ಡಾ.ಬ್ರೋ ಖ್ಯಾತಿಯ ಈ ಹುಡುಗ ನಿಜಕ್ಕೂ ಯಾರು ಗೊತ್ತಾ.. ಶಾಕ್ ಆಗ್ತೀರಾ..

ಸಾಮಾಜಿಕ ಜಾಲತಾಣಗಳು ಬಂದ ನಂತರ ಸಾವಿರಾರು ಜನರು ಯೂಟ್ಯೂಬ್ ಫೇಸ್‌ಬುಕ್‌ ಇನ್ಸ್ಟಾಗ್ರಾಂ ಹೀಗೆ ಇಂತಹ ವೇದಿಕೆಗಳನ್ನು ಬಳಸಿಕೊಂಡು ಬದುಕು ಕಟ್ಟಿಕೊಂಡು ಒಳ್ಳೆಯ ಹಣ ಮಾಡುತ್ತಿರುವುದು ಸತ್ಯ.. ಆದರೆ ಇವುಗಳಲ್ಲಿಯೇ ಹಣ ಮಾಡ್ತೀನಿ ಅಂತ ಬಂದವರೆಲ್ಲಾ ಲಕ್ಷ ಲಕ್ಷ ಆದಾಯ ಮಾಡ್ತಿದ್ದಾರೆ ಅನ್ನೋದು ಅಷ್ಟೇ ಸುಳ್ಳು.‌. ಕಾರಣ ಈ ಸಾಮಾಜಿಕ ಜಾಲತಾಣಗಳು ಹಣ ನೀಡುತ್ತವೆ ನಿಜ.. ಆದರೆ ಅದಕ್ಕಾಗಿಯೇ ಒಂದಷ್ಟು ಮಾನದಂಡಗಳಿವೆ.‌ ಅದರಲ್ಲೂ ತಾಳ್ಮೆ ಇಲ್ಲದೆ ಮೊದಲ ತಿಂಗಳೇ ಲಕ್ಷ ಬೇಕೆಂದರೆ ಅದು ಕನಸಿನ ಮಾತು.. ಹೀಗೆ ಬಂದವರು ಎಷ್ಟೋ ಜನ ಮರಳಿ ಹೋದದ್ದು ಇದೆ.. ಆದರೆ ವರ್ಷಗಳ ಗಟ್ಟಲೆ ಇದಕ್ಕಾಗಿ ಕೆಲಸ ಮಾಡಿ.. ಆಗಾಗ ಒಳ್ಳೆಯ ಕಂಟೆಂಟ್ ಗಳನ್ನು ನೀಡುತ್ತಾ ತಾಳ್ಮೆಯಿಂದ ಯಶಸ್ಸಿಗಾಗಿ ಕಾದವರಿಗೆ ನಿಜಕ್ಕೂ ಒಳ್ಳೆಯ ಪ್ರತಿಫಲವೇ ದೊರೆಯುತ್ತದೆ.. ಅಂತವರಲ್ಲಿ ಡಾ ಬ್ರೋ ಎನ್ನುವ ಯೂಟ್ಯೂಬರ್ ಕೂಡ ಒಬ್ಬರು.. ಅದರಲ್ಲೂ ಈತ ತಿಂಗಳಿಗೆ ಗಳಿಸುತ್ತಿರುವ ಸಂಒಆದನೆ ಕೇಳಿದ್ರೆ ನಿಜಕ್ಕೂ ಶಾಕ್ ಆಗೋದು ಉಂಟು..

ಹೌದು ನಮಸ್ಕಾರ​ ದೇವರುಗಳ‌.. ಎನ್ನುತ್ತಲೇ ಜನರಿಗೆ ಹತ್ತಿರವಾದವ ಈ ಡಾ ಬ್ರೋ.. ಆತನ ವಿಡಿಯೋ ಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಂಪು ಹರಿಸುತ್ತಿರೋ ವ್ಯಕ್ತಿ ನಮ್ಮ ಕಣ್ಣ ಮುಂದೆಯೇ ಬಂದು ನಿಲ್ಲುತ್ತಾರೆ.. ಆತ ಬೇರೆ ಯಾರೂ ಅಲ್ಲ ಡಾ.ಬ್ರೋ ಎನ್ನುವ ಗಗನ್.. ಹೌದು.. ಯುಟ್ಯೂಬ್ ನಲ್ಲಿ ಡಾ.. ಬ್ರೋ ಅಂತಾನೆ ಫೇಮಸ್ ಆಗಿರುವ ಈ ಯುವಕ ಕನ್ನಡಿಗರಿಗೆ ಜಗತ್ತನ್ನು ತೋರಿಸುತ್ತೇನೆ ಎಂದು ಪಣ ತೊಟ್ಟು ಜನರಿಗೆ ಜಗತ್ತನ್ನು ತೋರಿಸುವುದರ ಜೊತೆಗೆ ತನ್ನ ಪರಿಶ್ರಮಕ್ಕೆ ತಕ್ಕ ಹಾಗೆ ತನ್ನ ಆದಾಯವನ್ನು ಗಳಿಸಿಕೊಳ್ಳುತ್ತಿದ್ದಾನೆ.. ಸಾಧಿಸುವ ಛಲ ಇದ್ದರೆ ಸಾಕು ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು. ಹೆಚ್ಚಿನ ಮಂದಿ ಜೀವನದಲ್ಲಿ ಯಶಸ್ಸಿನ ಹಾಗೂ ಹಣದ ಆಸೆಯಿಂದ ಅಡ್ಡದಾರಿ ಹಿಡಿಯುತ್ತಾರೆ.. ಆದರೆ ಅದರಿಂದ ಗಳಿಸಿರುವ ಹೆಸರು ಖ್ಯಾತಿ.. ಏನೇ ಇದ್ದರೂ ಸ್ವಲ್ಪ‌ ಸಮಯವಷ್ಟೇ‌‌.. ಯಾವ ವ್ಯಕ್ತಿ ಕಷ್ಟ ಪಟ್ಟು ಮೇಲೆ ಬರುತ್ತಾನೆ ಅವನು ಗಟ್ಟಿಯಾಗಿ ಕಡೆಯವರೆಗೂ ನಿಲ್ಲುತ್ತಾನೆ ಎಂಬುದಕ್ಕೆ ಈ ಡಾ. ಬ್ರೋ ನಿಜವಾದ ಉದಾಹರಣೆ ಎನ್ನಬಹುದು..

