ಒಂದು ಸಾರಿ ಹಾಕಿದ ಬಟ್ಟೆಯನ್ನು ಮತ್ತೊಮ್ಮೆ ಹಾಕೋದಿಲ್ವಂತೆ ಗೀತಾ ಧಾರಾವಾಹಿಯ ನಟಿ ಭವ್ಯಾ ಗೌಡ.. ಕಾರಣವೇನು ಗೊತ್ತಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿ ಜನ ಮನ ಗೆದ್ದಿದೆ. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಹೊಸ ಪ್ರತಿಭೆಗಳು ಭವ್ಯ ಗೌಡ ಮತ್ತು ಧನುಷ್ ಗೌಡ. ಗೀತಾ ಧಾರಾವಾಹಿಯ ಒಳ್ಳೆಯ ಕಥೆಯ ಮೂಲಕ ವೀಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ವಿಜಯ್ ಮತ್ತು ಗೀತಾ ನಡುವೆ ನಡೆಯುವ ಪ್ರೀತಿಯ ಸನ್ನಿವೇಶಗಳು, ವಿಜಯ್ ತಾಯಿಯ ಕುತಂತ್ರಿ ಕೆಲಸಗಳು ಇದೆಲ್ಲವೂ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಈ ಧಾರಾವಾಹಿಯ ಕಲಾವಿದರು ಸಹ ದಿನದಿಂದ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಾರೆ. ಗೀತಾ ಧಾರಾವಾಹಿಯ ನಾಯಕಿ ಭವ್ಯ ಗೌಡ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಬೇಡಿಕೆ ಮತ್ತು ಫ್ಯಾನ್ ಬೇಸ್ ಸಹ ಇದೆ.

ಭವ್ಯ ಗೌಡ ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲದವರು. ಚೆನ್ನಾಗಿ ಓದಿಕೊಂಡಿದ್ದ ಈಕೆಗೆ, ಗಗನಸಖಿ ಆಗಬೇಕು ಎಂದು ಆಸೆ ಇತ್ತು, ಅದಕ್ಕಾಗಿ ತರಬೇತಿ ಪಡೆಯಲು ಸಹ ಮುಂದಾಗಿದ್ದರು. ಆದರೆ ಭವ್ಯ ಗೌಡ ತಂದೆ ತಾಯಿಗೆ ತಮ್ಮ ಮಗಳು ನಟನೆಯಲ್ಲಿ ಮುಂದುವರೆಯಬೇಕು ಎನ್ನುವ ಆಸೆ ಇತ್ತು. ಹಾಗಾಗಿ ತಂದೆ ತಾಯಿಯ ಆಸೆ ಪೂರೈಸಲು ಭವ್ಯ ಗೌಡ ಅವರು ನಟನೆಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಭವ್ಯ ಗೌಡ ಅವರು ಮೊದಲಿಗೆ ಟಿಕ್ ಟಾಕ್ ವಿಡಿಯೋ ಗಳ ಮೂಲಕ ಜನಪ್ರಿಯತೆ ಪಡೆದುಕೊಂಡವರು. ಟಿಕ್ ಟಾಕ್ ನಲ್ಲಿ ಇವರು ಮಾಡುತ್ತಿದ್ದ ಹಲವು ವಿಡಿಯೋಗಳು ಭಾರಿ ವೈರಲ್ ಆಗುತ್ತಿದ್ದವು.

ಅದಾದ ಬಳಿಕ ಗೀತಾ ಧಾರಾವಾಹಿಗೆ ಆಡಿಷನ್ ನೀಡಿ, ಸೆಲೆಕ್ಟ್ ಆದರು ಭವ್ಯ ಗೌಡ. ಗೀತಾ ಧಾರಾವಾಹಿಯ ಗೀತಾ ಪಾತ್ರದ ಮೂಲಕ ಜನರಿಗೆ ತುಂಬಾ ಇಷ್ಟವಾದರು, ಅಚ್ಚುಕಟ್ಟಾದ ಅಭಿನಯದ ಮೂಲಕ ದೊಡ್ಡ ಫ್ಯಾನ್ ಬೇಸ್ ಗಳಿಸಿದರು ಭವ್ಯ ಗೌಡ. ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಭವ್ಯ ಗೌಡ ವಿಭಿನ್ನವಾದ ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಅಭಿಮಾನಿಗಳು ಸಹ ಫೋಟೋಸ್ ಗಳಿಗೆ ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ನೀಡುತ್ತಾರೆ.

