ವಿಜಯ್ ರಾಘವೇಂದ್ರಗೆ ಟಕ್ಕರ್ ಕೊಟ್ಟ ಜೀ ಕನ್ನಡ.. ಡ್ರಾಮಾ ಜೂನಿಯರ್ ಶೋಗೆ ಜಡ್ಜ್ ಆಗಿ ಬಂದ ಕನ್ನಡದ ಸ್ಟಾರ್ ನಟ ಯಾರು ಗೊತ್ತಾ..

ವೀಕ್ಷಕರಿಗೆ ಮನರಂಜನೆ ನೀಡುವಲ್ಲಿ ಜೀಕನ್ನಡ ವಾಹಿನಿ ಅಗ್ರಸ್ಥಾನದಲ್ಲಿದೆ. ಹಲವು ಸೀರಿಯಲ್ ಗಳು, ರಿಯಾಲಿಟಿ ಶೋಗಳ ಮೂಲಕ ವೀಕ್ಷಕರು ಟಿವಿ ಎದುರೇ ಕುಳಿತುಕೊಳ್ಳುವ ಹಾಗೆ ಮಾಡುತ್ತಿದೆ ಜೀಕನ್ನಡ ವಾಹಿನಿ. ಟಿ.ಆರ್.ಪಿ ರೇಟಿಂಗ್ ನಲ್ಲಿ ಕೂಡ ಜೀಕನ್ನಡ ವಾಹಿನಿಯೇ ಟಾಪ್ ಸ್ಥಾನದಲ್ಲಿದೆ. ಜೀಕನ್ನಡ ವಾಹಿನಿಯಲ್ಲಿ ಪ್ರತಿ ವೀಕೆಂಡ್ ನಲ್ಲಿ ವೀಕ್ಷಕರು ಹೊಟ್ಟೆ ಹುಣ್ಣಾಗುವಷ್ಟು ನಗುವ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಜೀ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮವನ್ನು ಯಾರು ಮರೆಯಲು ಸಾಧ್ಯವಿಲ್ಲ, ಮುದ್ದು ಮಕ್ಕಳ ತರ್ಲೆ ತುಂಟಾಟ, ಲವಲವಿಕೆ ಇದೆಲ್ಲವೂ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಒಂದು ವರ್ಷದ ನಂತರ ಇದೀಗ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಈ ಬಾರಿ ವಿಜಯ್ ರಾಘವೇಂದ್ರ ಅವರ ಬದಲಾಗಿ ಜಡ್ಜ್ ಸ್ಥಾನಕ್ಕೆ ಖ್ಯಾತ ನಟರೊಬ್ಬರು ಬರಲಿದ್ದಾರೆ..

ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಸ್ಕಿಟ್ ಗಳಲ್ಲಿ ಪಾತ್ರ ನಿರ್ವಹಿಸುವುದನ್ನು ನೋಡುವುದೇ ಒಂದು ರೀತಿಯ ಚಂದ. ಪ್ರತಿಯೊಂದು ಮಗುವು ಬಹಳ ಮುದ್ದಾಗಿ ಮಾತನಾಡುತ್ತಿದ್ದರೆ, ಹಾಗೆಯೇ ನೋಡುತ್ತಾ ಎಂಜಾಯ್ ಮಾಡಬೇಕು ಅನ್ನಿಸುತ್ತೆ. ಕಿರುತೆರೆ ವೀಕ್ಷಕರ ಮನಗೆದ್ದಿದ್ದ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮವನ್ನು ಕಳೆದ ಒಂದು ವರ್ಷಗಳಿಂದ ನಡೆಸಿರಲಿಲ್ಲ. ಅದಕ್ಕೆ ಕಾರಣ ಕರೊನಾ ಸೋಂಕು. ದೇಶದಲ್ಲಿ ಸೋಂಕು ಎಲ್ಲೆಡೆ ಹೆಚ್ಚಾಗಿ ಹರಡುತ್ತಿದ್ದ ಕಾರಣ, ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಡ್ರಾಮಾ ಜ್ಯೂನಿಯರ್ಸ್ ಶೋ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.

ಇದೀಗ ಈ ಶೋ ಮತ್ತೆ ಶುರುವಾಗಲಿದೆ. ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಈಗಾಗಲೇ ಮಕ್ಕಳ ಆಡಿಷನ್ ನಡೆದಿದೆ. ಶೀಘ್ರದಲ್ಲೇ ಶೋ ಶುರುವಾಗಲಿದೆ. ಕರ್ನಾಟಕದ ಮಕ್ಕಳು ನಿಮ್ಮ ಟಿವಿ ಸ್ಕ್ರೀನ್ ಎದುರು ಬಂದು ನಿಮ್ಮನ್ನೆಲ್ಲ ಹೊಟ್ಟೆ ಹುಣ್ಣಾಗುವಷ್ಟು ನಗಿಸುವುದು ಖಂಡಿತ. ಮಕ್ಕಳು ಸಹ ಜನರಿಗೆ ಮನರಂಜನೆ ನೀಡಲು ಕಾಯುತ್ತಿದ್ದಾರೆ. ಈ ಬಾರಿ ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮವು ಹೊಸ ರೂಪದಲ್ಲಿ ಮೂಡಿಬರಲಿದೆ, ಹಿಂದಿನ ಸೀಸನ್ ಗಿಂತ ಕಲರ್ ಫುಲ್ ಆಗಿರಲಿದೆ. ಹಾಗೂ ಈ ಹೊಸ ಸೀಸನ್ ನಲ್ಲಿ ಅನೇಕ ಬದಲಾವಣೆಗಳನ್ನು ತರಲಾಗುತ್ತಿದೆ.

ಮುಖ್ಯವಾದ ಬದಲಾವಣೆ ಇರುವುದು ಜಡ್ಜ್ ಗಳ ವಿಚಾರದಲ್ಲಿ. ಇಷ್ಟು ಸೀಸನ್ ಗಳಲ್ಲಿ ಹಿರಿಯನಟಿ ಲಕ್ಷ್ಮಿ, ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಹಾಗೂ ಚಂದನಾವನದ ನಟ ವಿಜಯ್ ರಾಘವೇಂದ್ರ ಡ್ರಾಮಾ ಜ್ಯೂನಿಯರ್ಸ್ ಶೋಗೆ ಜಡ್ಜ್ ಗಳಾಗಿದ್ದಾರೆ. ಆದರೆ ಈಗ ಹಲವು ಕಾರಣಗಳಿಂದ ಜಡ್ಜ್ ಗಳಲ್ಲಿ ಬದಲಾವಣೆ ತಂದಿದ್ದಾರೆ. ಹಳೆಯ ಜಡ್ಜ್ ಗಳ ಪೈಕಿ ಹಿರಿಯನಟಿ ಲಕ್ಷ್ಮಿ ಅವರು ಮಾತ್ರ ಉಳಿದುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇನ್ನು ಟಿ.ಎನ್.ಸೀತಾರಾಮ್ ಅವರ ಬದಲಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಶೋಗೆ ಕರೆತರಲಿದೆ ಜೀಕನ್ನಡ ವಾಹಿನಿ.

ಡ್ರಾಮಾ ಜ್ಯೂನಿಯರ್ಸ್ ಶೋ ಜಡ್ಜ್ ಮಾಡಲು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ರವಿಚಂದ್ರನ್ ಅವರಿಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ, ಅವರ ಸಿನಿಮಾಗಳಲ್ಲೂ ಮಕ್ಕಳ ಕುರಿತ ದೃಶ್ಯ ಇದ್ದರೆ ಮಕ್ಕಳನ್ನು ಬಹಳ ಸ್ಪೆಷಲ್ ಆಗಿ ತೋರಿಸುತ್ತಾರೆ. ಇದೀಗ ರವಿಚಂದ್ರನ್ ಅವರು ಮಕ್ಕಳ ಮುದ್ದಾದ ಡ್ರಾಮಾ ಗಳನ್ನು ನೋಡಿ ಎಂಜಾಯ್ ಮಾಡಲು ರೆಡಿಯಾಗಿದ್ದಾರೆ. ರವಿಚಂದ್ರನ್ ಅವರು ಡ್ರಾಮಾ ಜ್ಯೂನಿಯರ್ಸ್ ಶೋಗೆ ಬರುವುದು, ಶೋನ ಕಳೆಯನ್ನು ಬದಲಾಯಿಸಲಿದೆ, ಡ್ರಾಮಾ ಜ್ಯೂನಿಯರ್ಸ್ ಶೋಗೆ ಹೊಸ ಮೆರುಗು ಬರಲಿದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಈಗಾಗಲೇ ಜೀಕನ್ನಡ ವಾಹಿನಿ ಡ್ರಾಮಾ ಜ್ಯೂನಿಯರ್ಸ್ ಶೋನ ಪ್ರೋಮೋ ಚಿತ್ರೀಕರಣ ಮಾಡಿದ್ದು, ಪ್ರೋಮೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಇನ್ನು ನಟ ವಿಜಯ್ ರಾಘವೇಂದ್ರ ಅವರ ಜಾಗಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರನ್ನು ಕರೆತರುವ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಡ್ರಾಮಾ ಜ್ಯೂನಿಯರ್ಸ್ ಶೋ ಶುರುವಾಗಿ ವೀಕ್ಷಕರಿಗೆ ಭಾರಿ ಮನರಂಜನೆ ನೀಡುವುದು ಗ್ಯಾರಂಟಿ. ನೀವು ಕೂಡ ಮುದ್ದು ಮಕ್ಕಳ ಡ್ರಾಮಾ ನೋಡಲು ಕಾಯುತ್ತಿರಿ..