ಡಾ ಬ್ರೋ ಎನ್ನುವ ಈ ಹುಡುಗನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ.. ಯೂ ಟ್ಯೂಬ್ ನೋಡುವವರಿಗೆ.. ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ. ಬ್ರೋ ಚಿರಪರಿಚಿತ. ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು.. ಅಸಲಿಗೆ ಈ ಡಾಕ್ಟರ್​ ಬ್ರೋ ಯಾರು? ಎಲ್ಲಿಯವನು? ದೇಶ ವಿದೇಶ ಸುತ್ತಲು ಇವನಿಗೆ ಹಣ ಎಲ್ಲಿಂದ ಬರುತ್ತೆ? ಈತನ ತಿಂಗಳ ಆದಾಯವಾದರೂ ಎಷ್ಟು? ಎಂದು ಕುತೂಹಲ ಮೂಡುವುದು ಸಹಜ.. ಈ ರೀತಿ‌ ಊರೂರು, ದೇಶ ವಿದೇಶ ಸುತ್ತುವುದು ಅಂದರೆ ಅದು ಸಾಮಾನ್ಯದ ವಿಷಯ ಅಲ್ಲ.. ಅದಕ್ಕೆಲ್ಲಾ ಉತ್ತರವೂ ಇದೆ..

ಡಾ ಬ್ರೋ ನ ನಿಜವಾದ ಹೆಸರು ಗಗನ್​ ಶ್ರೀನಿವಾಸನ್.. ಈತ ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು‌. ಈತ ಹುಟ್ಟಿದ್ದು ಮದ್ಯಮ‌ ವರ್ಗದ ಕುಟುಂಬದಲ್ಲಿ. ಈತನ ತಂದೆಯ ಹೆಸರು ಶ್ರೀನಿವಾಸ್​.‌ ಇವರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ.. ಈ ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದನಂತೆ.. ‌ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದ.. ಆದರೆ ಡಾ ಬ್ರೋಗೆ ಓದಿನಲ್ಲಿ ಆಸಕ್ತಿ ಇರಲಿಲ್ಲವಾದರೂ ಡಿಗ್ರಿ ಮುಗಿಸಿಕೊಂಡಿದ್ದಾನೆ.. ಹಾಡು, ಡ್ಯಾನ್ಸ್​​ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ..

ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡಿದ್ದ.. ಭರತನಾಟ್ಯ ಕಲಿತು ಅದರ ಕ್ಲಾಸ್‌ ನಡೆಸಿದ್ದ.. ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿತ.. 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡಿದ್ದ. ಅದುವೇ ಈ ಡಾ ಬ್ರೋ. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ, ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ.. ‌ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿದ್ದ.. ರಾಜ್ಯ ಹೋಗಿ ಅಂತರಾಜ್ಯ, ನಂತರ ದೇಶ, ವಿದೇಶ ಸುತ್ತುತ್ತಿದ್ದು ಆತನ‌ ಪ್ರಪಂಚ ಪರ್ಯಟನೆ ಜನರು ತಾವೇ ಪರ್ಯಟಿಸಿದಂತೆ ಕಾಣುತ್ತದೆ.‌.

ಇನ್ನು ಈತನ ತಿಂಗಳ ಆದಾಯದ ವಿಚಾರಕ್ಕೆ ಬರುವುದಾದರೆ‌‌.. ತಿಂಗಳಿಗೆ ಒಂದೂವರೆ ಲಕ್ಷ ದಿಂದ ಎರಡು ಲಕ್ಷ ರೂಪಾಯಿ ವರೆಗೂ ಗಗನ್ ತನ್ನ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ ನಿಂದ ದುಡಿಯುತ್ತಿದ್ದಾನೆ.. ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ‌ ಖ್ಯಾತಿ ಗಗನ್​ ಅವರದ್ದು.. ಆದರೆ ಇಷ್ಟೆಲ್ಲಾ ಮಾಡಲು ಗಗನ್‌ ಒಂದೇ ಒಂದು ರೂಪಾಯಿ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲವಂತೆ.. ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514