ಕಾಮಿಡಿ ಕಿಲಾಡಿಗಳು ಜೋಡಿ ಜಿಜಿ ಹಾಗೂ ದಿವ್ಯಾ ಕುಟುಂಬಕ್ಕೆ ಮುದ್ದು ಕಂದನ ಆಗಮನ..

ಜೀಕನ್ನಡ ವಾಹಿನಿ ವೀಕ್ಷಕರಿಗೆ ಮನರಂಜನೆ ನೀಡಲು ಅನೇಕ ರಿಯಾಲಿಟಿ ಶೋಗಳು ಮತ್ತು ಕಾರ್ಯಕ್ರಮಗಳನ್ನು ನೀಡುತ್ತದೆ. ಡ್ರಾಮಾ ಜ್ಯೂನಿಯರ್ಸ್, ಕಾಮಿಡಿ ಕಿಲಾಡಿಗಳು, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜೀಕನ್ನಡ ವಾಹಿನಿ ವೀಕ್ಷಕರಿಗೆ ನೀಡುತ್ತಾ ಬಂದಿದೆ. ಇವುಗಳಲ್ಲಿ ವೀಕ್ಷಕರು ಬಹಳ ಇಷ್ಟಪಟ್ಟು ನೋಡುವ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಕೂಡ ಒಂದು. ಈ ಶೋ ವೀಕ್ಷಕರನ್ನು ಹೊಟ್ಟೆಹುಣ್ಣಾಗಿಸುವಷ್ಟು ನಗಿಸುತ್ತಿತ್ತು. ಇದುವರೆಗೂ ಕಾಮಿಡಿ ಕಿಲಾಡಿಗಳು ಎರಡರಿಂದ ಮೂರು ಸೀಸನ್ ಗಳನ್ನು ಪೂರೈಸಿದೆ. ಪ್ರತಿ ಸೀಸನ್ ನಲ್ಲೂ ಬರುವ ಸ್ಪರ್ಧಿಗಳು ವೀಕ್ಷಕರಿಗೆ ಬಹಳ ಇಷ್ಟವಾಗುತ್ತಾರೆ. ಆದರೆ ಮೊದಲ ಸೀಸನ್ ನಲ್ಲಿ ಬಂದ ಸ್ಪರ್ಧಿಗಳನ್ನು ಯಾರು ಮರೆಯಲು ಸಾಧ್ಯವಿಲ್ಲ. ಮೊದಲ ಸೀಸನ್ ನಲ್ಲಿ ಬಂದ ಬಹುತೇಕ ಎಲ್ಲಾ ಸ್ಪರ್ಧಿಗಳು ಇಂದು ಒಳ್ಳೆಯ ಹೆಸರು ಮಾಡಿದ್ದಾರೆ. ಇದೀಗ ಕಾಮಿಡಿ ಕಿಲಾಡಿಗಳು ಸೀಸನ್ 1ರ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಶ್ರೀ ಗುಡ್ ನ್ಯೂಸ್ ನೀಡಿದ್ದಾರೆ..

ಕಾಮಿಡಿ ಕಿಲಾಡಿಗಳು ಶೋ ಇಂದ ಕನ್ನಡ ಚಿತ್ರರಂಗದ ಸಾಕಷ್ಟು ಪ್ರತಿಭೆ ಇರುವ ಕಲಾವಿದರು, ಬರಹಗಾರರು, ಹಾಸ್ಯನಟರು ಸಿಕ್ಕಿದ್ದಾರೆ. ನಯನಾ, ಪ್ಯಾಕು ಪ್ಯಾಕು ಹಿತೇಶ್, ಶಿವ ರಾಜ್ ಕೆ.ಆರ್.ಪೇಟೆ, ಇವರೆಲ್ಲರೂ ಇಂದು ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಇರುವ ಹಾಸ್ಯನಟರಾಗಿದ್ದಾರೆ. ಈ ಮೊದಲ ಸೀಸನ್ ಇಂದಲೇ ಫೇಮಸ್ ಆದ ಮತ್ತಿಬ್ಬರು ಕಲಾವಿದರು ಗೋವಿಂದೇಗೌಡ ಮತ್ತು ದಿವ್ಯಶ್ರೀ. ಗೋವಿಂದೇಗೌಡ ಅವರನ್ನು ಎಲ್ಲರೂ ಜಿಜಿ ಎಂದೇ ಕರೆಯುತ್ತಿದ್ದರು. ಗೋವಿಂದೇಗೌಡ ಅವರು ಒಬ್ಬ ನಟರಷ್ಟೇ ಅಲ್ಲ, ಬರಹಗಾರರು ಸಹ ಆಗಿದ್ದರು. ಸಂಭಾಷಣೆ ಬರೆಯುವುದು, ಕಥೆ ಬರೆಯುವುದನ್ನು ಸಹ ಮಾಡುತ್ತಿದ್ದರು.

ಕಾಮಿಡಿ ಕಿಲಾಡಿಗಳು ಶೋನ ಸ್ಕಿಟ್ ಗಳಲ್ಲಿ ಸಹ ಗೋವಿಂದೇಗೌಡ ಅವರು ಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಇನ್ನು ಮೊದಲ ಸೀಸನ್ ನಲ್ಲೇ ಮತ್ತೊಬ್ಬ ಸ್ಪರ್ಧಿಯಾಗಿದ್ದ ದಿವ್ಯಶ್ರೀ ಅವರು ಕೂಡ ತಮ್ಮ ನಟನೆಯಿಂದ ಬಹಳ ಫೇಮಸ್ ಆಗಿದ್ದರು. ದಿವ್ಯಶ್ರೀ ಕೂಡ ಇಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿವ್ಯಶ್ರೀ ಮತ್ತು ಗೋವಿಂದೇಗೌಡ ಅವರಿಗೆ ಕಾಮಿಡಿ ಕಿಲಾಡಿಗಳು ಶೋ ಟೈಮ್ ನಲ್ಲಿ ಪರಿಚಯವಾಯಿತು. ನಂತರ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು. ಕೆಲ ಸಮಯದ ನಂತರ ಸ್ನೇಹ ಪ್ರೀತಿಗೆ ತಿರುಗಿ ದಿವ್ಯಶ್ರೀ ಮತ್ತು ಗೋವಿಂದೇಗೌಡ ಇಬ್ಬರು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇಬ್ಬರದ್ದು ಪ್ರೇಮ ವಿವಾಹವಾಗಿತ್ತು, ಎರಡು ಕುಟುಂಬದವರನ್ನು ಒಪ್ಪಿಸಿ, 2019ರ ಮಾರ್ಚ್ 14ರಂದು ಇಬ್ಬರು ಶೃಂಗೇರಿ ಶ್ರೀ ಶಾರದಾಂಬೆಯ ಆಶೀರ್ವಾದ ಪಡೆದು ಮದುವೆಯಾದರು. ಎರಡು ಕುಟುಂಬದವರು ಹಾಗೂ ಸ್ನೇಹಿತರು ಇವರ ಮದುವೆಗೆ ಬಂದು, ಶುಭಕೋರಿದ್ದರು. 2 ವರ್ಷಗಳ ಅನ್ಯೋನ್ಯವಾದ ದಾಂಪತ್ಯ ಜೀವನದ ನಂತರ ಈ ಜೋಡಿ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ಗೋವಿಂದೇಗೌಡ ಮತ್ತು ದಿವ್ಯಶ್ರೀ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ದಿವ್ಯ ಅವರು 7 ತಿಂಗಳ ತುಂಬು ಗರ್ಭಿಣಿ ಆಗಿದ್ದಾರೆ. ಇವರಿಬ್ಬರು ಸ್ಪೆಷಲ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತುಂಬು ಗರ್ಭಿಣಿ ಆಗಿರುವ ದಿವ್ಯಶ್ರೀ ಅವರ ಜೊತೆ ಪತಿ ಗೋವಿಂದೇಗೌಡ ಅವರು ಸುಂದರವಾದ ಫೋಟೋಶೂಟ್ ಮಾಡಿಸಿದ್ದಾರೆ. ದೇವಸ್ಥಾನದಲ್ಲಿ ಈ ಫೋಟೋಶೂಟ್ ನಡೆದಿದ್ದು, ಫೋಟೋಗಳನ್ನು, ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಪುಟ್ಟ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಲಿರುವ ಸಿಹಿ ಸುದ್ದಿಯನ್ನು ಎಲ್ಲಾ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದಿವ್ಯ ಗೋವಿಂದೇಗೌಡ ದಂಪತಿಯಿಂದ ಸಿಕ್ಕ ಈ ಗುಡ್ ನ್ಯೂಸ್ ನೋಡಿ, ಅಭಿಮಾನಿಗಳು ಮತ್ತು ಕಾಮಿಡಿ ಕಿಲಾಡಿಗಳು ಶೋನ ಇನ್ನಿತರ ಸ್ಪರ್ಧಿಗಳು ಆ ಫೋಟೋಗಳಿಗೆ ಕಮೆಂಟ್ಸ್ ಮಾಡುವ ಮೂಲಕ ಹಾಗೂ ಲೈಕ್ಸ್ ಕೊಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

ದಿವ್ಯಶ್ರೀ ಮತ್ತು ಗೋವಿಂದೇಗೌಡ ಅವರ ಕೆರಿಯರ್ ವಿಚಾರಕ್ಕೆ ಬರುವುದಾದರೆ, ಗೋವಿಂದೇಗೌಡ ಅವರು ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ ಒಂದು ಪುಟ್ಟ ಪಾತ್ರ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಭರಾಟೆ ಸಿನಿಮಾದಲ್ಲಿ ಅಭಿನಯಿಸಿದ ಪಾತ್ರ ಸಹ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ದಿವ್ಯಶ್ರೀ ಅವರು ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ, ರತ್ನನ್ ಪ್ರಪಂಚ ಸಿನಿಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಂತರ್ ಮಂತರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಜೋಡಿ ತಂದೆ ತಾಯಿ ಆಗಲಿದ್ದು ಜೀವನದ ಹೊಸ ಘಟ್ಟವನ್ನು ತಲುಪಿದ್ದಾರೆ.