತ್ತು ಧರ್ಮಕಾರ್ಯಗಳಿಗೆ ಅಡೆತಡೆ, ಮನೋ ನಿಯಂತ್ರಣ ಇಲ್ಲದಿರುವುದು ಭಾಸವಾಗಲಿದೆ..

ಮಿಥುನ ರಾಶಿ: ಈ ರಾಶಿಯವರಿಗೆ ಇಂದಿನ ದಿನ ಆರ್ಥಿಕವಾಗಿ ಕುಂಠಿತ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು ಗಮನವಿರಲಿ..

ಕಟಕ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರ ಸಹೋದರಿಯರಿಗೆ ವಾಗ್ವಾದ, ಕಾರ್ಯ ಕರ್ತವ್ಯಗಳಲ್ಲಿ, ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ, ಅಧಿಕ ಒತ್ತಡವಾಗಬಹುದು..

ಕನ್ಯಾ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ ಮತ್ತು ನಿದ್ರಾಭಂಗ, ಮೇಲಾಧಿಕಾರಿಗಳಿಂದ, ರಾಜಕೀಯ ವ್ಯಕ್ತಿಗಳಿಂದ, ಸರ್ಕಾರಿ ವ್ಯಕ್ತಿಗಳಿಂದ ಅದೃಷ್ಟ ಕೈತಪ್ಪುವುದು ಎಚ್ಚರಿಕೆಯಿಂದಿರಿ..

ಸಿಂಹ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಅಧಿಕ ಖರ್ಚು, ಕುಲದೇವರ ಅಥವಾ ಶಕ್ತಿದೇವತೆಯ ದರ್ಶನ, ಉದ್ಯೋಗ ದೊರಕುವ ಸಂದರ್ಭ ಎದುರಾಗಲಿದೆ..

ತುಲಾ ರಾಶಿ: ಇಂದಿನ ದಿನ ಈ ರಾಶಿಯವರಿಗೆ ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಗೌರವಕ್ಕೆ ಚ್ಯುತಿ, ಸ್ವಂತ ಉದ್ಯಮ ಮತ್ತು ಉದ್ಯೋಗಸ್ಥರಿಗೆ ಅನುಕೂಲವಾಗಲಿದೆ..

ಧನಸ್ಸು ರಾಶಿ: ಇಂದಿನ ದಿನ ಈ ರಾಶಿಯವರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಅಥವಾ ಒತ್ತಡ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ..

ವೃಶ್ಚಿಕ ರಾಶಿ: ಇಂದಿನ ದಿನ ಈ ರಾಶಿಯವರಿಗೆ ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಸಂಕಷ್ಟ ಎದುರಾಗಬಹುದು..

ಮಕರ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಸಂಗಾತಿಯಿಂದ ಅನುಕೂಲ, ಸೋದರಮಾವ ಅಥವಾ ತಂದೆಯೊಡನೆ ಕಲಹ, ಮಗ ಅಥವಾ ಮಗಳ ವೈವಾಹಿಕ ಜೀವನದಲ್ಲಿ ಏರುಪೇರಾಗಲಿದೆ..

ಕುಂಭ ರಾಶಿ.. ಇಂದಿನ ದಿನ ಈ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು ಮತ್ತು ಆತ್ಮ ಸಂಕಟ, ಸರ್ಕಾರಿ ಕೆಲಸ ಮತ್ತು ಕೋರ್ಟ್ ಕೇಸುಗಳಲ್ಲಿ ಮುನ್ನಡೆಯಾಗಲಿದೆ..

ಮೀನ ರಾಶಿ: ಇಂದಿನ ದಿನ ಈ ರಾಶಿಯವರಿಗೆ ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ, ಆತ್ಮ ಸಂಕಟ ಮತ್ತು ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ, ಶತ್ರು ಬಾಧೆ ಕಾಡಲಿದೆ..