ಗೋದಿ ಹಿಟ್ಟಿನಿಂದ ಕೆಲವೇ ನಿಮಿಷದಲ್ಲಿ ರುಚಿಯಾದ ಬೆಳಗಿನ ತಿಂಡಿ ಮಾಡುವ ಸುಲಭ ವಿಧಾನ..

ಸಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಪ್ರತಿದಿನ ಬೆಳಗ್ಗೆ ತಿಂಡಿಗೆ ಏನು ಮಾಡುವುದು ಎನ್ನುವ ಚರ್ಚೆ ನಡೆಯುತ್ತಲೇ ಇರುತ್ತದೆ. ಪ್ರತಿದಿನ ಒಂದೇ ರೀತಿಯ ತಿಂಡಿಗಳನ್ನು ಮಾಡಿ ಬೋರ್ ಆಗಿದ್ದರೆ, ಒಂದು ಚೇಂಜ್ ಗಾಗಿ ಇಂದು ಗೋಧಿ ಹಿಟ್ಟನ್ನು ಬಳಸಿ ಹೊಸ ಬಗೆಯ ತಿಂಡಿ ರೆಸಿಪಿಯನ್ನು ನಿಮಗೆ ತೋರಿಸಿಕೊಡಲಿದ್ದೇವೆ. ಇದನ್ನು ಸಂಜೆ ಸ್ನ್ಯಾಕ್ಸ್ ರೀತಿಯಲ್ಲಿ ಸಹ ಸೇವಿಸಬಹುದು. ಸುಲಭವಾಗಿ ಮಾಡಬಹುದಾದ ಈ ತಿಂಡಿ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ, ಇದನ್ನು ಮಾಡುವುದು ಕೂಡ ತುಂಬಾ ಸುಲಭವಾಗಿದೆ. ಹಾಗಿದ್ರೆ ಆ ರೆಸಿಪಿಯನ್ನು ಹೇಗೆ ಮಾಡುವುದು..

ಮೊದಲಿಗೆ ಗೋಧಿ ಹಿಟ್ಟಿಗೆ ಅರ್ಧ ಸ್ಪೂನ್ ಉಪ್ಪು ಮತ್ತು 2 ಸ್ಪೂನ್ ಎಣ್ಣೆ ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಸಾಫ್ಟ್ ಆಗಿ ಕಲಸಿ ಹಿಟ್ಟನ್ನು 15 ನಿಮಿಷ ನೆನೆಯಲು ಬಿಡಿ. ಸ್ಟಫಿಂಗ್ ಗಾಗಿ, ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಕಾಯಲು ಇಡೀ, ಬಿಸಿಯಾದ ನಂತರ ಒಂದು ಟೀ ಸ್ಪೂನ್ ಜೀರಿಗೆ ಹಾಕಿ, ನಂತರ 3 ರಿಂದ 4 ಸಣ್ಣದಾಗಿ ಕಟ್ ಮಾಡಿರುವಂಥಾ ಈರುಳ್ಳಿ ಹಾಕಿ, ಈ ರೆಸಿಪಿಗೆ ಈರುಳ್ಳಿ ಮುಖ್ಯವಾದ ಪದಾರ್ಥ ಹಾಗಾಗಿ ಅದನ್ನು ಜಾಸ್ತಿ ಹಾಕಿ. ಈರುಳ್ಳಿ ಸ್ವಲ್ಪ ಫ್ರೈ ಆದ ಬಳಿಕ, 3 ಸಣ್ಣಗೆ ಹೆಚ್ಚಿರುವ ಹಸಿರು ಮೆಣಸಿನಕಾಯಿ ಹಾಕಿ, ನಂತರ ತುರಿದಿರುವ ಒಂದು ಕ್ಯಾರೆಟ್ ಹಾಕಿ ಫ್ರೈ ಮಾಡಿ. ಇದನ್ನು ಸ್ವಲ್ಪ ಫ್ರೈ ಮಾಡಿದಂತೆ ಸಾಕು. ನಂತರ ಸಣ್ಣಗೆ ಹೆಚ್ಚಿರುವ 1/4 ಕಪ್ ಕ್ಯಾಪ್ಸಿಕಂ ಹಾಕಿ. ಇದಕ್ಕೆ ನೀವು ಸ್ವೀಟ್ ಕಾರ್ನ್ ಅಥವಾ ಇನ್ಯಾವುದೇ ತರಕಾರಿಯನ್ನು ಸಹ ಸೇರಿಸಿಕೊಳ್ಳಬಹುದು. 30 ಸೆಕೆಂಡ್ ಗಳ ಕಾಲ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಫ್ರೈ ಮಾಡಿ.

ನಂತರ ಇದಕ್ಕೆ ಅರ್ಧ ಟೀ ಸ್ಪೂನ್ ಗರಂ ಮಸಾಲ ಮತ್ತು ಅರ್ಧ ಟೀ ಸ್ಪೂನ್ ಅರಿಶಿನ ಪುಡಿ ಹಾಕಿ, ಬಳಿಕ ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ ಮತ್ತು ಅರ್ಧ ಟೀ ಸ್ಪೂನ್ ಖಾರದ ಪುಡಿ ಹಾಕಿ..ಈಗಾಗಲೇ ಹಸಿರು ಮೆಣಸಿನಕಾಯಿ ಹಾಕಿರುವ ಕಾರಣ, ಖಾರವನ್ನು ರುಚಿಗೆ ತಕ್ಕಷ್ಟು ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇದೆಲ್ಲವನ್ನು ಚೆನ್ನಾಗಿ ಫ್ರೈ ಮಾಡಿ. ನಿಮಗೆ ಇಷ್ಟವಿದ್ದಲ್ಲಿ, ಟೊಮ್ಯಾಟೋ ಒಳಗಿರುವ ಬೀಜಗಳನ್ನು ತೆಗೆದು, ಅದನ್ನು ಸೇರಿಸಿಕೊಳ್ಳಬಹುದು. ಇದೆಲ್ಲ ಪದಾರ್ಥಗಳು ಚೆನ್ನಾಗಿ ಫ್ರೈ ಆದ ನಂತರ ಕಾಲು ಕಪ್ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ತಣ್ಣಗೆ ಆಗಲು ಇಡಿ.. ಈಗ ನೆನಯಲು ಇಟ್ಟಿದ್ದ ಗೋಧಿ ಹಿಟ್ಟನ್ನು ನೋಡಿದರೆ, ಅದು ತುಂಬಾ ಸಾಫ್ಟ್ ಆಗಿರುತ್ತದೆ.

ಹಿಟ್ಟನ್ನು ಪೂರಿ ಉಂಡೆಯ ಸೈಜ್ ಗೆ ತೆಗೆದುಕೊಳ್ಳಿ, ಉಂಡೆಯನ್ನು ಹಿಟ್ಟಿನಲ್ಲಿ ಉರುಳಿಸಿ, ಚಿಕ್ಕದಾಗಿ ಪೂರಿಯ ರೀತಿಯಲ್ಲೇ ಅದೇ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಹಿಟ್ಟಿನ ಒಳಗೆ ಈಗ 2 ಸ್ಪೂನ್ ಸ್ಟಫಿಂಗ್ ಹಾಕಿ, ಈಗ ಇದನ್ನು ಮೊಮೋಸ್ ರೀತಿ ರೋಲ್ ಮಾಡಿಕೊಳ್ಳಿ. ಆಲೂ ಪರೋಟ ಮಾಡುವ ಹಾಗೆ ಮಾಡಿ, ಲೈಟ್ ಆಗಿ ರೌಂಡ್ ಶೇಪ್ ಗೆ ತಂದು, ಲೈಟ್ ಆಗಿ ಪ್ರೆಸ್ ಮಾಡಿದರೆ ಸಾಕು. ಒಂದು ಇಡ್ಲಿ ಪ್ಲೇಟ್ ಗೆ ಎಣ್ಣೆ ಹಚ್ಚಿ, ಈ ರೀತಿ ಮಾಡಿರುವುದನ್ನು ಅದರೊಳಗೆ ಇಡಿ. ಉಳಿದ ಹಿಟ್ಟನ್ನು ಇದೇ ರೀತಿ ಲಟ್ಟಿಸಿ, ಸ್ಟಫಿಂಗ್ ಹಾಕಿ, ಇಡ್ಲಿ ತಟ್ಟೆಯ ಒಳಗೆ ಇಡಿ. ಈಗ ಒಂದು ಕಡಾಯಿಗೆ ನೀರು, ಅದರೊಳಗೆ ಸ್ಟ್ಯಾಂಡ್ ಇಟ್ಟು, ಇಡ್ಲಿ ತಟ್ಟೆಗಳನ್ನು ಇಡಬಹುದು. ಸಾಮಾನ್ಯವಾಗಿ ಬಳಸುವ ಇಡ್ಲಿ ಪಾತ್ರೆಯ ಒಳಗೆ ಕೂಡ ಇದನ್ನು ನೀವು ಬೇಯಿಸಿಕೊಳ್ಳಬಹುದು.

ನಾಲ್ಕರಿಂದ ಐದು ನಿಮಿಷಗಳ ಕಾಲ ಬೇಯುಸಿ, ನಂತರ ಇದನ್ನು ಹೊರತೆಗೆದು, 30 ಸೆಕೆಂಡ್ ಗಳು ಹಾಗೆ ಇಟ್ಟರೆ, ಕೂಲ್ ಆಗುತ್ತದೆ. ಬಳಿಕ ಒಂದು ಫ್ರೈಯಿಂಗ್ ಪ್ಯಾನ್ ಗೆ ಮೂರು ಟೀ ಸ್ಪೂನ್ ಎಣ್ಣೆ ಹಾಕಿ, ಬೇಯಿಸಿರುವುದನ್ನು ಅಲ್ಲಿ ಜೋಡಿಸಿ, ಮೀಡಿಯಂ ಫ್ಲೇಮ್ ನಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿ. ಇದಕ್ಕೆ ಬೇಕಾದರೆ ಸಾಸಿವೆ ಕರಿಬೇವು ಒಗ್ಗರಣೆ ಸಹ ಹಾಕಿಕೊಳ್ಳಬಹುದು. ಸ್ಟಫಿಂಗ್ ನಲ್ಲಿ ಕೂಡ ನಿಮಗೆ ಇಷ್ಟವಾಗುವ ತರಕಾರಿಗಳನ್ನು ಸೇರಿಸಿಕೊಳ್ಳಬಹುದು. ಎರಡು ಕಡೆ ಇವುಗಳು ಗೋಲ್ಡನ್ ಬ್ರೌನ್ ಆಗುವವರೆಗೆ, ನಿಧಾನವಾಗಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

ಸೈಡ್ ಗಳಲ್ಲಿ ಕೂಡ ಚೆನ್ನಾಗಿ ಫ್ರೈ ಮಾಡಿದರೆ, ತಿನ್ನಲು ಬಹಳ ಕ್ರಿಸ್ಪಿ ಆಗಿರುತ್ತದೆ. ಜೊತೆಗೆ ಒಳಗಿರುವ ಸ್ಟಫಿಂಗ್ ಸಹ ತುಂಬಾ ಸಾಫ್ಟ್ ಆಗಿರುತ್ತದೆ. ಚೆನ್ನಾಗಿ ಫ್ರೈ ಆದ ನಂತರ ಇವುಗಳನ್ನು, ಗ್ರೀನ್ ಚಟ್ನಿ, ಅಥವಾ ಟೊಮ್ಯಾಟೋ ಕೆಚಪ್ ಹಾಗೂ ಈರುಳ್ಳಿ ಜೊತೆ ಸರ್ವ್ ಮಾಡಿ. ಗೋಧಿ ಹಿಟ್ಟಿನಿಂದ ಮಾಡುವ ಈ ರೆಸಿಪಿ ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಈ ರೆಸಿಪಿಯನ್ನು ನಿಮ್ಮ ಮನೆಯಲ್ಲಿ ಉಳಿದಿರುವ ಚಪಾತಿ ಹಿಟ್ಟಿನಿಂದಲು ಮಾಡಬಹುದು. ಈ ಆರೋಗ್ಯಕರವಾದ ಬ್ರೇಕ್ ಫಾಸ್ಟ್ ಅಥವಾ ಸ್ನ್ಯಾಕ್ ರೆಸಿಪಿಯನ್ನು ತಪ್ಪದೇ ಟ್ರೈ ಮಾಡಿ..