ಗಿಣಿರಾಮ ಧಾರಾವಾಹಿ ನಟ ರಿತ್ವಿಕ್ ಪತ್ನಿ ಯಾರು ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತಮವಾದ ಧಾರಾವಾಹಿಗಳಲ್ಲಿ ಒಂದು ಗಿಣಿರಾಮ. ಕೆಲವು ತಿಂಗಳುಗಳ ಹಿಂದೆ ಶುರುವಾದ ಈ ಧಾರಾವಾಹಿ ಜನರಿಗೆ ಇಷ್ಟವಾಗಿದೆ. ನಾಯಕನಾಗಿ ರಿತ್ವಿಕ್ ಮತ್ತು ನಾಯಕಿಯಾಗಿ ನಯನಾ ಅಭಿನಯಿಸುತ್ತಿದ್ದಾರೆ. ಇನ್ನುಳಿದ ಪಾತ್ರಗಳಲ್ಲಿ ಉತ್ತಮವಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಗಿಣಿರಾಮ ಧಾರಾವಾಹಿಯ ವಿಶೇಷತೆ ಏನೆಂದರೆ ಇದು ಅಪ್ಪಟ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಥೆಯಾಗಿದೆ. ಗಿಣಿರಾಮ ಧಾರಾವಾಹಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಸಂಭಾಷಣೆಯೇ ಹೈಲೈಟ್ ಎಂದರೆ ತಪ್ಪಲ್ಲ. ಧಾರಾವಾಹಿಯ ಕಥೆ ಸಹ ಒಳ್ಳೆಯ ದಿಕ್ಕಿನತ್ತ ಸಾಗುತ್ತಿದೆ. ಗಿಣಿರಾಮ ಧಾರಾವಾಹಿಯ ನಾಯಕ ಶಿವರಾಮ್ ಪಾತ್ರ ಹಲವು ಕಾರಣಗಳಿಂದ ಜನರಿಗೆ ತುಂಬಾ ಇಷ್ಟವಾಗಿದೆ. ಗಿರಿಣಾಮ ಸೀರಿಯಲ್ ನಟನ ನಿಜ ಜೀವನದ ಹೆಂಡತಿ ಹೇಗಿದ್ದಾರೆ ಗೊತ್ತಾ?

ಗಿಣಿರಾಮ ಸೀರಿಯಲ್ ನ ಕಥೆ ಶುರುವಾಗಿದ್ದೆ ನಾಯಕ ನಾಯಕಿಗೆ ದ್ವೇಷ ಇರುವ ಹಾಗೆ. ದುಃಖದ ಪರಿಸ್ಥಿತಿಯಲ್ಲಿ ಇಬ್ಬರಿಗೂ ಮದುವೆಯಾಗುತ್ತದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಹೀಗೆ ಶುರುವಾದ ಶಿವರಾಮ್ ಮತ್ತು ಮಹತಿ ಮದುವೆ, ಈಗ ಈ ಜೋಡಿ ಇಷ್ಟಪಡಲು ಶುರು ಮಾಡಿದ್ದು, ಆದರೆ ಪ್ರೀತಿ ಹೇಳಿಕೊಳ್ಳುವುದು ಹೇಗೆ ಎಂದು ಗೊತ್ತಾಗದೆ ಕಷ್ಟಪಡುತ್ತಿದ್ದಾರೆ. ಶಿವರಾಮನ ನಿಜವಾರ ಏನು ಎಂದು ಅರ್ಥವಾದ ಮೇಲೆ ಮಹತಿ ಅವನನ್ನು ಗಂಡನಾಗಿ ಸ್ವೀಕರಿಸಲು ನಿರ್ಧಾರ ಮಾಡಿದ್ದಾಳೆ. ಆದರೆ ಶಿವರಾಮನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳಲು ಕಾಯುತ್ತಿದ್ದಾಳೆ.

ಇತ್ತ ಶಿವರಾಮನಿಗೆ ಗತಕಾಲದಲ್ಲಿ ಒಬ್ಬ ಗೆಳತಿ ಇದ್ದಳು, ಆ ನೆನಪುಗಳಿಂದ ಇನ್ನು ಸಂಪೂರ್ಣವಾಗಿ ಹೊರಬರದೆ ಕಷ್ಟಪಡುತ್ತಿದ್ದ ಶಿವರಾಮ್, ಈಗ ಮಹತಿ ತನಗಾಗಿ ಏನೆಲ್ಲಾ ಮಾಡಿದ್ದಾಳೆ, ತನ್ನನ್ನು ಎಷ್ಟು ಇಷ್ಟಪಡುತ್ತಿದ್ದಾಳೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದನೆ. ಆದರೆ ಇಬ್ಬರಿಗೂ ಪ್ರೀತಿ ಹೇಳಿಕೊಳ್ಳುವುದು ಮಾತ್ರ ಕಷ್ಟವಾಗಿದೆ. ಗಿಣಿರಾಮ ಸೀರಿಯಲ್ ಕಥೆ ಈ ರೀತಿ ಸಾಗಿದ್ದು, ಶಿವರಾಮ್ ಮಹತಿ ಇಬ್ಬರು ಕೂಡ ಆದಷ್ಟು ಬೇಗ ತಮ್ಮ ಪ್ರೀತಿ ಹಂಚಿಕೊಂಡು ಒಂದಾಗಲಿ ಎನ್ನುವುದೇ ಅವರಿಬ್ಬರ ಅಭಿಮಾನಿಗಳ ಕೋರಿಕೆ. ನಿರ್ದೇಶಕರು ಈ ಕೋರಿಕೆಯನ್ನು ಯಾವಾಗ ಈಡೇರಿಸುತ್ತಾರೆ ಎಂದು ಕಾದು ನೋಡಬೇಕಿದೆ.

