ಈ ರೈತನ ಟೆಕ್ನಿಕ್ ವಿದೇಶಗಳಲ್ಲೂ ವೈರಲ್ ಆಗಿದೆ… ಅದು ಯಾವುದು ಗೊತ್ತಾ?

ರೈತರು ಲಕ್ಷಗಟ್ಟಲೆ ಹಣ ಸುರಿಸಿ,ತಿಂಗಳು ಗಟ್ಟಲೆ ಬೆವರು ಸುರಿಸಿ ಬೆಳೆಯಲ್ಲು ಕಟಾವುವರೆಗು ತರುತ್ತಾರೆ. ಆದರೆ ಏಕಾಏಕಿ‌ ದಾಳಿಮಾಡುವ ಆಕ್ರಮಣಕಾರಿ ಕೋತಿಗಳು ಗುಂಪು ಬೆಳೆಯನ್ನು ಹಾಳು ಮಾಡುತ್ತದೆ.ಆ ಬೆಳೆಯನ್ನು ಕಚ್ಚಿ ತಿಂದು, ತುಳಿದು ನಾಶ ಮಾಡಿಬಿಡುತ್ತವೆ.‌ಈ ಸ್ಥಿತಿಯನ್ನು ಎದುರಿಸುವ ರೈತ ಕೋತಿಗಳ ಮೇಲೆ ಕಂಪ್ಲೆಂಟ್ ಕೊಡೋಕು ಆಗದೆ, ಅವುಗಳಿಗು ಪಾಠ ಕಲಿಸಲು ಆಗದೇ ಸಂದಿಗ್ಧ ಸ್ಥಿತಿಯಲ್ಲಿ ರೈತ ಸಿಲುಕಿ‌ ಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶ್ರೀಕಾಂತ ಎಂಬಾತ ಹೇಳಿ ಕೇಳಿ‌ ಇದು ಮಲೆನಾಡು ಇಲ್ಲಿ ಕೋತಿಗಳ ಹಾವಳಿ ಜಾಸ್ತಿಯೇ ಇರುತ್ತೆ. ಅದಕ್ಕೋಸ್ಕರ ಶ್ರೀಕಾಂತ್ ತನ್ನ ಆಪ್ತ ಸ್ನೇಹಿತನ ಬಳಿ‌ ಇದಕ್ಕೆ ಪರಿಹಾರ ಕೇಳಿದಾಗ ಅವನು ಒಂದು ಒಳ್ಳೆಯ ಸಲಹೆ ನೀಡುತ್ತಾನೆ.

ಬೆಳೆಯ ನಾಶವನ್ನು ರಕ್ಷಿಸಲು ಒಂದು ದೊಡ್ಡ ಟೈಗರ್ ಡಾಲ್ ಅನ್ನು ತರಿಸಿದ, ಅದನ್ನು ತೋಟದಲ್ಲಿ ಇಟ್ಟನು. ಅಲ್ಲಿಗೆ ಬಂದ‌ ಕೋತಿಗಳು ಅದು ನಿಜವಾದ ಕೋತಿಗಳು ಎಂದು ಹೆದರಿ ಅಲ್ಲಿಂದ ಪರಾರಿ ಆದವು. ತದನಂತರ ಅಲ್ಲಿಗೆ ಕೋತಿಗಳು ಬರೋದನ್ನೇ ಬಿಟ್ಟವು.