ಇಸ್ಮಾರ್ಟ್ ಜೋಡಿ ಶೋನಲ್ಲಿ ಸ್ಟಾರ್ ಜೋಡಿಗಳ ದಂಡು.. ಕಿರುತೆರೆಯ ನವದಂಪತಿಯೂ ಹಾಜರ್..

ಒಂದು ಕುರಿ ಹಳ್ಳಕ್ಕೆ ಬಿತ್ತು ಎಂದರೆ ಸಾಲು ಸಾಲು ಕುರಿಗಳು ಹಳ್ಳಕ್ಕೆ ಬೀಳ್ತಾವೆ ಅನ್ನೋ ಗಾದೆ ಮಾತು ಹಳೆಯದಾದರೂ ಸರಿ ಈಗಲೂ ಆ ಮಾತು ಮಾತ್ರ ಅನ್ವಯಿಸುತ್ತದೆ.. ಅದೇ ರೀತಿ ಕಿರುತೆರೆಯಲ್ಲಿ ಒಂದು ವಾಹಿನಿಯಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ಹಿಟ್ ಆದರೆ ಸಾಕು ಅದೇ ರೀತಿಯ ಕಾರ್ಯಕ್ರಮಗಳನ್ನು ನಾ ಮುಂದು ತಾ ಮುಂದು ಎಂದು ವಾಹಿನಿಗಳು ನೀಡುತ್ತದೆ.. ಅದೇ ರೀತಿ ಕಲರ್ಸ್ ಕನ್ನಡದಲ್ಲಿ ಕಳೆದ ವರ್ಷ ಯಶಸ್ವಿಯಾದ ಶೋ ಎಂದರೆ ಅದು ರಾಜಾ ರಾಣಿ.. ದಂಪತಿಗಳ ಶೋ ಆಗಿದ್ದರಿಂದ ಅದು ಜನರ ಮನಸ್ಸಿಗೆ ಬಹಳ ಹತ್ತಿರವಾಯ್ತು.. ಶೋ ದೊಡ್ಡ ಮಟ್ಟದಲ್ಲಿ ಯಶಸ್ವಿಯೂ ಆಯಿತು.. ಅದೇ ಕಾರಣಕ್ಕೆ ಕೆಲ ತಿಂಗಳ ಹಿಂದೆ ರಾಜಾ ರಾಣಿ 2 ನ್ನು ಕಲರ್ಸ್ ಕನ್ನಡ ವಾಹಿನಿ ಆರಂಭಿಸಿದರೆ ಇತ್ತ ಜೀ ಕನ್ನಡದಲ್ಲಿ ಜೋಡಿ ನಂಬರ್ ಒನ್ ಶೋ ಆರಂಭವಾಯಿತು..

ಅದೆರೆಡೂ ಹೇಗೋ ನಾನು ನೀನು ಎಂದು ರೇಟಿಂಗ್ ಪಡೆಯುವ ಸಮಯದಲ್ಲಿ ಇತ್ತ‌ ಸ್ಟಾರ್ ಸುವರ್ಣ ವಾಹಿನಿಯವರು ನಾನೂ ಮಾಡ್ತೀನಿ ಎಂದು ಇದೀಗ ಇಸ್ಮಾರ್ಟ್ ಜೋಡಿ ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ.. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು ಕುತೂಹಲ ಮೂಡಿಸಿದೆ ಎನ್ನಬಹುದು.. ಇನ್ನು ಈ ಶೋಗೆ ಬರುತ್ತಿರುವ ಸ್ಟಾರ್ ಜೋಡಿಗಳು ಯಾರು ಎಂಬ ಕುತೂಹಲವೂ ಇದ್ದೇ ಇದೆ.. ಹೌದು ಕಿರುತೆರೆಯಲ್ಲಿ ಮೂರು ತಿಂಗಳಿಗೊಂದು ಹೊಸ ಹೊಸ ರಿಯಾಲಿಟಿ ಶೋಗಳು ಪ್ರಾರಂಭವಾಗಿತ್ತವೆ. ಅದರಲ್ಲೂ ಈಗ ಸೆಲಬ್ರಿಟಿ ಜೋಡಿಗಳ ರಿಯಾಲಿಟಿ ಶೋಗೆ ಡಿಮ್ಯಾಂಡ್ ಶುರುವಾಗಿದೆ.

