ಗಟ್ಟಿಮೇಳ ಧಾರಾವಾಹಿಯಿಂದ ಹೊರ ಬಂದರಾ ವೇದಾಂತ್..

ಸದ್ಯ ಕೆಲ ವಾರಗಳಿಂದ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿದ್ದ ಗಟ್ಟಿಮೇಳ ಇದೀಗ ಕಳೆದ ವಾರ ರೇಟಿಂಗ್ ನಲ್ಲಿ ಕೊಂಚ ಕಡಿಮೆಯಾಗಿ ಎರಡನೇ ಸ್ಥಾನಕ್ಕೆ ಇಳಿದಿದೆ.. ಮತ್ತೆ ಜೊತೆಜೊತೆಯಲಿ ಮೊದಲ ಸ್ಥಾನಕ್ಕೆ ಮರಳಿದೆ.. ಆದರೀಗ ಗಟ್ಟಿಮೇಳ ಧಾರಾವಾಹಿಯಿಂದ ವೇದಾಂತ್ ಪಾತ್ರಧಾರಿ ಹೊರ ಬಂದಿದ್ದಾರ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದ್ದು ಅಸಲಿ ಕತೆ ಇಲ್ಲಿದೆ ನೋಡಿ..

ಸದ್ಯ ಕಿರುತೆರೆ ಎಂಬುದು ಮಹಿಳೆಯರಿಗೆ ಮಾತ್ರವಲ್ಲದೇ ಮನೆಮಂದಿಗೆಲ್ಲಾ ಮನರಂಜನೆಯ ಏಕೈಕ ದಾರಿಯಾಗಿದೆ.. ಅತ್ತ ಯಾವುದೇ ಸಿನಿಮಾ ಥಿಯೇಟರ್ ಗಳು ಇನ್ನು ತೆರೆದಿಲ್ಲ.. ತೆರೆದರೂ ಸಹ ಕೊರೊನಾ ಭಯದಿಂದ ಮುಂಚಿನಂತೆ ಸಂಪೂರ್ಣ ಥಿಯೇಟರ್ ಭರ್ತಿ ಆಗುವುದು ಸಹ ಅನುಮಾನವಾಗಿದೆ..

ಇನ್ನು ಇತ್ತ ಕಿರುತೆರೆಯಲ್ಲಿಯೂ ಸಹ ಕೆಲ ಧಾರಾವಾಹಿಗಳ ಪ್ರಸಾರ ಸಂಪೂರ್ಣವಾಗಿ ನಿಲ್ಲಿಸಿದ್ದು, ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು‌ ಕೈಗೊಂಡು ಕೆಲ ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ.. ಇನ್ನು ಕನ್ನಡದ ಧಾರಾವಾಹಿಗಳ ಜೊತೆಗೆ ಡಬ್ಬಿಂಗ್ ಧಾರಾವಾಹಿಗಳು ಸಹ ಕನ್ನಡ ಕಿರುತೆರೆಯನ್ನು ಆವರಿಸಿದ್ದು ಮಹಾಭಾರತ, ರಾಧಾ ಕೃಷ್ಣ ದಂತಹ ಪೌರಾಣಿಕ, ಹಾಗೂ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಮಹಾನಾಯಕ ಡಬ್ಬಿಂಗ್ ಧಾರಾವಾಹಿಯೂ ಸಹ ಒಳ್ಳೆಯ ಟಿ ಆರ್ ಪಿ ಪಡೆದುಕೊಳ್ಳುತ್ತಿರುವುದು ಜನರು ಡಬ್ಬಿಂಗ್ ಧಾರಾವಾಹಿಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಂತೆ ಕಾಣುತ್ತಿದ್ದು, ಇದರಿಂದ ಕನ್ನಡ ಕಲಾವಿದರಿಗೆ ಅವಕಾಶಗಳು ಕಡಿಮೆಯಾಗಿರುವುದು ಅಸಮಾಧಾನವನ್ನು ಉಂಟು‌ ಮಾಡಿರುವುದು ಸುಳ್ಳಲ್ಲ..

