ಆರ್ಥಿಕ ಸಂಕಷ್ಟ.. ಬಿ ಎಂ ಡಬ್ಲ್ಯೂ ಕಾರು ಮಾರಲು ಮುಂದಾದ ಖ್ಯಾತ ಕ್ರೀಡಾಪಟು..

ಈ ಕೊರೊನಾ ಕಾರಣದಿಂದಾಗಿ ಜನಸಾಮಾನ್ಯರ ಜೀವನ ಬೀದಿಗೆ ಬೀಳುತ್ತಿರುವುದು ಎರಡು ತಿಂಗಳಿನ ಹಿಂದೆಯೇ ಶುರುವಾಗಿತ್ತು.. ಆದರೀಗ ಬರುಬರುತ್ತಾ ದೊಡ್ಡ ದೊಡ್ಡ ಕಲಾವಿದರು, ಕ್ರೀಡಾಪಟುಗಳಿಗೂ ಸಹ ಕೊರೊನಾ ಎಫೆಕ್ಟ್ ತಟ್ಟುತ್ತಿದೆ.. ಒಂದು ಕಡೆ ಆರ್ಥಿಕ ಸಂಕಷ್ಟದಿಂದ ಹಲವಾರು ಮಂದಿ ಜೀವ ಕಳೆದುಕೊಂಡ ಘಟನೆಗಳು ಸಹ ನಡೆದಿರುವುದು ನಿಜಕ್ಕೂ ದುರ್ವಿಧಿಯೇ ಸರಿ..

ಇನ್ನು ಇದೀಗ ಖ್ಯಾತ ಓಟಗಾರ್ತಿ ತಮ್ಮ ತರಬೇತಿಯ ವೆಚ್ಛ ಭರಿಸುವ ಸಲುವಾಗಿ ತಮ್ಮ ಬಿ ಎಂ ಡಬ್ಲ್ಯೂ ಕಾರನ್ನು ಮಾರಲು ಮುಂದಾಗಿದ್ದಾರೆ.. ಹೌದು ಅವರು ಮತ್ಯಾರೂ ಅಲ್ಲ 2018 ರಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡು ಬೆಳ್ಳಿಯ ಪದಕ ತಂದ ಓಟಗಾರ್ತಿ ದ್ಯುತಿ ಚಂದ್.. 2020 ರ ಅರ್ಜುನ ಪ್ರಶಸ್ಥಿಗೆ ಆಯ್ಕೆಯಾಗಿರುವ ದ್ಯುತಿ ಚಂದ್ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿ ತಮ್ಮ ಕಾರನ್ನು ಮಾರಲು‌ ಮುಂದಾಗಿದ್ದಾರೆ..

ಹೌದು ಕೊರೊನಾ ಕಾರಣದಿಂದಾಗಿ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಕಳೆದ 4 ತಿಂಗಳನಿಂದ ಬೇರೆ ಉದ್ಯಮದಂತೆ ಕ್ರೀಡಾ ಜಗತ್ತು ಸಹ ಸ್ತಬ್ಧಗೊಂಡಿದೆ. ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳ ಟೂರ್ನಿಗಳು ಸಹ ಮುಂದೂಡಲಾಗಿದೆ.. ಇನ್ನೂ ಕೆಲ ಟೂರ್ನಿಗಳು ರದ್ದು ಕೂಡ ಆಗಿದೆ.. ಈ ವರ್ಷ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕೂಡ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.. ಒಲಂಪಿಕ್ಸ್ ಮುಂದೂಡಿದ್ದರಿಂದ ಕ್ರೀಡಾಪಟುಗಳು ತಮ್ಮ ತಮ್ಮ ತರಬೇತಿಯನ್ನು ಮುಂದಿನ ವರ್ಷದ ವರೆಗೂ ಮುಂದುವರೆಸಲೇ ಬೇಕಿದೆ.. ಇವರ ತರಬೇತಿಗೆ ತಿಂಗಳಿಗೆ ಲಕ್ಷಗಳ ರೀತಿಯಲ್ಲಿ ಖರ್ಚು ಬರುತ್ತದೆ.. ಅದೇ ರೀತಿ ಆ ಖರ್ಚನ್ನಿ ಭರಿಸಲು ದ್ಯುತಿ ಚಂದ್ ಕಾರು ಮಾರಲು ಮುಂದಾಗಿದ್ದರು..

ಇದುವರೆಗೂ ನನ್ನ ಶಿಕ್ಷಣ ಅತ್ಯುತ್ತಮವಾಗಿ ಸಾಗಿದೆ. ಭುವನೇಶ್ವರದಲ್ಲಿ ನಾನು ತರಬೇತಿ ಪಡೆಯುತ್ತಿದ್ದೆ.. ಈಗಾಗಲೇ ಸರ್ಕಾರ ಹಾಗೂ ಪ್ರಯೋಜಕರು ನೀಡಿದ್ದ ಹಣ ಖಾಲಿಯಾಗಿದೆ. ಆದ್ದರಿಂದಲೇ ನನ್ನ ಕಾರನ್ನು ಮಾರಾಟ ಮಾಡಬೇಕೆಂದುಕೊಂಡಿದ್ದೇನೆ ಯಾರಾದರೂ ಖರೀದಿ ಮಾಡುವವರಿದ್ದರೆ ನನಗೆ ಸಂದೇಶ ರವಾನಿಸಿ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದರು.. ಟೋಕಿಯೋ ದಲ್ಲಿ ನಡೆಯಬೇಕಿದ್ದ ಒಲಪಿಂಕ್ ತರಬೇತಿಗಾಗಿ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿತ್ತು. ಕೋಚ್, ಫಿಜಿಯೋಥೆರಪಿಸ್ಟ್, ಡಯಟಿಷಿಯನ್ ಸೇರಿದಂತೆ ತಿಂಗಳಿಗೆ 5 ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಕೊರೊನಾ ಕಾರಣದಿಂದ ಯಾವ ಪ್ರಯೋಜಕರು ಕೂಡ ನನಗಾಗಿ ಖರ್ಚು ಮಾಡಲು ಮುಂದೆ ಬರುತ್ತಿಲ್ಲ.. ಸದ್ಯ ನಾನು ಟೋಕಿಯೋ ಒಲಂಪಿಕ್‍ಗೆ ಸಿದ್ಧವಾಗಲೇಬೇಕಿದೆ.. ಜರ್ಮಿನಿಯಲ್ಲಿ ತರಬೇತಿ ಪಡೆಯಲು, ಫಿಟ್ನೆಸ್ ಕಾಯ್ದುಕೊಳ್ಳಲು ಹಣದ ಅಗತ್ಯವಿದೆ. ಆದ್ದರಿಂದಲೇ ಕಾರು ಮಾರಾಟ ಮಾಡಲು ಮುಂದಾಗಿದ್ದೆ ಎಂದಿದ್ದರು…

ಇವರ ಫೇಸ್ಬುಕ್ ಪೋಸ್ಟ್ ನೋಡಿ ಒಡಿಶಾ ಸರ್ಕಾರ ಇವರ ನೆರವಿಗೆ ಆಗಮಿಸಿದ್ದು ತರಬೇತಿ ವೆಚ್ಛ ಭರಿಸುವುದಾಗಿ ತಿಳಿಸಿದೆ.. ದೊಡ್ದಾ ದೊಡ್ಡವರ ಕತೆಯೇ ಹೀಗಾದರೆ ಊಟಕ್ಕೂ ಕಷ್ಟವಾಗಿರುವ ಜನ ಸಾಮಾನ್ಯರ ಕತೆ ಹೇಳಲಸಾಧ್ಯವಾಗಿದೆ..