ಗೀತಾ ಧಾರಾವಾಹಿಯ ಖ್ಯಾತ ನಟಿ ಇನ್ನಿಲ್ಲ.. ಸಣ್ಣ ಆಗಲು ಹೋಗಿ ಏನಾಗಿ ಹೋಯ್ತು ನೋಡಿ‌..

ಒಮ್ಮೊಮ್ಮೆ ಏನೋ ಮಾಡಲು ಹೋಗಿ ಏನೋ ಆಗಿ ಬಿಡುತ್ತದೆ ಎಂಬುದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ.. ಹೌದು ಕನ್ನಡ ಕಿರುತೆರೆಯ ಖ್ಯಾತ ನಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಜನರಿಗೆ ಚಿರಪರಿಚಿತರಾಗಿದ್ದ ನಟಿ ಇದೀಗ ಜೀವ ಕಳೆದುಕೊಂಡಿದ್ದಾರೆ.. ಹೌದು ಗೀತಾ ಧಾರಾವಾಹಿ ದೊರೆಸಾನಿ ಧಾರಾವಾಹಿ ಸೇರಿದಂತೆ ಇನ್ನು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದ ನಟಿ ಚೇತನಾ ರಾಜ್ ಇದೀಗ ಸಣ್ಣದೊಂದು ಎಡವಟ್ಟಿನಿಂದಾಗಿ ಜೀವವನ್ನೇ ಕಳೆದುಕೊಳ್ಳುವಂತಾಗಿದೆ..

ಹೌದು ಸಣ್ಣ ಆಗಲು ಮಾಡುವ ಸರ್ಜರಿಯನ್ನು ಮಾಡಿಸಿಕೊಳ್ಳಲು ಹೋಗಿ ಇಂತಹ ಘಟನೆ ನಡೆದಿದ್ದು ಇದೀಗ ಚೇತನಾ ರಾಜ್ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.. ಹೌದು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವ ಸಮಯದಲ್ಲಿ ಶ್ವಾಸಕೋಶದಲ್ಲಿ ನೀರು ಸೇರಿಕೊಂಡು ಚೇತನಾ ರಾಜ್ ಜೀವವನ್ನೇ ಕಳೆದುಕೊಳ್ಳುವಂತಾಗಿದೆ..

ಹೌದು ಚೇತನಾ ರಾಜ್ ಕಲರ್ಸ್ ಕನ್ನಡ ವಾಹಿನಿಯ ಗೀತಾ ದೊರೆಸಾನಿ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು.. ಅಷ್ಟೇ ಅಲ್ಲದೇ ಹವಯಾಮಿ ಸಿನಿಮಾದಲ್ಲಿಯೂ ಸಹ ಅಭಿನಯಿಸಿದ್ದಾರೆ.. ಇನ್ನು ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿದ್ದು ಕೆಲ ತಿಂಗಳಲ್ಲಿ ಧಾರಾವಾಹಿ ತೆರೆ ಮೇಲೆ ಬರುವುದಿತ್ತು.. ಆದರೆ ಅಷ್ಟರಲ್ಲಿ ಸಣ್ಣ ಆಗುವ ಸಲುವಾಗಿ ಫ್ಯಾಟ್ ಸರ್ಜರಿಗೆ ಒಳಗಾಗಿ ಈ ರೀತಿಯ ಘಟನೆ ನಡೆದು ಹೋಗಿದೆ.. ಅಷ್ಟೇ ಅಲ್ಲದೇ ಅಪ್ಪ ಅಮ್ಮನಿಗೆ ಹೇಳದೇ ಚೇತನಾ ರಾಜ್ ಈ ಕೆಲಸ ಮಾಡಿದ್ದು ಇದೀಗ ಶಾಶ್ವತವಾಗಿ ಅಪ್ಪ ಅಮ್ಮನನ್ನು ಅಗಲುವಂತಾಗಿದೆ..