ಇನ್ನು ಇವೆಲ್ಲವನ್ನು ಹೊರತು ಪಡಿಸಿದರೆ ಸದ್ಯ ಕಿರುತೆರೆ ಸಂಬಂಧಪಟ್ಟಂತೆ ಹರಿದಾಡುತ್ತಿರುವ ಸುದ್ದಿ ಎಂದರೆ ಅದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರಾವಾಹಿಯಿಂದ ವೇದಾಂತ್ ಪಾತ್ರಧಾರಿ ರಕ್ಷ್ ಅವರು ಹೊರ ಬಂದರಾ ಎಂಬ ಮಾತು.. ಹೌದು ಗಟ್ಟಿಮೇಳ ಧಾರಾವಾಹಿ ಕೆಲ ವಾರಗಳಿಂದ ನಂಬರ್ ಒನ್ ಪಟ್ಟದಲ್ಲಿತ್ತು.. ಇದೀಗ ಕಳೆದ ವಾರ ಮತ್ತೆ ಜೊತೆಜೊತೆಯಲಿ ಧಾರಾವಾಹಿ ಮತ್ತೆ ನಂಬರ್ ಒನ್ ಆಗಿದ್ದು, ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ.‌.. ಇನ್ನು ಕತೆಯ ವಿಚಾರವಾಗಿ ಸದ್ಯ ಧಾರಾವಾಹಿಯಲ್ಲಿ ವೇದಾಂತ್ ಯಾವುದೇ ಸಂದರ್ಭ ಇಲ್ಲದಿದ್ದರೂ ಆಸ್ಟ್ರೇಲಿಯಾಗೆ ಹೋಗಿದ್ದಾರೆ ಎಂದು ತೋರಲಾಗಿದೆ.. ಅತ್ತ ಆಸ್ಟ್ರೇಲಿಯಾಗೆ ಹೋಗುವ ಯಾವ ಸನ್ನಿವೇಶವನ್ನು ಚಿತ್ರೀಕರಿಸಿಲ್ಲ.. ಜೊತೆಗೆ ಯಾವುದಾದರೂ ಪಾತ್ರವನ್ನು ಬದಲಿಸಬೇಕಾದಲ್ಲಿ ಈ ರೀತಿ ಬೇರೆ ದೇಶಗಳಿಗೆ ಹೋದ ಸನ್ನಿವೇಶಗಳನ್ನು ತೋರಿಸುವುದನ್ನು ಬಹಳಷ್ಟು ಧಾರಾವಾಹಿಗಳಲ್ಲಿ ಬಳಸಲಾಗಿದೆ.. ಅದೇ ರೀತಿ ಗಟ್ಟಿಮೇಳದಿಂದ ವೇದಾಂತ್ ಹೊರಬಂದರಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ‌ ಮೂಡಿದ್ದು ಸಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ..

ಆದರೆ ವಾಸ್ತವ ಬೇರೆಯೇ ಇದೆ.. ಹೌದು ವೇದಾಂತ್ ಪಾತ್ರದಿಂದ ನಟ ರಕ್ಷ್ ಅವರು ಹೊರ ಬಂದಿಲ್ಲ.. ಕತೆಯಲ್ಲಿ‌ ಕೊಂಚ ತಿರುವು ಕೊಟ್ಟಿದ್ದು ಮುಂಬರುವ ದಿನಗಳಲ್ಲಿ ವೇದಾಂತ್ ಎಲ್ಲಿಗೆ ಹೋಗಿದ್ದಾರೆಂದು ತಿಳಿಯಲಿದೆ.. ಆದರೆ ವೇದಾಂತ್ ತಾಯಿ ಸುಹಾಸಿನಿ ಪಾತ್ರದ ಬದಲಾವಣೆಯಾಗಿದ್ದು ಮತ್ತೊಬ್ಬ ನಟಿ ಆ ಜಾಗಕ್ಕೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ..