ಕಡೆಗೂ ಬಯಲಾಯಿತು ನಟ ಪುರುಷೋತ್ತಮ್ ಮಗಳ ಸತ್ಯ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರವಾಹಿಗಳಲ್ಲಿ ಒಂದು ದೊರಸಾನಿ. ಈ ಧಾರಾವಾಹಿ ಈಗ ರೋಚಕ ಘಟ್ಟ ತಲುಪಿದೆ. ತನ್ನ ಮತ್ತು ವಿಶ್ವನಾಥನ್ ಆನಂದ್ ಕುರಿತ ವಿಚಾರವನ್ನು ದೀಪಿಕಾ ತಂದೆ ಮುಂದೆ ಹೇಳಿ, ಸತ್ಯ ಒಪ್ಪಿಕೊಂಡಿದ್ದು, ಧಾರಾವಾಹಿಗೆ ಈ ಮೂಲಕ ಬಿಗ್ ಟ್ವಿಸ್ಟ್ ಸಿಕ್ಕಿದೆ. ದೀಪಿಕಾ ತಂದೆ ಪುರುಷೋತ್ತಮ್ ಮಗಳ ಮದುವೆಯನ್ನು ಗೂಬೆ ಬಾಸ್ ವಿಶ್ವನಾಥನ್ ಆನಂದ್ ಜೊತೆ ಮಾಡಲು ಒಪ್ಪಿಗೆ ಕೊಡ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ..

ದೊರಸಾನಿ ಧಾರವಾಹಿಯಲ್ಲಿ ಹೈಲೈಟ್ ಆಗಿರುವುದು ಅಪ್ಪ ಮಗಳ ಸೆಂಟಿಮೆಂಟ್. ತಂದೆ ಪುರುಷೋತ್ತಮ್ ತನ್ನ ಮಗಳನ್ನು ಎಷ್ಟರ ಮಟ್ಟಿಗೆ ಪ್ರೀತಿಸಿ, ಮಗಳ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಮಗಳು ದೀಪಿಕಾ ಸಹ ತಂದೆ ತನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕೆಂದು ಪ್ರಯತ್ನ ಪಡುತ್ತಿದ್ದಾಳೆ. ದೀಪಿಕಾ ತಂದೆ ಪುರುಷೋತ್ತಮ್ ಅವರಿಗೆ ಮರಿಯಾದೆಯೇ ಎಲ್ಲವೂ ಆಗಿದೆ. ಮಗಳು ತನಗೆ ಅವಮಾನ ಆಗುವ ಹಾಗೆ ಲವ್ ಮಾಡಿ ಮದುವೆ ಆಗಬಾರದು ಎನ್ನುವುದು ಪುರುಷೋತ್ತಮ್ ಅವರ ಆಸೆ. ಯಾವುದೇ ಕಾರಣಕ್ಕೂ ಲವ್ ಮ್ಯಾರೇಜ್ ಆಗಬಾರದು ಎಂದು ಮಗಳು ದೀಪಿಕಾ ಇಂದ ಭಾಷೆ ತೆಗೆದುಕೊಂಡಿರುತ್ತಾರೆ ಪುರುಷೋತ್ತಮ್. ದೀಪಿಕಾ ಸಹ ತಂದೆಯ ಮಾತಿಗೆ ತಕ್ಕ ಹಾಗೆ ಇರುತ್ತಾಳೆ.

ಇತ್ತ ವಿಶ್ವನಾಥನ್ ಆನಂದ್ ಗೆ ಸಿಂಪಲ್ ಹುಡುಗಿ ದೀಪಿಕಾ ಇಷ್ಟವಾಗಿ, ಅವಳಿಗೆ ಪ್ರೊಪೋಸ್ ಮಾಡುತ್ತಾನೆ. ಆದರೆ ತಂದೆಗೆ ಕೊಟ್ಟಿದ್ದ ಮಾತಿನಿಂದ ದೀಪಿಕಾ ಆನಂದ್ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ. ನಂತರ ಪರಿಸ್ಥಿತಿಗಳು ಬದಲಾಗಿ ಆನಂದ್ ಪ್ರೀತಿಯನ್ನು ಒಪ್ಪಿಕೊಂಡರು ಸಹ, ತಂದೆ ಒಪ್ಪಿಗೆ ಪಡೆದೆ ಮದುವೆ ಆಗಬೇಕು ಎನ್ನುತ್ತಾಳೆ. ಆನಂದ್ ಸಹ ದೀಪಿಕಾ ತಂದೆಯನ್ನೇ ಒಪ್ಪಿಸಿ ಮದುವೆ ಆಗಬೇಕೆಂದು, ಬ್ರೋಕರ್ ಮೂಲಕ ಪುರುಷೋತ್ತಮ್ ಅವರ ಮನೆಯಲ್ಲಿ ಮಗಳನ್ನು ಮದುವೆ ಮಾಡಿಕೊಡುವಂತೆ ಕೇಳುತ್ತಾನೆ. ಬಾಸ್ ಆಗಿ ತನಗೆ ಅವಮಾನ ಮಾಡಿದ್ದ ಹುಡುಗನಿಗೆ ಮಗಳನ್ನು ಕೊಡಲು ಪುರುಷೋತ್ತಮ್ ಒಪ್ಪುವುದಿಲ್ಲ. ಹಿಂದೆ ನಡೆದಿದ್ದಕ್ಕೆಲ್ಲ ಕ್ಷಮೆ ಕೇಳಿ, ಮಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಆನಂದ್ ಪುರುಷೋತ್ತಮ್ ಅವರ ಮನವೊಲಿಸಿ ಮದುವೆಗೆ ಒಪ್ಪುವ ಹಾಗೆ ಮಾಡುತ್ತಾನೆ.

ಆದರೆ ತನಗೂ ದೀಪಿಕಾಗು ಈ ಮೊದಲೇ ಪರಿಚಯ ಇತ್ತು ಎಂದು ಆನಂದ್ ಹೇಳಿಕೊಳ್ಳುವುದಿಲ್ಲ. ದೀಪಿಕಾ ಸಹ ಆನಂದ್ ಪರಿಚಯ ಈ ಮೊದಲೇ ಇತ್ತು ಎಂದು ತಂದೆಯ ಬಳಿ ಹೇಳಿ ಹೇಳುವುದಿಲ್ಲ. ದೀಪಿಕಾ ಕುಟುಂಬವನ್ನು ಕಂಡರೆ ಆಗದ ಸತ್ಯವತಿ, ದೀಪಿಕಾ ಮತ್ತು ಆನಂದ್ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಪುರುಷೋತ್ತಮ್ ಅವರ ಬಳಿ ಹೇಳಿ, ಅವರಿಗೆ ಅನುಮಾನ ಮೂಡುವ ಹಾಗೆ ಮಾಡುತ್ತಾರೆ. ಆಗ ದೀಪಿಕಾ ತನ್ನ ತಂದೆಯ ಬಳಿ ಇರುವ ವಿಚಾರವನ್ನು ಹೇಳಿಕೊಳ್ಳುತ್ತಾಳೆ. ಆನಂದ್ ಪರಿಚಯ ಮೊದಲೇ ಇದ್ದಿದ್ದು ನಿಜ, ಆನಂದ್ ತನಗೆ ಪ್ರೊಪೋಸ್ ಮಾಡಿದ್ದು ನಿಜ, ಆದರೆ ತಾನು ಒಪ್ಪಿಕೊಳ್ಳಲಿಲ್ಲ. ಈ ಮದುವೆ ಲವ್ ಮ್ಯಾರೇಜ್ ಅಲ್ಲ, ತಂದೆಗೆ ಒಪ್ಪಿಗೆ ಇಲ್ಲದೆ ಇದ್ದರೆ, ಈ ಮದುವೆ ನಡೆಯುವುದೇ ಬೇಡ ಎಂದು ಹೇಳುತ್ತಾಳೆ ದೀಪಿಕಾ.

ಮಗಳು ಪ್ರಾಮಾಣಿಕವಾಗಿ ಎಲ್ಲವನ್ನು ಹೇಳಿಕೊಂಡಿದ್ದು ನೋಡಿ, ಪುರುಷೋತಮ್ ಅವರ ಮನಸ್ಸು ಕರಗುತ್ತದೆ. ಗೂಬೆ ಬಾಸ್ ಆನಂದ್ ರನ್ನು ಮಗಳಿಗೆ ಕೊಟ್ಟು ಮದುವೆ ಮಾಡಲು ಪುರುಷೋತ್ತಮ್ ಒಪ್ಪಿಗೆ ಕೊಡುತ್ತಾರಾ? ಇತ್ತ ವಿಶ್ವನಾಥನ್ ಆನಂದ್ ತಾವು ಬ್ರೋಕರ್ ಕಡೆಯಿಂದ ಮದುವೆಯಾಗಲು ಟ್ರೈ ಮಾಡಿದ್ದರ ಬಗ್ಗೆ ಸತ್ಯ ಒಪ್ಪಿಕೊಳ್ಳುತ್ತಾರಾ? ಎನ್ನುವುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ. ಇಲ್ಲಿ ಸತ್ಯವತಿ ಮತ್ತು ಆನಂದ್ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ಸತ್ಯವತಿ ಮಗ ಚಿಕ್ಕ ವಯಸ್ಸಿನಲ್ಲಿ ಕಾಣೆಯಾಗಿರುತ್ತಾನೆ.

ತನ್ನ ಮಗ ಕಾಣೆಯಾಗಲು ಪುರುಷೋತ್ತಮ್ ಕಾರಣ ಎನ್ನುವುದಕ್ಕಾಗಿ ಸತ್ಯವತಿ ಪುರುಷೋತ್ತಮ್ ಮತ್ತು ಅವರ ಕುಟುಂಬವನ್ನು ಕಂಡರೆ ಆಗುವುದಿಲ್ಲ. ಕಳೆದು ಹೋಗಿರುವ ಮಗನನ್ನು ಈಗಲೂ ಹುಡುಕುತ್ತಿದ್ದಾರೆ ಸತ್ಯವತಿ. ಇತ್ತ ಆನಂದ್ ಸಹ ತನ್ನ ಹೆತ್ತವರಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ಹಾಗಾಗಿ ಸತ್ಯವತಿ ಆನಂದ್ ತಾಯಿ ಇರಬಹುದಾ ಎನ್ನುವ ಕುತೂಹಲ ಸಹ ಮನೆಮಾಡಿದ್ದು, ಕಥೆ ಯಾವ ರೀತಿ ಸಾಗುತ್ತದೆ ಎಂದು ಮುಂದಿನ ಸಂಚಿಕೆಗಳಲ್ಲಿ ನೋಡಬೇಕಿದೆ.