ಹೊಲ ಊಳುವಾಗ ರೈತನಿಗೆ ಸಿಕ್ತು 2 ಮಡಿಕೆ ಚಿನ್ನ.. ಸಿಕ್ಕ ತಕ್ಷಣ ಚಿನ್ನವನ್ನು ಏನು ಮಾಡಿದ್ದಾರೆ ಗೊತ್ತಾ?

ರೈತನೊಬ್ಬ ತನ್ನ ಹೊಲ ಊಳುವ ಸಮಯದಲ್ಲಿ ಎರಡು ಮಡಕೆಯಷ್ಟು ಚಿನ್ನ ಬೆಳ್ಳಿ ಸಿಕ್ಕು ಆಶ್ಚರ್ಯಗೊಂಡಿರುವ ಘಟನೆ ನಿನ್ನೆ ನಡೆದಿದೆ.. ಹೌದು ಇನ್ನೇನು‌ ಮುಂಗಾರು ಶುರು..‌ ಹೊಲ ಉತ್ತು ಹದ ಮಾಡುವ ಸಲುವಾಗಿ ರೈತನೊಬ್ಬ ಹೊಲ ಊಳಲು ಮುಂದಾಗಿದ್ದಾನೆ.. ಆದರೆ ಆ ಸಮಯದಲ್ಲಿ ಎರಡು ಮಡಿಕೆ ಸಿಕ್ಕಿದ್ದು, ಆ ಮಡಿಕೆಗಳನ್ನು ತೆರೆದು ನೋಡಿದಾಕ್ಷಣ ಅದರ ತುಂಬಾ ಚಿನ್ನದ ಸರಗಳು ಹಾಗೂ ಬೆಳ್ಳಿಯ ಸರಗಳು ಸಿಕ್ಕಿದೆ..

ತೆಲಂಗಾಣದ ವಿಕಾರಬಾದ್ ಜಿಲ್ಲೆಯ ಸುಲ್ತಾನ್ ಪುರ ಎಂಬಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ರೈತ ಮೊಹಮ್ಮದ್ ಸಿದ್ದಿಕ್ಕಿ ಎಂಬಾತನಿಗೆ ಈ ಚಿನ್ನ ಬೆಳ್ಳಿ ತುಂಬಿದ ಮಡಕೆಗಳು ಸಿಕ್ಕಿವೆ… ಎರಡು ವರ್ಷದ ಹಿಂದೆ ಸಿದ್ದಿಕಿ ಈ ಜಮೀನನ್ನು ಖರೀದಿ ಮಾಡಿದ್ದರು.. ಆದರೆ ಇಷ್ಟು ದಿನ ಯಾವುದೇ ಈ ರೀತಿಯ ವಸ್ತುಗಳು ಸಿಕ್ಕಿರಲಿಲ್ಲ.. ಇಂದು ಉಳುಮೆ ಮಾಡುವಾಗ ಮಡಿಕೆ ಸಿಕ್ಕಿದ್ದು, ಅದನ್ನು ತೆರೆದು ನೋಡಿದಾಗ 25 ಬಗೆಯ ಚಿನ್ನದ ಸರಗಳು ಸಿಕ್ಕಿದ್ದು ರೈತ ಆಶ್ಚರ್ಯಗೊಂಡಿದ್ದಾನೆ..

ಆದರೆ ಚಿನ್ನ ಬೆಳ್ಳಿ ಸಿಕ್ಕ ತಕ್ಷಣ ಯಾವುದನ್ನೂ ಮನೆಗೆ ತೆಗೆದುಕೊಂಡು ಹೋಗದೇ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆಯವರು ಚಿನ್ನವನ್ನು ಪರಿಶೀಲಿಸಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ..

ಆದರೆ ಚಿನ್ನ ಬೆಳ್ಳಿ ಸಿಕ್ಕಿರುವ ಜಾಗ ಯಾವ ರಾಜ ಮನೆತನದ ಇತಿಹಾಸವೂ ಇಲ್ಲದ ಜಾಗವಾಗಿದೆ.‌ ಈ ಬಗ್ಗೆ ಹೆಚ್ಚು ಪರಿಶೀಲನೆ ನಡೆಸಲು ಪುರಾತತ್ವ ಇಲಾಖೆಗೆ ತಿಳಿಸಲಾಗಿದೆ.. ಯಾವುದೇ ದುರಾಸೆ ಪಟ್ಟು ತನ್ನ ಬಳಿಯೇ ಇಟ್ಟುಕೊಳ್ಳದೇ ಅದನ್ನು ಪೊಲೀಸರಿಗೆ ಒಪ್ಪಿಸಿದ ರೈತನ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ಸದ್ಯ ಸರಗಳನ್ನು ಪರಿಶೀಲನೆಗೆ ಲ್ಯಾಬ್ ಗೆ ಕಳುಹಿಸಿದ್ದಾರೆ..