ಗಟ್ಟಿಮೇಳ ಧಾರಾವಾಹಿಯ ನಟಿ ಅಮೂಲ್ಯ ನಿಜಕ್ಕೂ ಯಾರು ಗೊತ್ತಾ.. ಶಾಕ್ ಆಗ್ತೀರಾ..

ಕನ್ನಡ ಕಿರುತೆರೆಯಲ್ಲಿ ಸಧ್ಯ ಕಳೆದ ಕೆಲ ತಿಂಗಳುಗಳಿಂದ ನಂಬರ್ ಒನ್ ಪಟ್ಟದಲ್ಲಿರುವ ಗಟ್ಟಿಮೇಳ ಧಾರಾವಾಹಿ ಯಶಸ್ವಿಯಾಗಿ ತನ್ನ ಮೂರು ವರ್ಷಗಳ ಜರ್ನಿಯನ್ನು ಪೂರೈಸಿಕೊಂಡು ಮುಂದೆ ಸಾಗುತ್ತಿದೆ.. ಕಳೆದ ಮೂರು ವರ್ಷಗಳಿಂದಲೂ ಕನ್ನಡದ ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಗಿದ್ದು ಕಳೆದ ಕೆಲ ತಿಂಗಳುಗಳಿಂದ ತನ್ನ ರೇಟಿಂಗ್ ಹೆಚ್ಚಿಸಿಕೊಂಡು ನಂಬರ್ ಧಾರಾವಾಹಿಯಾಗಿದೆ.. ಇನ್ನು ಸಧ್ಯ ಧಾರಾವಾಹಿ ಕಳೆದ ಮುಇರು ವರ್ಷದಿಂದ ಸಾಕಷ್ಟು ತಿರುವುಗಳನ್ನು ಪಡೆದಿದ್ದು.. ಆರತಿ ವಿಕ್ಕಿ ಕಲ್ಯಾಣ.. ವೇದಾಂತ್ ಅಮೂಲ್ಯ ಪ್ರೀತಿ ಕತೆ..

ವೇದಾಂತ್ ಅಮೂಲ್ಯ ಮದುವೆಯ ಸಂಚಿಕೆಗಳು.. ನಂತರದಲ್ಲಿ ಧೃವ ಹಾಗೂ ಅದಿತಿಯ ಪ್ರೇಮ ಸಂಚಿಕೆಗಳು.. ಇನ್ನೂ ಸಧ್ಯ ವಸಿಷ್ಟ ಕುಡಿಗಳ ತಾಯಿಯ ಹುಡುಕುವ ಸಂಚಿಕೆಗಳು ಪ್ರಸಾರವಾಗುತ್ತಿದ್ದು ತನ್ನ ರೋಚಕತೆಯನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದೆ.. ಇನ್ನು ಈ ಧಾರಾವಾಹಿ ಯಶಸ್ಸು ಪಡೆದದ್ದು ಮಾತ್ರವಲ್ಲ ಈ ಧಾರಾವಾಹಿಯ ಮೂಲಕ ಕಲಾವಿದರುಗಳು ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದು ಗಟ್ಟಿಮೇಳ ಧಾರಾವಾಹಿಯ ಮೂಲಕವೇ ಗುರುತಿಸಿಕೊಳ್ಳುವಂತಾಯಿತು..

ಇತ್ತ ಪುಟ್ಟ ಗೌರಿ ಮದುವೆ ಧಾರಾವಾಹಿಯಿಂದ ಬಂದ ನಟ ರಕ್ಷ್ ವೇದಾಂತ್ ಆಗಿ ಮಿಂಚಿದರೆ ಅತ್ತ ನಟಿ ನಿಶಾ ಅಮೂಲ್ಯ ಆಗಿ ಕಾಣಿಸಿಕೊಂಡರು.. ಇಬ್ಬರೂ ಸಹ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾದರು.. ಇನ್ನು ಧಾರಾವಾಹಿಯಲ್ಲಿ ಅಮೂಲ್ಯ ತಂದೆ ತಾಯಿ.. ಇತ್ತ ಕಾಂತ.. ವಿಕ್ಕಿ ಆರತಿ ಹೀಗ್ರ್ ಪ್ರತಿಯೊಬ್ಬ ಕಲಾವಿದರಿಗೂ ಪ್ರಾಮುಖ್ಯತೆ ನೀಡಿ ಧಾರಾವಾಹಿ ಎಲ್ಲರಿಗೂ ಇಷ್ಟವಾಗುವಂತೆ ನೋಡಿಕೊಳ್ಳಲಾಯಿತು.. ಇನ್ನು ಈ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ ಅಮೂಲ್ಯ ಪಾತ್ರದಾರಿ ನಟಿ ನಿಶಾ ನಿಜಕ್ಕೂ ಯಾರು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ..

ಹೌದು ನಿಶಾ ಈ ಮೊದಲೂ ಸಹ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಹಿಡುಗಿ.. ಅದರಲ್ಲೂ ಈಕೆಯ ವಯಸ್ಸು ಕೇಳಿದರೆ ಆಶ್ಚರ್ಯವಾಗಬಹುದು.. ಹೌದು ನಿಶಾ ಅವರ ತಂದೆ ಹೆಸರು ರಾಮಕೃಷ್ಣನ್.. ಇವರು ಮೂಲತಃ ಹಾಸನದವರಾದರೂ ಸಹ ಮಂಡ್ಯ ರಮೇಶ್ ಅವರ ಜೊತೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.. ಇನ್ನು ಧಾರಾವಾಹಿಯಲ್ಲಿ ಬಹಳ ಪ್ರಬುದ್ಧರಾಗಿ ಕಾಣಿಸಿಕೊಳ್ಳುವ ನಟಿ ನಿಶಾ ಅವರು ಗಟ್ಟಿ ಮೇಳ ಧಾರಾವಾಹಿ ಶುರು ಮಾಡಿದಾಗ ಅವರ ವಯಸ್ಸು ಕೇವಲ ಹತ್ತೊಂಭತ್ತು.. ಹೌದು ನಿಶಾ ಅವರು ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.. ಅವರಿಗೆ ಈಗ ಕೇವಲ ಇಪ್ಪತ್ತೆರೆಡು ವರ್ಷ ವಯಸ್ಸು.. ಆದರೆ ಈಕೆ ತನ್ನ ಹನ್ನೆರೆಡನೇ ವರ್ಷಕ್ಕೆ ಕಿರುತೆರೆಗೆ ಕಾಲಿಟ್ಟಿದ್ದು ಚಿಂಟೂ ಟಿವಿಯಲ್ಲಿ ಸತತ ನಾಲ್ಕು ವರ್ಷಗಳ ಕಾಲ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ..

ಹೌದು ತನ್ನ ಹನ್ನೆರಡನೇ ವರ್ಷದಲ್ಲಿ ನಿರೂಪಕಿಯಾಗಿ ಕಾಲಿಟ್ಟ ನಿಶಾ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಅಷ್ಟೇ ಅಲ್ಲದೇ ಆ ವಯಸ್ಸಿಗೇ ಅವರು ತಮ್ಮ ಕಾರ್ಯಕ್ರಮವನ್ನು ತಾವೇ ಪ್ಲಾನ್ ಮಾಡಿಕೊಳ್ಳುತ್ತಿದ್ದರಂತೆ.. ಆನಂತರದಲ್ಲಿ ಸರ್ವ ಮಂಗಳ‌ಮಾಂಗಲ್ಯೇ ಧಾರಾವಾಹಿಯಲ್ಲಿ ನಟ ಚಂದನ್ ಅವರ ತಂಗಿಯಾಗಿ ಅಭಿನಯಿಸಿದ ನಿಶಾ ಗಟ್ಟಿಮೇಳ ಧಾರಾವಾಹಿಗೆ ನಾಯಕಿಯಾಗಿ ಆಯ್ಕೆಯಾದರು..

ನಂತರದಲ್ಲಿ ಎಲ್ಲ ನೆಚ್ವಿನ ಅಮ್ಮು ಆಗಿ ಮಿಂಚಿದರು.. ಅಷ್ಟೇ ಅಲ್ಲದೇ ಕಳೆದ ವರ್ಷವಷ್ಟೇ ತೆಲುಗು ಕಿರುತೆರೆಗೂ ನಟಿ ನಿಶಾ ರವಿಶಕೃಷ್ಣನ್ ಕಾಲಿಟ್ಟಿದ್ದು ಅಲ್ಲಿಯೂ ಸಹ ಖ್ಯಾತಿ ಗಳಿಸಿದ್ದಾರೆ.. ಎರಡೂ ಭಾಷೆಗಳಲ್ಲಿಯೂ ಅಭಿನಯಿಸುತ್ತಾ ಎರಡೂ ಕಡೆ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ನಿಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಇದ್ದು ಅಭಿಮಾನಿಗಳೊಂಡಿಗೆ ಆಗಾಗ ಮಾತನಾಡುತ್ತಿರುತ್ತಾರೆ.. ಇನ್ನೂ ರೀಲ್ಸ್ ಮಾಡೋದ್ರಲ್ಲಿ‌ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಿಶಾ ಆಗಾಗ ರೀಲ್ಸ್ ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆನ್ನಬಹುದು.. ಒಟ್ಟಿನಲ್ಲಿ ಚಿಕ್ಕ ವಯಸ್ಸಿಗೆ ಕಿರುತೆರೆಗೆ ಕಾಲಿಟ್ಟು ಫೇಮಸ್ ಆಗಿ ಬ್ಯುಸಿ ಆಗಿರುವ ನಿಶಾ ಅವರಿಗೆ ಶುಭವಾಗಲಿ..