ಶಿವರಾಮ್ ಸೀರಿಯಲ್ ನ ನಾಯಕ ರಿತ್ವಿಕ್, ಉತ್ತರ ಕರ್ನಾಟಕದ ಖಡಕ್ ಹುಡುಗನಾಗಿ ಇವರ ಅಭಿನಯ ಅಚ್ಚುಕಟ್ಟಾಗಿ ಮೂಡಿ ಬರುತ್ತಿದೆ. ರಗಡ್ ಆಗಿದ್ದರು ಒಳ್ಳೆಯ ಮನಸ್ಸು, ಮುಗ್ಧನಾಗಿರುವ ಶಿವರಾಮನ ಪಾತ್ರ ರಿತ್ವಿಕ್ ಗೆ ತುಂಬಾ ಒಪ್ಪಿಗೆಯಾಗುವಂತಹ ಪಾತ್ರ ಎಂದರೆ ತಪ್ಪಲ್ಲ. ಪಾತ್ರಕ್ಕೆ ಒಗ್ಗಿಕೊಂಡಿರುವ ರಿತ್ವಿಕ್ ಜನರಿಗೆ ಈತ ನಿಜವಾಗಿಯು ಶಿವರಾಮನೇ ಎಂದು ಅನ್ನಿಸುವ ಹಾಗೆ ಮಾಡಿದ್ದಾರೆ. ರಿತ್ವಿಕ್ ಅವರ ಬಗ್ಗೆ ಹೇಳುವುದಾದರೆ, ಹಲವು ವರ್ಷಗಳಿಂದ ನಟನೆಯಲ್ಲಿ ನಿರತರಾಗಿದ್ದಾರೆ ರಿತ್ವಿಕ್. ಇವರು ಮೊದಲಿಗೆ ಅಭಿನಯಿಸಿದ್ದು ಅನುರೂಪ ಧಾರಾವಾಹಿಯಲ್ಲಿ.. ಶ್ಯಾಮ್ ಪಾತ್ರದಲ್ಲಿ ಅಭಿನಯಿಸಿದ್ದರು.

ಕೆಲ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಜನರ ಮೆಚ್ಚುಗೆ ಗಳಿಸಿತ್ತು. ಅದಾದ ಬಳಿಕ ಬಿಗ್ ಬ್ರೇಕ್ ತೆಗೆದುಕೊಂಡರು ರಿತ್ವಿಕ್, ಇನ್ಯಾವುದೇ ಧಾರಾವಾಹಿಯಲ್ಲಿ ಅಭಿನಯಿಸಿರಲಿಲ್ಲ. ನಡುವೆ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಸಿನಿಮಾ ನಟನಾಗಿ ಇವರಿಗೆ ಯಶಸ್ಸು ಸಿಗಲಿಲ್ಲ.. ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದು ಗಿಣಿರಾಮ ಧಾರಾವಾಹಿ ಮೂಲಕ. ಈ ಸೀರಿಯಲ್ ಮೂಲಕ ರಿತ್ವಿಕ್ ಹೆಚ್ಚಿನ ಜನರಿಗೆ ಇಷ್ಟವಾಗಿದ್ದಾರೆ. ಸೀರಿಯಲ್ ನಲ್ಲಿ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾನೆ ಶಿವರಾಮ್, ನಿಜ ಜೀವನದಲ್ಲಿ ರಿತ್ವಿಕ್ ಪತ್ನಿ ಯಾರು? ಹೇಗಿದ್ದಾರೆ ಗೊತ್ತಾ..

ನಿಜ ಜೀವನದಲ್ಲಿ ರಿತ್ವಿಕ್ ಮದುವೆ ಆಗಿರುವ ಹುಡುಗಿಯ ಹೆಸರು ಸುಮನ್ ಆರ್. ರಿತ್ವಿಕ್ ಮದುವೆಯಾಗಿ ಒಂದೂವರೆ ವರ್ಷ ಕಳೆದಿದೆ. ಸುಮನ್ ಸಹ ಕೆಲಸ ಮಾಡುತ್ತಿದ್ದಾರೆ. ಗಂಡನಿಗೆ ತುಂಬಾ ಸಪೋರ್ಟಿವ್ ಆಗಿರುವ ಸುಮನ್, ರಿತ್ವಿಕ್ ಅವರ ಚಿತ್ರೀಕರಣ ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಾರಂತೆ. ರಿತ್ವಿಕ್ ಅವರ ಕೆರಿಯರ್ ಬಗ್ಗೆ ತುಂಬಾ ಸಪೋರ್ಟಿವ್ ಆಗಿದ್ದಾರಂತೆ. ಅನ್ಯೋನ್ಯವಾಗಿರುವ ಈ ಜೋಡಿ ಸುಂದರವಾಗಿ ಜೀವನ ಸಾಗಿಸುತ್ತಿದ್ದಾರೆ. ಆಗಾಗ ಟ್ರಿಪ್ ಗಳಿಗೆ ಹೋಗಿ ಎಂಜಾಯ್ ಮಾಡುತ್ತಾರೆ, ಫೋಟೋಶೂಟ್ ಗಳಲ್ಲು ಕಾಣಿಸಿಕೊಳ್ಳುತ್ತಾರೆ ರಿತ್ವಿಕ್ ಸುಮನ್.