ಬಿಗ್ ಶಾಕಿಂಗ್.. ಸ್ಯಾಂಡಲ್ವುಡ್ ನ ಮತ್ತೊಬ್ಬ ಸ್ಟಾರ್ ಇನ್ನಿಲ್ಲ.. ನಿಜಕ್ಕೂ ಇವರು ಯಾರು ಗೊತ್ತಾ. ಮನಕಲಕುತ್ತದೆ..

ಕಳೆದ ಒಂದು ವರ್ಷದಿಂದ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬಾಲಿವುಡ್ ಕಾಲಿವುಡ್ ಟಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿಯೂ ಕಲಾವಿದರು ತಂತ್ರಜ್ಞರು ನಿರ್ಮಾಪಕರು ನಿರ್ದೇಶಕರುಗಳು ಇನ್ನಿಲ್ಲವಾದ ಸುದ್ದಿಗಳನ್ನೇ ಕೇಳುವಂತಾಗಿದ್ದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿದೆ.. ಒಂದು ಕಡೆ ಕೊರೊನಾ ಕಾರಣದಿಂದಾಗಿ ಇನ್ನೂ ಸಹ ಚಿತ್ರರಂಗ ಸಂಪೂರ್ಣ ಚೇತರಿಕೆ ಕಾಣದೆ ಸಿನಿಮಾ ಮಂದಿ ದಾರಿ ಕಾಣದಂತಾಗಿದ್ದರೆ.. ಇತ್ತ ಕೊರೊನಾದಿಂದ ಒಂದಷ್ಟು ಕಲಾವಿದರು ಜೀವ ಕಳೆದುಕೊಂಡದ್ದು ಆ ಕುಟುಂಬಗಳ ನೋವು ಹೇಳತೀರದಾಗಿದೆ.. ಇನ್ನೂ ಕೆಲವರು ಆರ್ಥಿಕ ಸಂಕಷ್ಟದಿಂದ ಜೀವ ಕಳೆದುಕೊಂಡಿದ್ದು ಮನಕಲಕುವಂತಿತ್ತು..

ಇದೀಗ ಸ್ಯಾಂಡಲ್ವುಡ್ ನ ಮತ್ತೊಬ್ಬ ಸ್ಟಾರ್ ಇನ್ನಿಲ್ಲವಾಗಿದ್ದು ಸ್ಯಾಂಡಲ್ವುಡ್ ಮಂದಿ ಕಂಬನಿ ಮಿಡಿದಿದ್ದಾರೆ.. ಹೌದು ಸ್ಯಾಂಡಲ್ವುಡ್ ನ ಖ್ಯಾತ ಬಹುಬೇಡಿಕೆಯ ಸಂಭಾಷಣೆ ಬರಹಗಾರ ಗುರು ಕಶ್ಯಪ್ ಅವರು ಇನ್ನಿಲ್ಲವಾಗಿದ್ದಾರೆ.. ಹೌದು ಸೋಮವಾರ ರಾತ್ರಿ ಗುರು ಕಶ್ಯಪ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದು ಬಿಟ್ಟಿದ್ದಾರೆ..

ಗುರು ಕಶ್ಯಪ್ ಅವರಿಗೆ ಕೇವಲ ನಲವತ್ತೈದು ವರ್ಷ ವಯಸ್ಸಾಗಿದ್ದು ಮದುವೆಯಾಗಿ ಒಬ್ಬಳು ಮಗಳಿದ್ದಳು.‌. ಇದೀಗ ಖ್ಯಾತ ಬರಹಗಾರ ಎಂದು ಹೆಸರು ಮಾಡಿದ್ದ ಗುರು ಕಶ್ಯಪ್ ತನ್ನ ಬಾಳ ಪಯಣದ ಪುಟವನ್ನು ಬರೆದು ಮುಗಿಸಿ ಹೊರಟಿದ್ದು ಪತ್ನಿ ಹಾಗೂ ಪುಟ್ಟ ಮಗಳು ಸೇರಿದಂತೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಿತ್ತು..

ಗುರು ಕಶ್ಯಪ್ ಗಣೇಶ್ ಅಭಿನಯದ ಸುಂದರಾಂಗ ಜಾಣ, ರಮೇಶ್ ಅರವಿಂದ್ ಅವರ ಪುಷ್ಪಕ ವಿಮಾನ, ಪ್ರಿಯಾಂಕ ಉಪೇಂದ್ರ ಅವರ ದೇವಕಿ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.. ಅಷ್ಟೇ ಅಲ್ಲದೇ ಮುಂಬರುವ ಡಾಲಿ ಧನಂಜಯ್ ಅವರ ಮಾನ್ಸೂನ್ ರಾಗ, ಶಿವಣ್ಣನ ಭೈರಗಿ, ವೀಲ್ ಚೇರ್ ರೋಮಿಯೋ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದು ಇದೀಗ ಅರ್ಧಕ್ಕೆ ತನ್ನ ವೃತ್ತಿ ಬದುಕಿನ ಜೊತೆಗೆ ಜೀವನದ ಬರಹವನ್ನು ನಿಲ್ಲಿಲಿ ಕೊನೆಯುಸಿರೆಳೆದು ಬಿಟ್ಟಿದ್ದಾರೆ.. ಗುರು ಕಶ್ಯಪ್ ಅವರ ಅಗಲಿಕೆಗೆ ಸ್ಯಾಂಡಲ್ವುಡ್ ನ ಬಹುತೇಕರು ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ..

ಬಹಳ ಒಳ್ಳೆಯ ಹಾಗೂ ಪ್ರತಿಭಾವಂತ ವ್ಯಕ್ತಿಯಾಗಿದ್ದ ಗುರು ಕಶ್ಯಪ್ ಅವರ ಬಗ್ಗೆ ಅವರ ಜೊತೆ ಕೆಲಸ ಮಾಡಿದ ನಿರ್ದೇಶಕರುಗಳು ಮಾತನಾಡಿ ಕಣ್ಣೀರಿಟ್ಟಿದ್ದಾರೆ.. ಶಿವಾಜಿ ಸೂರತ್ಕಲ್ ಸಿನಿಮಾದ ನಿರ್ದೇಶಕ ಆಕಾಶ್ ಶ್ರೀವತ್ಸ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ಗುರು ಕಶ್ಯಪ್ ಅವರು ಬಹಳ ಪ್ರತಿಭಾವಂತ ವ್ಯಕ್ತಿ.. ಕೆಲ ದಿನಗಳ ಹಿಂದೆಯೂ ಅವರ ಜೊತೆ ಕೆಲಸ ಮಾಡಿದ್ದೆ.. ಒಂದು ಒಳ್ಳೆಯ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ.. ಇದು ನಿಜಕ್ಕೂ ಶಾಕಿಂಗ್ ಈ ವಿಚಾರ ಬಹಳ ಬೇಸರವನ್ನು ತಂದಿದೆ.. ನಿನಗೆ ಶಾಂತಿ ಸಿಗಲಿ ಸಹೋದರ ಎಂದು ಬರೆದು ಪೋಸ್ಟ್ ಮಾಡಿದ್ದಾರೆ..