ಇದೇ ಶನಿವಾರ ಹಾಗೂ ಭಾನುವಾರದಿಂದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಶುರುವಾಗಲಿದೆ. ರಾತ್ರಿ 9 ಗಂಟೆಗೆ ಈ ಶೋ ಮೂಡಿಬರಲಿದ್ದು, ಶೋ ನೋಡಲು ಸ್ಟಾರ್‌ ಸುವರ್ಣ ಪ್ರೇಕ್ಷಕರು ಕಾಯುತ್ತಿದ್ದಾರೆ.. ಇನ್ನು ಇತ್ತ ಶೋನಲ್ಲಿ‌ ಸಾಕಷ್ಟು ಸ್ಟಾರ್ ಜೋಡಿಗಳು ಪಾಲ್ಗೊಳ್ಳುತ್ತಿದ್ದು ಶೋ ರಂಗೇರಲಿದೆ.. ಹೌದು ಅದ್ಧೂರಿ ಸೆಟ್‌ನಲ್ಲಿ ಇಸ್ಮಾರ್ಟ್ ಜೋಡಿ ಶೋ ನಡೆಯಲಿದೆ.. ಸ್ಟಾರ್‌ ಸುವರ್ಣ ವಾಹಿನಿಯ ಹೊಸ ರಿಯಾಲಿಟಿ ಶೋ ಇಸ್ಮಾರ್ಟ್‌ ಜೋಡಿ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಹೊಸ ಕಾನ್ಸೆಪ್ಟ್‌ ಜೊತೆಗೆ ಹೊಸ ಸೆಲಬ್ರಿಟಿಗಳನ್ನು ಈ ಶೋನಲ್ಲಿ ಪರಿಚಯಿಸಲಿರುವ ಸ್ಟಾರ್‌ ಸುವರ್ಣ, ಜೋಡಿಹಕ್ಕಿಗಳನ್ನು ಆಡಿಸಿ, ನಲಿಸಿ, ಕುಣಿಸಿ, ನಗಿಸಿ ಪ್ರೇಕ್ಷಕರನ್ನು ರಂಜಿಸಲಿದೆಯಂತೆ. ಇದೊಂದು ರೊಮ್ಯಾಂಟಿಕ್‌ ಶೋ ಆಗಿದ್ದು, ಅದ್ಧೂರಿ ಸೆಟ್‌ ನಲ್ಲಿ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ.. ಸೆಲೆಬ್ರಿಟಿ ಜೋಡಿಗಳು ಕೂಡ ಸಜ್ಜಾಗಿದ್ದಾರೆ..

ಅದಾಗಲೇ ಕೆಲ ಜೋಡಿಗಳ ಪ್ರೋಮೋಗಳನ್ನು ಬಿಡುಗಡೆ ಮಾಡಲಾಗಿದ್ದು ಬಿಟ್ಟಿರುವ ಪ್ರೋಮೋಗಳ ಪ್ರಕಾರ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ನಲ್ಲಿ ನಟಿ ದಿಶಾ ಹಾಗೂ ಪತಿ ಶಶಾಂಕ್ ಕಾಣಿಸಿಕೊಂಡಿದ್ದಾರೆ. ಇನ್ನು ಅರ್ಧಾಂಗಿ ಧಾರಾವಾಹಿಯ ನಟಿ ಅನಘಾ ಮತ್ತು ಅವರ ಪತಿ ಸಾಗರ್.. ಹರಹರ ಮಹದೇವ ಧಾರಾವಾಹಿಯ ನಟ ವಿನಯ್ ಮತ್ತು ಪತ್ನಿ ಅಕ್ಷತಾ, ಜೊತೆಗೆ ಹಿರಿಯ ನಟ ಜೈಜಗದೀಶ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್ ಕೂಡ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಹತ್ತು ಜೋಡಿಗಳು ಈ ಶೋನಲ್ಲಿ ಭಾಗಿಯಾಗಲಿದ್ದಾರೆ..

ಒಟ್ಟಿನಲ್ಲಿ ಸೂಪರ್ ಮಿನಿಟ್ ಶೋ ಮೂಲಕ ಹೆಸರು ಮಾಡಿದ ಗಣೇಶ್ ಅವರು‌ ನಂತರ ಜೀ ಕನ್ನಡದಲ್ಲಿ ಗೋಲ್ಡನ್ ಗ್ಯಾಂಗ್ ಶೋ ನಡೆಸಿಕೊಟ್ಟರೂ ಸಹ ಅದು ಅಷ್ಟಾಗಿ ಯಶಸ್ಸು ನೀಡಲಿಲ್ಲ.. ಆ ಕಾರಣಕ್ಕೆ ಆ ಶೋವನ್ನು ಕೆಲವೇ ಸಂಚಿಕೆಗಳಿಗೆ ಸೀಮಿತಗೊಳಿಸಿ ಮುಕ್ತಾಯ ಮಾಡಲಾಯಿತು. ಆದರೆ ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಗಣೇಶ್ ಅವರು‌ ಮತ್ತೆ ಕಂಬ್ಯಾಕ್ ಮಾಡಿದ್ದು ಜೋಡಿಗಳ ಜೊತೆ ನಿರೂಪಣೆ ಮಾಡುತ್ತಾ ಮೋಡಿ ಮಾಡುವರಾ ಕಾದು ನೋಡಬೇಕಿದೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514