ಡಿಕೆಶಿಗೆ ಶಾಕ್.. ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಯ್ತು..

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕರಾಗಿರುವ ಡಿಕೆ ಶಿವಕುಮಾರ್ ಅವರ ಸಮಯವೇ ಸರಿ‌ ಇಲ್ಲದಂತೆ ಕಾಣುತ್ತಿದೆ.. ಸತತ ಮೂರನೇ ಬಾರಿಯೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಗಿದೆ.. ಹೌದು, ಇದೇ ಭಾನುವಾರ ಅಂದರೆ ಜೂನ್ 7ರಂದು ನಡೆಯಬೇಕಿದ್ದ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ.

ಕಳೆದ ಭಾನುವಾರವೇ ಈ ಕಾರ್ಯಕ್ರಮ ನಡೆಯಬೇಕಿತ್ತು ಆದರೆ ಭಾನುವಾರಗಳಂದು ಕರ್ಫ್ಯೂ ಜಾರಿ ಎಂದು ಯಡಿಯೂರಪ್ಪನವರು ತಿಳಿಸಿದ್ದರು.. ಅದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು‌ ಕಳೆದ ಭಾನುವಾರದಿಂದ ಮುಂದಿನ ಜೂನ್ 7 ಕ್ಕೆ ಮುಂದೂಡಲಾಗಿತ್ತು.. ಆದರೀಗ ಆ ದಿನಾಂಕವನ್ನೂ ಮುಂದೂಡಲಾಗಿದೆ.

ಹೌದು ಮತ್ತೆ ಲಾಕ್ ಡೌನ್ 5 ನೇ ಭಾಗ ವಿಸ್ತರಣೆಯಾದ್ದರಿಂದ ಸಭೆ ಸಮಾರಂಭಗಳನ್ನು ಮಾಡುವ ಹಾಗಿಲ್ಲ ಎಂದು ನಿಯಮ ಜಾರಿಗೊಳಿಸಲಾಗಿದೆ.. ರಾಜಕೀಯ ಕಾರ್ಯಕ್ರಮಗಳನ್ನು ನಡೆಸದಂತೆ ಕೇಂದ್ರ ಸರ್ಕಾರವೇ ಸೂಚಿಸಿದೆ.. ಆದ್ದರಿಂದ ಪ್ರಮಾಣವಚನ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ..

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ ಕೆ ಶಿವಕುಮಾರ್ ಅವರು.. ನಾನು ಈಗಾಗಲೇ ಮಾರ್ಚ್ 11ರಂದೇ ಕೆಪಿಸಿಸಿ ಅಧ್ಯಕ್ಷನಾಗಿ ನೇಮಕೊಂಡಿದ್ದೇನೆ. ಈಗ ಜೂನ್ 7ರಂದು ನಾನು ಕೆಪಿಸಿಸಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಮಾಡಬೇಡಿ ಎಂದು ಸರ್ಕಾರದವರು ಹೇಳಿದ್ದಾರೆ. ಆದ್ದರಿಂದ ನಾವು ಮಾಡಿಕೊಂಡಿದ್ದ ಎಲ್ಲಾ ಸಿದ್ಧತೆಗಳು ಹಾಳಾಗಿವೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ.. ಸಂವಿಧಾನದ ಪ್ರಿಯಾಂಬಲ್ ಓದಿ, ಗಾಮ ಪಂಚಾಯಿತಿ ಮಟ್ಟದಲ್ಲಿ 7800 ಕಡೆ ವಂದೇ ಮಾತರಂ ಹಾಡುವ ಮೂಲಕ ಅಧಿಕಾರ ಸ್ವೀಕರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು, ಇದಕ್ಕೆ ಸರ್ಕಾರ ಕಮೀಷನರ್ ಒಪ್ಪಿಗೆಯನ್ನೂ ಸಹ ಕೇಳಿದ್ದೆವು. ಆದ್ರೆ, ಇದೀಗ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ..

ಆದ್ದರಿಂದ ಜೂನ್ 7ರಂದು ನಡೆಯಬೇಕಿದ್ದ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಗಿದೆ.. ಆದರೆ ಯಾವುದೇ ಕಾರಣಕ್ಕೂ ಪದಗ್ರಹಣ ಕಾರ್ಯಕ್ರಮ ರದ್ದಾಗುವುದಿಲ್ಲ.. ದಿನಾಂಕ ಮಾತ್ರ ಬದಲಾಗುತ್ತದೆ.. ಕಾನೂನು , ಸರ್ಕಾರದ ತೀರ್ಮಾನಕ್ಕೆ ಗೌರವ ಕೊಟ್ಟು ಬೇರೆ ಒಂದು ದಿನಾಂಕವನ್ನು ನಿಗದಿ ಮಾಡಿ ನಂತರ ಅಧಿಕಾರವನ್ನು ಸ್ವೀಕಾರ ಮಾಡುತ್ತೇನೆ ಎಂದರು..