ಹೌದು ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯ ನಿವಾಸಿಯಾಗಿರುವ ಚೇತನಾ ರಾಜ್ ತಮ್ಮ ಓದು ಮುಗಿಸಿ ನಟನೆಯಲ್ಲಿಯೇ ತನ್ನ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕಿರುತೆರೆಗೆ ಕಾಲಿಟ್ಟರು.. ನಂತರ ಸಿನಿಮಾದಲ್ಲಿಯೂ ಅಭಿನಯಿಸಿದರು.. ಇನ್ನು ಹೊಸ ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುವ ಅವಕಾಶವೂ ದೊರೆಯಿತು.. ಆದರೆ ಅತಿಯಾಗಿ ದಪ್ಪ ಇಲ್ಲದಿದ್ದರೂ ಸಹ ಫ್ಯಾಟ್ ಸರ್ಜರಿ ಮಾಡಿಸಿಕೊಂಡು ಸಣ್ಣ ಆಗುವ ಸಲುವಾಗಿ ಯಡವಟ್ಟು ಮಾಡಿಕೊಂಡಿದ್ದಾರೆ.. ಹೌದು ಸರ್ಜರಿ ಮೂಲಕ ಸಣ್ಣ ಆಗೋದು ನಿಜಕ್ಕೂ ಕೃತಕವಾಗಿ ಪರಿಸರದ ವಿರುದ್ಧ ಹೋದಂತೆ..

ಯೋಗವೋ ಅಥವಾ ವ್ಯಾಯಾಮವೋ ಮಾಡಿ ಸಣ್ಣ ಆಗಬಹುದಿತ್ತು.. ಆದರೆ ಸರ್ಜರಿಯ ನಿರ್ಧಾರ ತೆಗೆದುಕೊಂಡು ಇಂದು ತೆರೆ ಮೇಲೆ ಬರಬೇಕಿದ್ದ ಚೇತನಾ ರಾಜ್ ಜೀವ ಕಳೆದುಕೊಂಡು ಮಲಗುವಂತಾಗಿದೆ.. ಹೌದು ಅಪ್ಪ ಅಮ್ಮನಿಗೆ ತಿಳಿಸದೇ ಚೇತನಾ ರಾಜ್ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದರು.. ನಿನ್ನೆ ಸೋಮವಾರ ಬೆಳಿಗ್ಗೆ ಒಂಭತ್ತು ಮೂವತ್ತಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ.. ನಂತರ ಈ ವಿಚಾರ ಚೇತನಾ ರಾಜ್ ಅವರ ತಂದೆ ತಾಯಿಗೆ ತಿಳಿದಿದ್ದು ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ..

ಆದರೆ ಅದಾದ ಬಳಿಕ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಚೇತನಾ ರಾಜ್ ಪರಿಸ್ಥಿತಿ ಗಂಭೀರವಾಗಿದೆ.. ನಂತರ ನಾಲ್ಕು ಗಂಟೆಗಳ ಕಾಲ ಚಿಕಿತ್ಸೆ ನೀಡಿ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಗಿದೆ.. ಆದರೆ ಅಷ್ಟರಲ್ಲಾಗಲೇ ಚೇತನಾ ರಾಜ್ ತಮ್ಮ ಬದುಕಿನ ಪಯಣವನ್ನು ಮುಗಿಸಿ ಬಿಟ್ಟಿದ್ದರು.. ಹೌದು ಪೋಷಕರ ಅನುಮತಿ ಇಲ್ಲದೇ ಆಸ್ಪತ್ರೆಯವರು ಹೇಗೆ ಸರ್ಜರಿ‌‌ ಮಾಡಿದರು.. ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ಮಗಳು ಇಂದು ಜೀವ ಕಳೆದುಕೊಂಡಿದ್ದು ಇದಕ್ಕೆಲ್ಲಾ ವೈದ್ಯರೇ ಕಾರಣ ಎಂದು ಚೇತನಾ ರಾಜ್ ಅವರ ದೊಡ್ಡಪ್ಪ ಆರೋಪಿಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..