ಕಾಮಿಡಿ ಕಿಲಾಡಿಗಳು ದಿವ್ಯಾ ಜಿಜಿ ದಂಪತಿಗೆ ಹೆಣ್ಣು ಮಗು ಜನನ.. ಮುದ್ದು ಮಗಳ ಜೊತೆ ಯುಗಾದಿ ಹಬ್ಬ ಆಚರಿಸಿದ ಜೋಡಿ..

ಕಾಮಿಡಿ ಕಿಲಾಡಿಗಳು ಧಾರಾವಾಹಿ ಮೂಲಕ ಭಾರಿ ಫೇಮಸ್ ಆದವರು ದಿವ್ಯಶ್ರೀ ಮತ್ತು ಗೋವಿಂದೇಗೌಡ ದಂಪತಿ. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಂದಿದ್ದವರು ದಿವ್ಯಶ್ರೀ ಮತ್ತು ಗೋವಿಂದೇಗೌಡ. ಇಂದು ಇವರಿಬ್ಬರು ಗಂಡ ಹೆಂಡತಿಯಾಗಿ ಸುಖವಾದ ಜೀವನ ನಡೆಸುತ್ತಿದ್ದಾರೆ. ಈ ಜೋಡಿಯ ಸುಂದರ ಸಂಸಾರ ನೋಡಿದರೆ ಎಲ್ಲರಿಗೂ ಸಂತೋಷವಾಗುವುದು ಖಂಡಿತ. ಇವರಿಬ್ಬರ ಜೀವನಕ್ಕೆ ಪುಟ್ಟ ಲಕ್ಷ್ಮಿಯ ಆಗಮನವಾಗಿದ್ದು, ಮಗಳ ಜೊತೆಗೆ ಯುಗಾದಿ ಹಬ್ಬ ಆಚರಿಸಿದ್ದಾರೆ. ದಿವ್ಯ ಗೋವಿಂದೇಗೌಡ ಅವರ ಮಗಳ ಜೊತೆಗೆ ಯುಗಾದಿ ಹಬ್ಬದ ಆಚರಣೆ ಹೇಗಿತ್ತು ಗೊತ್ತಾ? ತಿಳಿಸುತ್ತೇವೆ ನೋಡಿ..

ದಿವ್ಯ ಮತ್ತು ಗೋವಿಂದೇಗೌಡ ದಂಪತಿ, ಬಹಳ ಸಂತೋಷವಾಗಿದ್ದಾರೆ. ಚಿಕ್ಕದಾದ ಮತ್ತು ಸುಂದರವಾದ ಸಂಸಾರ ಇವರದ್ದಾಗಿದೆ, ಆಡಂಬರವಿಲ್ಲದೆ, ಸರಳವಾದ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರು ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಪಟ್ಟಿದ್ದಾರೆ. ಕಾಮಿಡಿ ಕಿಲಾಡಿಗಳು ಶೋಗೆ ಬರಲು ಸಹ ದಿವ್ಯ ಅವರಿಗೆ ಕಷ್ಟವಾಗುತ್ತಿತ್ತು. ನಟನೆ ಮೇಲಿನ ಆಸಕ್ತಿಯಿಂದ ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟು ಬಂದಿದ್ದರು ದಿವ್ಯಶ್ರೀ. ಆಗ ಬಸ್ ನಲ್ಲಿ ಶೋ ನಡೆಯುತ್ತಿದ್ದ ಸ್ಥಳಕ್ಕೆ ಬರುವುದು ಸಹ ದಿವ್ಯಶ್ರೀ ಅವರಿಗೆ ಕಷ್ಟವಾಗುತ್ತಿತ್ತು.

ಜನರಿಂದ ಸಾಕಷ್ಟು ಅವಮಾನಗಳನ್ನು ಅವಮರಿಯಾದೆಯನ್ನು ಸಹ ದಿವ್ಯಶ್ರೀ ಅವರು ಅನುಭವಿಸಿದ್ದರು. ಇನ್ನು ಗೋವಿಂದೇಗೌಡ ಅವರು ಸಹ ಅದೇ ರೀತಿ. ಚಿತ್ರರಂಗದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕು ಎನ್ನುವ ಕನಸ್ಸಿನಿಂದ ಬೆಂಗಳೂರಿಗೆ ಬಂದು, ಇಲ್ಲಿ ನೆಲೆ ಸಿಗದೆ ಪರದಾಡಿ, ಯಾರ ಸಹಾಯವೂ ಇಲ್ಲದೆ ತಮಗೆ ತಾವೇ ಒಂದು ಜೀವನ ರೂಪಿಸಿಕೊಂಡವರು ಗೋವಿಂದೇಗೌಡ. ನಟನೆ ಮಾತ್ರವಲ್ಲದೆ ನಿರ್ದೇಶನ ಮತ್ತು ಬರಹದಲ್ಲೂ ಎತ್ತಿದ ಕೈ ಗೋವಿಂದೇಗೌಡ ಅವರು. ಒಂದು ಸಿನಿಮಾವನ್ನು ಸಹ ಗೋವಿಂದೇಗೌಡ ಅವರು ನಿರ್ದೇಶನ ಮಾಡಿದ್ದಾರೆ.

ದಿವ್ಯಶ್ರೀ ಅವರು ಒಂದೆರಡು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾಈ. ಕಷ್ಟಪಟ್ಟು ತಮ್ಮದೇ ಆದ ಒಂದು ಮನೆ ಮತ್ತು ಪುಟ್ಟ ಸಂಸಾರ ಒಂದನ್ನು ಈ ಜೋಡಿ ರೂಪಿಸಿಕೊಂಡಿದೆ. ಒಂದೆರಡು ತಿಂಗಳ ಹಿಂದೆ, ತಾವಿಬ್ಬರು ತಂದೆ ತಾಯಿ ಆಗುತ್ತಿರುವ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತೋಷದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದರು. ಇವರಿಬ್ಬರು ಪ್ರೆಗ್ನೆನ್ಸಿ ಫೋಟೋಶೂಟ್ ನ ಫೋಟೋಗಳನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳೆಲ್ಲರು ಇವರಿಬ್ಬರು ಶುಭಾಶಯ ಕೋರಿದ್ದರು..

ಈ ದಂಪತಿಯ ಮುದ್ದಾದ ಪುಟ್ಟ ಮಹಾಲಕ್ಷ್ಮಿಯ ಆಗಮನವಾಗಿದೆ. ತಮ್ಮ ಮುದ್ದು ಮಗಳ ಜೊತೆಯಲ್ಲೇ ಈ ವರ್ಷದ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಶೇರ್ ಮಾಡಿರುವ ಈ ಜೋಡಿ, ‘ಈ ವರ್ಷ ವಿಶೇಷವಾದ ಯುಗಾದಿ, ಮಗಳೊಂದಿಗೆ ಆಚರಿಸುವ ಸರದಿ..ಹಾಗಾಗಿ ಸಂತೋಷವದು ಇಮ್ಮಡಿ.. ಸಂಸಾರದ ಟಿಲಿಸಿಗಿದುವೆ ಮುನ್ನಡಿ..ನಮ್ಮಿಂದ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ನೂರ್ಮಡಿ’ ಎಂದು ಬರೆದುಕೊಂಡಿದ್ದಾರೆ. ಈ ವರ್ಷ ಇವರ ಪಾಲಿಗೆ ವಿಶೇಷವಾಗಿದೆ.

ದಿವ್ಯಶ್ರೀ ಮತ್ತು.ಗೋವಿಂದೇಗೌಡ ಇಬ್ಬರು ಸಹ ಮುದ್ದು ಮಗಳನ್ನು ನೋಡಿಕೊಳ್ಳುವಲ್ಲಿ ಹೆಚ್ಚಿನ ಸಮಯ ಮೀಸಲಾಗಿ ಇಟ್ಟಿದ್ದಾರೆ. ಮನೆಯಲ್ಲಿ ಮಗುವಿದ್ದರೆ, ಸ್ವರ್ಗ ಇದ್ದ ಹಾಗೆ. ತಾಯ್ತನವನ್ನು ಸಂತೋಷದಿಂದ ಅನುಭವಿಸುತ್ತಿದ್ದಾರೆ ದಿವ್ಯಶ್ರೀ. ಸಧ್ಯಕ್ಕೆ ಈ ಜೋಡಿ ಇನ್ನು ತಮ್ಮ ಮಗುವಿನ ಫೋಟೋ ಶೇರ್ ಮಾಡಿಕೊಂಡಿಲ್ಲ. ಇವರ ಹಾಗೂ ಇವರ ಮಗಳ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ.