ಕನ್ನಡ ಧಾರಾವಾಹಿಯ ನಟಿ ದಿವ್ಯಾ ಶ್ರೀಧರ್ ಪ್ರಕರಣಕ್ಕೆ ಊಹಿಸಿರದ ತಿರುವು.. ಹೊರಬಿತ್ತು ದಿವ್ಯಾ ಬಗ್ಗೆ ಅಸಲಿ ಸತ್ಯ..

ಕನ್ನಡ ಕಿರುತೆರೆಯ ಖ್ಯಾತ ನಟಿ ಆಕಾಶದೀಪ ಧಾರಾವಾಹಿ ಮೂಲಕ‌ ಮನೆ ಮಾತಾಗಿದ್ದ ನಟಿ ದಿವ್ಯಾ ಶ್ರೀಧರ್ ನಿನ್ನೆ ಸಾಮಾಜಿಕ ಜಾಲಾತಾಣದಲ್ಲಿ ತಮ್ಮ ಗಂಡನ ಕುರಿತು ವೀಡಿಯೋ ಹರಿಬಿಟ್ಟ ನಂತರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಇದೀಗ ನಿನ್ನೆ ತಡರಾತ್ರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಹೊಟ್ಟೆಯಲ್ಲಿರುವ ಮಗುವಿನ ವಿಚಾರ ತಿಳಿಸಿದ್ದಾರೆ.. ಆದರೆ ದಿವ್ಯಾ ಶ್ರೀಧರ್ ಅವರ ಪ್ರಕರಣಕ್ಕೆ ಬೇರೆಯದ್ದೇ ತಿರುವು ದೊರೆತಿದ್ದು ಈ ವಿಚಾರವಾಗಿ ದಿವ್ಯಾ ಬಗ್ಗೆ ಮತ್ತೊಂದು ವಿಚಾರ ಬಯಲಾಗಿದೆ..

ಹೌದು ದಿವ್ಯಾ ಶ್ರೀಧರ್ ಕನ್ನಡ ಕಿರುತೆರೆಯಲ್ಲಿ ವರ್ಷಗಳ ಹಿಂದೆ ಪ್ರಸಾರವಾದ ಆಕಾಶದೀಪ ಧಾರಾವಾಹಿ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದ ನಟಿ.. ಆನಂತರ ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳಲ್ಲಿಯೂ ಅಭಿನಯಿಸಿದರು.. ಆ ಬಳಿಕ ತಮಿಳಿನ ಕಿರುತೆರೆಗೆ ಕಾಲಿಟ್ಟ ನಟಿ ದಿವ್ಯಾ ಶ್ರೀಧರ್ ಅಲ್ಲಿಯೇ ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತುದ್ದು ಚೆನ್ನೈ ನಲ್ಲಿಯೇ ನೆಲೆಸಿದ್ದಾರೆ.. ಇನ್ನು ದಿವ್ಯಾ ಅವರು ಕಳೆದ ಐದು ವರ್ಷಗಳಿಂದ ಅಮ್ಜದ್ ಖಾನ್ ಅಲಿಯಾಸ್ ಆರ್ನವ್ ಎಂಬ ನಟನ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದು ಇಬ್ಬರೂ ಒಟ್ಟಿಗೆ ವಾಸ ಮಾಡುತ್ತಿರುತ್ತಾರೆ.. ಕೊರೊನಾ ಸಮಯದಲ್ಲಿ ಅಮ್ಜದ್ ಖಾನ್ ಗೆ ಕೆಲಸ ಇಲ್ಲದ ಕಾರಣ ದಿವ್ಯಾ ಅವರೇ ಅಮ್ಜದ್ ನನ್ನು ಸಾಕುತ್ತಿರುತ್ತಾರೆ.. ಆತನ ಎಲ್ಲಾ ಖರ್ಚು ವೆಚ್ಛಗಳನ್ನು ದಿವ್ಯಾ ಅವರೇ ನೋಡಿಕೊಳ್ಳುತ್ತಿರುತ್ತಾರೆ..

