ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ..

ನಮ್ಮ ಭಾರತವು ಹಲವು ಸಂಸ್ಕೃತಿಗಳಿಗೆ ಹೆಸರು ವಾಸಿಯಾಗಿದೆ. ಹಿಂದೂ ಧರ್ಮದವರು ಹೆಚ್ಚು ಜನ ಭಾರತದಲ್ಲೇ ವಾಸವಿದ್ದು, ನಮ್ಮ ದೇಶಕ್ಕೆ ಬಹುದೊಡ್ಡ ಇತಿಹಾಸವಿದೆ. ಅಲ್ಲದೇ ನಮ್ಮ ದೇಶದ ಜನರು ಭಾವನೆಗಳಿಗೆ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾರೆ. ಹಿಂದೂ ಧರ್ಮದಲ್ಲಿ ಸತ್ಯಕ್ಕೆ ಬೆಲೆ ಜಾಸ್ತಿ. ಗೌರವ, ಪ್ರೀತಿ, ನ್ಯಾಯ, ಸತ್ಯ, ಭಾವನೆ, ಸಂಬಂಧಗಳಿಗೆ ಹೆಚ್ಚು ಬೆಲೆ ಇದೆ. ನಮ್ಮ ಧರ್ಮದಲ್ಲಿ ಹೇಳುವ ಪ್ರತಿಯೊಂದು ವಿಚಾರದಲ್ಲೂ, ಸಂಪ್ರದಾಯಗಳಲ್ಲೂ ಅದರದ್ದೇ ಆದ ಅರ್ಥಗಳಿರುತ್ತವೆ. ನಮ್ಮ ಸಂಸ್ಕೃತಿ – ಸಂಪ್ರದಾಯಗಳನ್ನು ನಾವು ಗೌರವಿಸಿ ಅದರಂತೆ ನಡೆದುಕೊಂಡರೆ, ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಗಳಿಗೂ ಒಳ್ಳೆಯದಾಗುತ್ತೆ.

ನಮ್ಮ ಹಿರಿಯರು ನಡೆದುಕೊಂಡಿ ಬಂದಿರುವ ರೀತಿಯಲ್ಲೇ ನಾವೂ ನಡೆದರೆ ತುಂಬಾ ಉತ್ತಮ. ಅದರಂತೆ ಆರೋಗ್ಯ, ಆಯುಷ್ಯ, ಸಂಪತ್ತು, ಆಸ್ತಿ, ಐಶ್ವರ್ಯ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಈಗಿನ ಕಾಲದವರು ಹಾಗಲ್ಲ. ಹಳೆಯ ಸಂಪ್ರಾದಯಗಳನ್ನು ಮರೆತು ಪಾಶ್ಚಾತ್ಯರಮತೆ ಬದುಕಲು ಮುಂದಾಗಿದ್ದಾರೆ. ಹಬ್ಬ-ಹರಿದಿನಗಳನ್ನು ಆಚರಿಸುವುದನ್ನೇ ಮರೆತಿದ್ದಾರೆ. ಅದೆಲ್ಲವನ್ನು ಯಾಕೆ ಮಾಡಬೇಕು. ಸುಮ್ಮನೆ ಖರ್ಚು, ಕಷ್ಟ. ಅದಕ್ಕೆಲ್ಲಾ ಈಗ ನಮ್ಮಲ್ಲಿ ಸಮಯವಿಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲದೇ, ಈಗ ಮದುವೆ, ಸಮಾರಂಭಗಳನ್ನು ಈವೆಂಟ್ ಮ್ಯಾನೇಜ್ ಮೆಂಟ್ಗಳಿಗೆ ಒಪ್ಪಿಸಿ ಬಿಡುತ್ತಾರೆ. ಅವರು ಕೇಳಿದಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಒಂದು ಸ್ವಲ್ಪವೂ ಶ್ರಮ ಪಡುವುದೇ ಇಲ್ಲ. ಅದೇ ದಾನ ಮಾಡಿ ಧರ್ಮ ಕಟ್ಟಿಕೊಳ್ಳಿ ಪುಣ್ಯ ಬರುತ್ತೆ ಎಂದರೆ ಮಾತ್ರ ಯಾರೂ ಕೇಳುವುದೇ ಇಲ್ಲ.

ದಾನ ಮಾಡುವುದರಿಂದ ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಪುಣ್ಯ ಬರುತ್ತದೆ. ಅಲ್ಲದೇ, ದಾನ ಮಾಡುವುದು ಒಳ್ಳೆಯ ಕೆಲಸ. ದಾನ ಮಾಡಿದರೆ ದೇವರುಗಳು ಖಷಿ ಪಡುತ್ತಾರೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅಕ್ಕಿ, ಬೆಲ್ಲ, ತೆಂಗಿನಕಾಯಿ, ದಕ್ಷಿಣೆ, ಗೋವುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದಂತೆ. ಆಗೆಲ್ಲಾ ರಾಜ ಮಹಾರಾಜರು ಹಸುಗಳನ್ನು ದಾನ ಮಾಡುತ್ತಿದ್ದರಂತೆ. ಈಗ ಅದೆಲ್ಲಾ ಎಲ್ಲಿ. ಇನ್ನು ದಾನ ಮಾಡುವುದರಲ್ಲಿ ಕೆಲ ವಸ್ತುಗಳನ್ನು ಕೊಡಬಾರದಂತೆ. ಅದರಿಂದ ದಟ್ಟ ಧರಿದ್ರವೂ ಆವರಿಸುತ್ತದೆ ಎನ್ನುತ್ತಾರೆ ನಮ್ಮ ಹಿರಿಯರು. ಅದು ಯಾವ ವಸ್ತುಗಳು ಅಂತ ನೋಡೋಣ ಬನ್ನಿ.

ಮೊದಲಿಗೆ ನಾವು ಹರಿತವಾದ ಚಾಕು, ಕೊಡಲಿ, ಕತ್ತಿಯಂತ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದಂತೆ. ಅವು ನೆಗೆಟಿವ್ ವೈಬ್ಸ್ ಗಳನ್ನು ಹರಡುತ್ತವಂತೆ. ನೀವೂ ಕೂಡ ಇಂತಹ ವಸ್ತುಗಳನ್ನು ದಾನ ಮಾಡಲೇಬೇಡಿ. ಮಾಡಿದರೆ, ನಿಮ್ಮ ಮನೆಯ ಸುಖ-ಶಾಂತಿಯು ಕೆಡುತ್ತದೆ. ನಿಮ್ಮ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಇನ್ನು ಶನಿ ದೋಷ ಇರುವವರು ತೈಲವನ್ನು ದಾನ ಮಾಡಿದರೆ ಒಳ್ಳೆಯದಂತೆ. ನಿಮ್ಮಲ್ಲಿನ ತೈಲ ದೋಷವು ಕಡಿಮೆಯಾಗುತ್ತದೆ ಎನ್ನುತ್ತಾರೆ. ಆದರೆ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ. ಅದೇನೆಂದರೆ, ತೈವೂ ಕ್ಲೀನ್ ಆಗಿ ಇರಬೇಕಂತೆ. ಗಲೀಜ್ ಆಗಿರುವ, ಬಳಸಿರುವ ತೈಲವನ್ನು ದಾನ ಮಾಡಿದರೆ ನಿಮಗೆ ಶನಿ ದೋಷವೂ ಹೆಚ್ಚಾಗುತ್ತದೆ.

ಪ್ಲಾಸ್ಟಿಕ್, ಉಕ್ಕು ಮತ್ತು ಕಬ್ಬಿಣದಿಂದ ತಯಾರಿಸಿದ ಪಾತ್ರಗಳನ್ನು ದಾನ ಮಾಡಬೇಡಿ. ಇವುಗಳನ್ನು ದಾನ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಸುಖ-ಸಂತೋಷವನ್ನೇ ದಾನ ಮಾಡಿದಂತೆ ಆಗುತ್ತದೆಯಂತೆ. ನಿಮ್ಮ ಮನೆಯಲ್ಲಿ ಸುಖ-ಸಂತೋಷ ಹಾಳಾಗುತ್ತದೆ ಎನ್ನುತ್ತಾರೆ. ಇನ್ನು ಪ್ಲಾಸ್ಟಿಕ್ ಪಾತ್ರ ದಾನ ಮಾಡಿದರೆ ನಿಮ್ಮ ಸಂಪತ್ತು ಕುಸಿಯುತ್ತದೆ ಎನ್ನುತ್ತಾರೆ ನಮ್ಮ ಹಿರಿಯರು.ಇನ್ನು ಮನೆಯಲ್ಲಿ ನಿನ್ನೆಯ ಆಹಾರ, ಅಥವಾ ಹಳಸಿದ ಆಹಾರವೇನಾದರೂ ಉಳಿದರೆ ಅದನ್ನು ಪ್ರಾನಿಗಳಿಗೆ ಕೊಟ್ಟುಬಿಡುತ್ತೇವೆ. ಇಲ್ಲವೇ ಹಸಿದವರಿಗೆ ದಾನ ಮಾಡುತ್ತೇವೆ. ಆದರೆ ಹಾಗೆ ಮಾಡುವುದು ಮಹಾಪಾಪವಂತೆ. ಹಳಸಿದ ಮತ್ತು ಹಳೆಯ ಆಹಾರವನ್ನು ದಾನ ಮಾಡಿದರೆ ನಿಮಗೆ ಅನಾರೋಗ್ಯ ಕಾಡುತ್ತದೆಯಂತೆ.

ಇನ್ನು ಪೊರಕೆಯನ್ನು ಮಾತ್ರ ಅಪ್ಪಿ-ತಪ್ಪಿಯೂ ದಾನ ಮಾಡಬೇಡಿ. ಹಾಗೇನಾದರೂ ಪೊರಕೆಯನ್ನು ದಾನ ಮಾಡಿದರೆ ಲಕ್ಷ್ಮೀ ದೇವಿಗೆ ಕೆಟ್ಟ ಕೋಪ ಬರುತ್ತದೆಯಂತೆ. ಪೊರಕೆಯನ್ನು ನಮ್ಮ ಹಿರಯುರು ಲಕ್ಷ್ಮೀ ರೂಪವೆಂದು ಕರೆಯುತ್ತಾರೆ. ಪೊರಕೆಯನ್ನು ದಾನ ಮಾಡಿದರೆ ನಮ್ಮ ಮನೆಯ ಐಶ್ವರ್ಯವನ್ನೇ ದಾನ ಮಾಡಿದಂತೆ. ಲಕ್ಷ್ಮೀ ದೇವಿಗೆ ಅವಮಾನವಾಗಿ ಆಕೆ ಮನೆಯಿಂದ ಹೊರಟು ಹೋಗುತ್ತಾಳಂತೆ ಎಚ್ಚರ.