ಇನ್ನು ಭವ್ಯ ಗೌಡ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಹ ಸಿಕ್ಕಿದೆ. ಈಗಾಗಲೇ ಕಿರುತೆರೆಯಿಂದ ಬೆಳ್ಳಿತೆರೆಗೆ ಸಾಕಷ್ಟು ಕಲಾವಿದೆಯರು ಎಂಟ್ರಿ ಕೊಟ್ಟಿದ್ದಾರೆ. ಇದೀಗ ಭವ್ಯ ಗೌಡ ಅವರು ಸಹ ಅದೇ ಸಾಲಿಗೆ ಸೇರುತ್ತಿದ್ದಾರೆ. ವಿಸ್ಮಯಾ ಗೌಡ ನಿರ್ದೇಶನ ಮಾಡುತ್ತಿರುವ ಡಿಯರ್ ಕಣ್ಮಣಿ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಭವ್ಯ ಗೌಡ. ಈಗಾಗಲೇ ಸಾತ್ವಿಕ ಅವರು ಸಹ ಡಿಯರ್ ಕಣ್ಮಣಿ ಸಿನಿಮಾ ತಂಡ ಸೇರಿಕೊಂಡಿದ್ದು, ಭವ್ಯ ಗೌಡ ಸಹ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎನ್ನುವುದು ಭವ್ಯ ಗೌಡ ಅವರ ಆಸೆಯಾಗಿತ್ತು.

ಇದೀಗ ಭವ್ಯ ಗೌಡ ಅವರ ಕನಸು ಈಗ ನನಸಾಗುತ್ತಿದೆ. ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಭವ್ಯ ಗೌಡ. ಇನ್ನು ಗೀತಾ ಧಾರಾವಾಹಿಯನ್ನು ಹೊರತುಪಡಿಸಿ ಭವ್ಯ ಗೌಡ ಅವರು ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ, ಆದರೆ ಬಿಗ್ ಬಾಸ್ ಕನ್ನಡ ಮಿನಿ ಸೀಸನ್ ನಲ್ಲಿ ಭವ್ಯ ಗೌಡ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮಿನಿ ಸೀಸನ್ ಮೂಲಕ ಭವ್ಯ ಅವರು ನಿಜ ಜೀವನದಲ್ಲಿ ಹೀಗಿರುತ್ತಾರೆ ಎನ್ನುವ ವಿಚಾರ ವೀಕ್ಷಕರಿಗೆ ಮತ್ತು ಭವ್ಯ ಗೌಡ ಅವರ ಅಭಿಮಾನಿಗಳಿಗೆ ಗೊತ್ತಾಗಿತ್ತು. ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಭವ್ಯ ಗೌಡ ಅವರು ಒಂದು ವಿಚಾರ ತಿಳಿಸಿದ್ದು, ಎಲ್ಲರಿಗೂ ಶಾಕ್ ನೀಡಿತ್ತು..

ಭವ್ಯ ಗೌಡ ಅವರೇ ಹೇಳಿದ ಪ್ರಕಾರ, ಗೀತಾ ಧಾರಾವಾಹಿಯಲ್ಲಿ ಇದುವರೆಗೂ ಒಂದು ಸಾರಿ ಬಳಸಿದ ಕಾಸ್ಟ್ಯೂಮ್ ಅನ್ನು ಮತ್ತೆ ಬಳಸಿಲ್ಲವಂತೆ ಭವ್ಯ. “ಇದುವರೆಗೂ 300 ಎಪಿಸೋಡ್ ಚಿತ್ರೀಕರಣ ಮಾಡಿದ್ದಾರೆ. ನನ್ನ ಹತ್ತಿರ ಈಗಾಗಲೇ 3000 ಬಟ್ಟೆಗಳಿವೆ. ಮನೆ ತುಂಬಾ ಬಟ್ಟೆಗಳೇ ಕಾಣಿಸುತ್ತಿದೆ..” ಎಂದು ಹೇಳಿದ್ದರು ಭವ್ಯ ಗೌಡ. ಈ ಬಟ್ಟೆಯ ವಿಚಾರ ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮೂರು ಸಾವಿರ ಬಟ್ಟೆಗಳೇ ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.