ನಾನು ಬಹಳ ಡಿಸ್ಟರ್ಬ್ ಆಗಿದ್ದೇನೆ.. ನೋವು ಹೊರ ಹಾಕಿದ ಕಿರುತೆರೆ ನಟಿ ರೂಪಿಕಾ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ದೊರೆಸಾನಿ ಕೂಡ ಒಂದು. ಅಪ್ಪ, ಮಗಳ ಅನ್ಯೋನ್ಯ ಬಂಧವನ್ನು ಸಾರುತ್ತಿದ್ದ ದೊರೆಸಾನಿ ಧಾರಾವಾಹಿ ದಿಢೀರ್ ಅಂತ ಅಂತ್ಯ ಕಂಡಿತು. ಕಥಾನಾಯಕ ವಿಶ್ವನಾಥನ್ ಆನಂದ್ ಹಾಗೂ ಕಥಾನಾಯಕಿ ದೀಪಿಕಾಗೆ ಮದುವೆಯಾಗುವ ಮೂಲಕ ದೊರೆಸಾನಿ ಸೀರಿಯಲ್‌ಗೆ ಶುಭಂ ಹಾಡಲಾಯಿತು.

ಏಕಾಏಕಿ ದೊರೆಸಾನಿ ಸೀರಿಯಲ್ ಮುಗಿದಿದ್ದು, ಗುಬ್ಬಚ್ಚಿ ದೀಪಿಕಾ ಪಾತ್ರಧಾರಿ ನಟಿ ರೂಪಿಕಾ ಅವರಿಗೂ ಬೇಸರವಾಗಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್‌ ಲೈವ್‌ಗೆ ಬಂದಿರುವ ರೂಪಿಕಾ, ನನಗೆ ದೊರೆಸಾನಿ ಎಮೋಷನಲ್ ಆಗಿ ಕನೆಕ್ಟ್ ಆಗಿತ್ತು. ಧಾರಾವಾಹಿ ಮುಗಿದಿದೆ ಅಂತ ಹೇಳೋಕೆ ಕಷ್ಟ ಆಗುತ್ತೆ. ನಾನೂ ಸಹ ಡಿಸ್ಟರ್ಬ್ ಆಗಿದ್ದೆ ಎಂದು ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ಲೈವ್‌ಗೆ ಬಂದ ನಟಿ ರೂಪಿಕಾ, ತುಂಬಾ ಎಮೋಷನಲ್ ಆಗಿದ್ದೀನಿ. ತುಂಬಾ ಬ್ಲಾಂಕ್ ಆಗಿದ್ದೀನಿ. ಪ್ರತಿಯೊಬ್ಬ ಕಲಾವಿದರಿಗೂ ಒಂದೊಳ್ಳೆ ಪಾತ್ರ ಮಾಡಬೇಕು ಅಂತ ಆಸೆ ಇರುತ್ತದೆ. ಜೀವನಕ್ಕೆ ಹತ್ತಿರವಾಗಿರುವ ಸಬ್ಜೆಕ್ಟ್‌ನಲ್ಲಿ ಅಭಿನಯಿಸಬೇಕು ಅಂತ ಆಶಿಸುತ್ತೀವಿ. ಬಾಲನಟಿಯಾಗಿ ನಾನು ನನ್ನ ವೃತ್ತಿಜೀವನ ಆರಂಭಿಸಿದೆ. ಏಳುಬೀಳುಗಳನ್ನ ನೋಡಿದ್ದೇನೆ.

ನನಗೆ ತುಂಬಾ ಎಮೋಷನಲ್ ಆಗಿ ಕನೆಕ್ಟ್ ಆಗಿದ್ದು ದೊರೆಸಾನಿ. ನನಗೆ ಮೊದಲ ಬಾರಿ ದೊರೆಸಾನಿ ಆಫರ್ ಬಂದಾಗ ಜೈಮಾತಾ ಕಂಬೈನ್ಸ್ ಮತ್ತು ಕಲರ್ಸ್ ಕನ್ನಡ ಅಂತ ಹೇಳಿದಾಗ ಖಂಡಿತವಾಗಿಯೂ ನಾನು ತುಂಬಾ ಎಕ್ಸೈಟ್ ಆಗಿದ್ದೆ. ಯಾಕಂದ್ರೆ, ಅದು ಒನ್ ಆಫ್ ದಿ ಬೆಸ್ಟ್ ಪ್ರೊಡಕ್ಷನ್ ಹೌಸ್. ಒಳ್ಳೊಳ್ಳೆ ಸೀರಿಯಲ್‌ಗಳನ್ನ ಮಾಡಿದ್ದಾರೆ. ನನಗೆ ಅವಕಾಶ ಕೊಟ್ಟ ಜೈಮಾತಾ ಕಂಬೈನ್ಸ್ ಹಾಗೂ ಮಿಲನ ಪ್ರಕಾಶ್‌ ಸರ್‌ಗೆ ನನ್ನ ಹೃತ್ಪೂರ್ವಕ ವಂದನೆಗಳು. ಇಡೀ ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ಗೆ ಧನ್ಯವಾದಗಳು. ಕಲರ್ಸ್ ಕನ್ನಡ, ಪರಮೇಶ್ವರ್ ಗುಂಡ್ಕಲ್ ಸರ್, ಜೆಡಿ ಸರ್‌ಗೆ ಧನ್ಯವಾದಗಳು.

ಒಂದೊಳ್ಳೆ ಸೀರಿಯಲ್ ಆಗಬೇಕು ಅಂತ ನಾವು ಹಗಲು, ರಾತ್ರಿ ಕೆಲಸ ಮಾಡಿದ್ದೀವಿ. ಈಗ ನನ್ನನ್ನ ಎಲ್ಲರೂ ದೀಪಿಕಾ ಅಂತಲೇ ಗುರುತಿಸುತ್ತಾರೆ. ಅಷ್ಟು ಪ್ರೀತಿ ಕೊಟ್ಟ ಎಲ್ಲಾ ವೀಕ್ಷಕರಿಗೆ ಧನ್ಯವಾದಗಳು. ಹಲವಾರು ಕಾರಣಗಳಿಂದ ದೊರೆಸಾನಿ ಸೀರಿಯಲ್ ಮುಗಿದಿದೆ ಅಂತ ಹೇಳೋಕೆ ತುಂಬಾ ಕಷ್ಟ ಆಗುತ್ತೆ. ನಾನೂ ಸಹ ಡಿಸ್ಟರ್ಬ್ ಆಗಿದ್ದೆ. ನಾನು ದೊರೆಸಾನಿ ಧಾರಾವಾಹಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನಾಳೆಯಿಂದ ದೊರೆಸಾನಿ ಬರಲ್ಲ ಅಂದ್ರೆ ನನಗೂ ತುಂಬಾ ಎಮೋಷನಲಿ ಡಿಸ್ಟರ್ಬ್ ಆಗೇ ಆಗುತ್ತೆ. ಆದರೆ, ಅದನ್ನ ಒಪ್ಪಿಕೊಂಡು ಮುಂದೆ ಹೋಗಬೇಕು. ನಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್‌ಗಳಿಗೂ ನಿಮ್ಮ ಸಪೋರ್ಟ್ ಹೀಗೇ ಇರಲಿ. ದೊರೆಸಾನಿ ನನ್ನ ಜೀವನದಲ್ಲಿ ಪ್ರತಿ ಕ್ಷಣ ಇರುತ್ತೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ ಎಂದು ಹೇಳಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622