ಆ ಸಮಯದಲ್ಲಿ ಅಮ್ಜದ್ ಖಾನ್ ಮನೆ ಕೊಂಡುಕೊಳ್ಳಲು ಮುಂದಾದಾಗ ನಟಿ ದಿವ್ಯಾ ಅವರೇ ಮೂವತ್ತು ಲಕ್ಷ ರೂಪಾಯಿಗೆ ಲೋನ್ ಹಾಕಿಸಿಕೊಟ್ಟು ಅದಕ್ಕೆ ಪ್ರತಿ ತಿಂಗಳು ಮೂವತ್ತು ಸಾವಿರ ರೂಪಾಯಿ‌ಲೋನ್ ಕೂಡ ಕಟ್ಟುತ್ತಿರುತ್ತಾರೆ.. ಹೀಗೆ ದಿನ ಕಳೆದಂತೆ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದು ಕೆಲ ದಿನಗಳ ಹಿಂದೆ ಅಮ್ಜದ್ ಹಾಗೂ ದಿವ್ಯಾ ಶ್ರೀಧರ್ ಮದುವೆ ಮಾಡಿಕೊಂಡಿರುತ್ತಾರೆ.. ನಂತರ ಇಸ್ಲಾಂ ಪ್ರಕಾರವೂ ಅವರ ಮದುವೆ ನೆರವೇರುತ್ತದೆ..

ಆದರೆ ಇದೀಗ ದಿವ್ಯಾ ಗರ್ಭಿಣಿಯಾಗಿದ್ದು ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ.. ಮೊನ್ನೆ ರಾತ್ರಿ ದಿವ್ಯಾ ಮೇಲೆ ಕೈ ಮಾಡಿ ಅಲ್ಲಿಂದ ಅಮ್ಜದ್ ಖಾನ್ ಹೊರಟು ಹೋಗಿದ್ದು ದಿವ್ಯಾ ಹೊಟ್ಟೆಗೆ ಪೆಟ್ಟಾಗಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು ನಿನ್ನೆ ಈ ಎಲ್ಲಾ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮೂಲಕ ಹಂಚಿಕೊಂಡಿದ್ದರು.. ನಾನು ಆತನಿಗೆ ಎಲ್ಲವನ್ನೂ ಮಾಡಿದೆ.. ಆದರೆ ಅವನು ನನಗೆ ಮೋಸ ಮಾಡಿದ.. ಅವನ ಮಗು ನನ್ನ ಹೊಟ್ಟೆಯಲ್ಲಿದೆ ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು..

ಇನ್ನು ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಅಮ್ಜದ್ ಖಾನ್ ನ ಸುಳಿವು ಎಲ್ಲಿಯೂ ಪತ್ತೆ ಇಲ್ಲ.. ನಿನ್ನೆ ತಡರಾತ್ರಿ ಆಸ್ಪತ್ರೆಯಿಂದ ಹೊರ ಬಂದ ದಿವ್ಯಾ ಶ್ರೀಧರ್ ಚೆನ್ನೈ ನಲ್ಲಿಯೇ ಮಾದ್ಯಮದ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ.. ಆ ಸಮಯದಲ್ಲಿಯೂ ಆತನ ಜೊತೆ ತಮ್ಮ ಮದುವೆಯಾದ ಬಗ್ಗೆ ದಾಖಲೆಗಳನ್ನು ತೋರಿದ್ದಾರೆ.. ಜೊತೆಗೆ ತಮ್ಮ ಹೊಟ್ಟೆಯಲ್ಲಿ ಮಗು ಇರುವ ಬಗ್ಗೆ ತಿಳಿಸಿ ಅಮ್ಜದ್ ಖಾನ್ ತನಗೆ ಏನೇನು ಕಷ್ಟ ಕೊಟ್ಟ ಎಂಬುದನ್ನು ತಿಳಿಸಿದ್ದಾರೆ.. ಈಗ ಅವನು ನನ್ನ ಫೋನ್ ಬ್ಲಾಕ್ ಮಾಡಿದ್ದಾನೆ.. ಮೆಸೆಜ್ ಗೆ ರಿಪ್ಲೈ ಮಾಡುತ್ತಿಲ್ಲ.. ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡುದ್ದು ಈಗಲೂ ನನಗೆ ನನ್ನ ಗಂಡ ಬೇಕು ಎಂದಿದ್ದಾರೆ..ಆದರೆ ಈ ನಡುವೆ ದಿವ್ಯಾ ಬಗ್ಗೆ ಬೇರೆಯದ್ದೇ ವಿಚಾರ ಹೊರ ಬಂದಿದ್ದು ಪ್ರಕರಣಕ್ಕೆ ತಿರುವು ದೊರೆತಿದೆ..

ಹೌದು ಚೆನ್ನೈ ನಲ್ಲಿರುವ ದಿವ್ಯಾ ಶ್ರೀಧರ್ ಅವರ ವಿಚಾರ ಸುದ್ದಿಯಾಗುತ್ತಿದ್ದಂತೆ ಇತ್ತ ಕನ್ನಡದ ಮಾದ್ಯಮದವರು ದಿವ್ಯಾ ಅವರ ತಂದೆ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬೇರೆ ವಿಚಾರ ಹೊರ ಬಂದಿದೆ.. ಹೌದು ದಿವ್ಯಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು ಈ ಮದುವೆಯ ವಿಚಾರ ನಮಗೆ ತಿಳಿದೇ ಇಲ್ಲ ಎಂದಿದ್ದಾರೆ ಅವರ ತಂದೆ ಶ್ರೀಧರ್.. ಹೌದು ದಿವ್ಯಾ ಅವರಿಗೆ ಈ ಹಿಂದೆ ಮದುವೆಯಾಗಿದ್ದು ಆನಂತರ ಆ ಮದುವೆ ಮುರಿದು ಬಿದ್ದಿತ್ತು.. ಇತ್ತ ಪೋಷಕರ ಜೊತೆ ಸಂಪರ್ಕದಲ್ಲಿ ಇಲ್ಲದ ದಿವ್ಯಾ ಚೆನ್ನೈ ನಲ್ಲಿ ನೆಲೆಸಿ ಅಲ್ಲಿಯೇ ಅಮ್ಜದ್ ಖಾನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದು ಆತನಿಗೆ ಲಕ್ಷ ಲಕ್ಷ ಖರ್ಚು ಮಾಡಿ ಮನೆ ಕೊಡಿಸಿ.. ಕೊನೆಗೆ ಆತನನ್ನೇ ಎರಡನೇ ಮದುವೆ ಮಾಡಿಕೊಂಡಿದ್ದಾರೆ.. ಆದರೆ ಈ ಯಾವ ವಿಚಾರವೂ ದಿವ್ಯಾ ಅವರ ತಂದೆಗೆ ತಿಳಿದೇ ಇಲ್ಲ.. ಆಸ್ಪತ್ರೆಗೆ ಸೇರಿರುವ ವಿಚಾರವೂ ಅವರಿಗೆ ತಿಳಿದಿಲ್ಲ.. ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಯಾವ ಆಸ್ಪತ್ರೆ ಸರ್.. ನಮಗೆ ಯಾವ ವಿಚಾರವೂ ಗೊತ್ತಿಲ್ಲ.. ಏನಾಗಿದೆ ಅವರಿಗೆ ಎಂದಿದ್ದಾರೆ.. ದಿವ್ಯಾ ಅವರ ತಂದೆ ಮಾತನಾಡಿರುವ ಆಡಿಯೋ ಕೆಳಗಿದೆ ನೋಡಿ..

ಒಟ್ಟಿನಲ್ಲಿ ಹೆತ್ತವರಿಗೆ ತಿಳಿಯದೇ.. ಚೆನ್ನಾಗಿ ಸಂಪಾದನೆ ಮಾಡುವ ಸಮಯದಲ್ಲಿ ಹೆತ್ತವರನ್ನು ನೋಡಿಕೊಳ್ಳದೇ ಸಿಕ್ಕ ಸಿಕ್ಕವರಿಗೆ ಮನೆ ಕೊಡಿಸಿ ಲಕ್ಷ ಲಕ್ಷ ಖರ್ಚು ಮಾಡಿ.. ಆತನ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಆತನಿಂದಲೇ ಪೆಟ್ಟು ತಿಂದು ಇದೀಗ ಆತನೇ ಬೇಕು ಎಂದು ಮಾದ್ಯಮದ ಮುಂದೆ ಕಣ್ಣೀರಿಡುತ್ತಿರುವುದ ಕಂಡರೆ ನಿಜಕ್ಕೂ ತಿಳುವಳಿಕೆ ಪ್ರಬುದ್ಧತೆ ಇಲ್ಲವಾದರೆ ಇದೇ ರೀತಿಯಾಗಬಹುದು ಎನಿಸುತ್ತದೆ.. ಆಕರ್ಷಣೆಗಳಿಗೆ ಮನಸ್ಸು ಕೊಟ್ಟು ಈ ರೀ ಯಾರು ಮಾಡಿಕೊಳ್ಳಬೇಡಿ.. ಇರೋ ಒಂದು ಜೀವನ ಇಂತಹ ಮೋಸಗಳಿಗೆ ಯಾರೂ ಜೀವನ ಹಾಳು ಮಾಡಿಕೊಳ್ಳಬೇಡಿ ಅಷ್ಟೇ..