ಸಿಹಿ ಸುದ್ದಿ ಕೊಟ್ಟ ಬಿಗ್‌ ಬಾಸ್ ಖ್ಯಾತಿಯ ದಿವ್ಯ ಸುರೇಶ್..

ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ಸಿನಿಜರ್ನಿ ಶುರು ಮಾಡಿದರೂ ಸಹ ಬಿಗ್ ಬಾಸ್ ಇಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು ನಟಿ ದಿವ್ಯ ಸಸುರೇಶ್. ರೌಡಿ ಬೇಬಿ ಸಿನಿಮಾ ಮೂಲಕ ನಟಿ ದಿವ್ಯ ಸುರೇಶ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ನೀಡಲಿಲ್ಲ. ಒಳ್ಳೆಯ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದ ದಿವ್ಯ ಸುರೇಶ್ ಇವರಿಗೆ ಸಿಕ್ಕ ದೊಡ್ಡ ಅವಕಾಶ ಬಿಗ್ ಬಾಸ್. ಒಮ್ಮೆ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದರೆ, ಜನಪ್ರಿಯತೆ, ರೆಕಗ್ನಿಶನ್ ಎಲ್ಲವೂ ಸಿಗುತ್ತದೆ. ದಿವ್ಯ ಸುರೇಶ್ ಅವರ ವಿಚಾರದಲ್ಲಿ ಆಗಿದ್ದು ಸಹ ಅದೇ. ಸಿನಿಮಾ ಇಂದ ಸಿಗದ ಜನಪ್ರಿಯತೆ ಬಿಗ್ ಬಾಸ್ ಜರ್ನಿಯಿಂದ ಸಿಕ್ಕಿತು, ಬಿಗ್ ಬಾಸ್ ಇಂದ ಬಂದ ನಂತರ ಕೆಲವು ಹೊಸ ಪ್ರಾಜೆಕ್ಟ್ ಗಳನ್ನು ಶುರು ಮಾಡಿರುವ ದಿವ್ಯ ಸುರೇಶ್ ಇದೀಗ ಮತ್ತೊಂದು ಹೊಸ ಸುದ್ದಿ ಹಂಚಿಕೊಂಡಿದ್ದಾರೆ. ಅದೇನು ಎಂದು ತಿಳಿಸುತ್ತೇವೆ ನೋಡಿ..

ಬಿಗ್ ಬಾಸ್ ಮನೆಯೊಳಗೆ ಬ್ಯೂಟಿ ವಿತ್ ಬ್ರೇನ್ಸ್ ಎನ್ನುವ ಹಾಗೆ ಇದ್ದವರು ದಿವ್ಯ ಸುರೇಶ್. ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿದ್ದ ದಿವ್ಯ, ಮನೆಯೊಳಗೆ ಧರಿಸುವ ಗ್ಲಾಮರಸ್ ಲುಕ್ಸ್ ಇಂದಲೇ ಹೆಚ್ಚು ಪಾಪ್ಯುಲಾರಿಟಿ ಗಳಿಸಿಕೊಂಡರು. ದಿವ್ಯ ಸುರೇಶ್ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಹೆಚ್ಚು ಸುದ್ದಿಯಾಗಲು ಮತ್ತೊಂದು ಕಾರಣ ಮಂಜು ಪಾವಗಡ ಜೊತೆಗಿನ ಸ್ನೇಹ. ಆರಂಭದಲ್ಲಿ ಮಂಜು ನಾನು ನಿಮ್ಮನ್ನ ಇಷ್ಟಪಡ್ತೀನಿ ಅಂತ ಹೇಳುತ್ತಾ, ಮಂಜು ಅವರ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದರು ದಿವ್ಯ, ಮಂಜು ಸಹ ದಿವ್ಯ ನಿಜವಾಗಲೂ ತನ್ನನ್ನು ಇಷ್ಟಪಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದರು. ಆದರೆ ಕೊನೆಯಲ್ಲಿ ನಾವಿಬ್ಬರು ಫ್ರೆಂಡ್ಸ್ ಆಗಿರೋಣ ಎಂದರು ದಿವ್ಯ.

ಬಿಗ್ ಬಾಸ್ ಇಂದ ಬಂದ ನಂತರ ದಿವ್ಯ ಸುರೇಶ್ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಸಿಗುತ್ತಿವೆ. ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂದೆಲ್ಲಾ ಸುದ್ದಿಗಳು ಕೇಳಿಬಂದಿದ್ದವು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ದಿವ್ಯ ಸುರೇಶ್ ಮುಖ್ಯ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಈ ಎನ್ನಲಾಗಿತ್ತು. ಆ ರೀತಿ ಸುದ್ದಿಗಳು ಬಂದ ಕೆಲವು ದಿನಕ್ಕೆ ದಿವ್ಯ ಸುರೇಶ್ ಅವರಿಗೆ ಅಪಘಾತವಾಗಿ ಗಾಯಗೊಂಡರು. ಈಗ ದಿವ್ಯ ಅವರು ಅದರಿಂದ ಗುಣಮುಖರಾಗಿದ್ದಾರೆ.

ಅಪಘಾತದ ಬಳಿಕ ದಿವ್ಯ ಸುರೇಶ್ ಬಗ್ಗೆ ಹೆಚ್ಚಿನ ಸುದ್ದಿಗಳು ಕೇಳಿಬಂದಿರಲಿಲ್ಲ. ಇದೀಗ ದಿವ್ಯ ಸುರೇಶ್ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ, ಈ ಹೊಸ ಸಿನಿಮಾ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಹ ಸಿಕ್ಕಿದೆ. ಕನ್ನಡದ ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್ ನಾಯಕನಾಗಿ ಅಭಿನಯಿಸುತ್ತಿರುವ ‘ಹಿರಣ್ಯ’ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ ದಿವ್ಯ ಸುರೇಶ್. ದಿವ್ಯ ಅವರನ್ನು ಚಿತ್ರತಂಡಕ್ಕೆ ವೆಲ್ಕಮ್ ಮಾಡಿ ಒಂದು ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.

ದಿವ್ಯ ಸುರೇಶ್ ಮತ್ತು ರಾಜ್ ವರ್ಧನ್ ಇಬ್ಬರು ಕೂಡ ಒಳ್ಳೆಯ ಸ್ನೇಹಿತರು. ಇದೀಗ ಹಿರಣ್ಯ ಸಿನಿಮಾ ಮೂಲಕ ಇಬ್ಬರಿಗೂ ಜೊತೆಯಾಗಿ ನಟಿಸುತ್ತಿದ್ದಾರೆ. ಮಾರ್ಚ್ 9 ರಿಂದ ದಿವ್ಯ ಸುರೇಶ್ ಭಾಗದ ಚಿತ್ರೀಕರಣ ಶುರುವಾಗಲಿದೆ. ಹಿರಣ್ಯ ಸಿನಿಮಾದ ಕಥೆ ವಿಭಿನ್ನವಾಗಿದ್ದು, ಎಲ್ಲಾ ವರ್ಗದ ಸಿನಿಪ್ರಿಯರಿಗೂ ಇಷ್ಟಾಗುವಂಥ ಕಥೆ ಎನ್ನಲಾಗಿದೆ. ಈ ಸಿನಿಮಾದ ಮೂಲಕ ಮಾಡೆಲ್ ರಿಹಾನ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವೇದಾಂತ್ ಇಂಫೈನೈಟ್ ಪಿಕ್ಚರ್ಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಯೋಗೇಶ್ವರ್ ರಾವ್ ಅವರು ಛಾಯಾಗ್ರಹಣ ಮಾಡುತ್ತಿದ್ದು, ಜ್ಯುಡಾ ಸ್ಯಾಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ..