ಹೆಣ್ಣು ಮಗುವಿಗೆ ಜನ್ಮ ನೀಡಿದ ಪಬ್ಲಿಕ್ ಟಿವಿ ದಿವ್ಯ ಜ್ಯೋತಿ.. ಮಗು ಹೇಗಿದೆ ನೋಡಿ..

ಕನ್ನಡ ಕಿರುತೆರೆಯ ಖ್ಯಾತ ಸುದ್ದಿ ವಾಹಿನಿಗಳಲ್ಲಿ ಒಂದಾಗಿರುವ ಪಬ್ಲಿಕ್ ಟಿವಿಯ ನಿರೂಪಕಿ ದಿವ್ಯ ಜ್ಯೋತಿ ಇದೀಗ ತಾಯಿಯಾದ ಸಂತೋಷವನ್ನು ಹಂಚಿಕೊಂಡಿದ್ದಾರೆ.. ಹೌದು ದಿವ್ಯ ಜ್ಯೋತಿ ಕಳೆದ ತಿಂಗಳಷ್ಟೇ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿದ್ದು ಸಧ್ಯದಲ್ಲಿಯೇ ತಮ್ಮ ಕುಟುಂಬಕ್ಕೆ ನೂತನ ಕಂದನ ಆಗಮನವಾಗುತ್ತಿರುವ ವಿಚಾರ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದರು.. ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆಂದು ದಿವ್ಯ ಜ್ಯೋತಿ ಅವರ ಪತಿ ತಿಳಿಸಿದ್ದಾರೆ..

ದಿವ್ಯ ಜ್ಯೋತಿ ಕಳೆದ ಹದಿನೈದು ವರ್ಷಗಳಿಂದ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದು ಹತ್ತು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಖಾಯಂ ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ.. ಇನ್ನು ಪಬ್ಲಿಕ್ ಟಿವಿಯ ರಂಗನಾಥ್ ಅವರ ಜೊತೆ ಪ್ರೈಮ್ ಟೈಮ್ ನಲ್ಲಿ ಕಾಣಿಸಿಕೊಳ್ಳುವ ದಿವ್ಯ ಜ್ಯೋತಿ ಅವರು ಸಾಮಾಜಿಕ ಜಾಲತಾಣದಲ್ಲಿ ಡಿಂಪಲ್ ದಿವ್ಯಾ ಎಂದು ಖ್ಯಾತರಾಗಿದ್ದು ಮೆಮರ್ಸ್ ಗಳಿಗೆ ಟ್ರೋಲರ್ಸ್ ಗಳಿಗೆ ಒಂದು ರೀತಿ ಅಚ್ಚುಮೆಚ್ಚು ಎಂದರೂ ಸುಳ್ಳಲ್ಲ..

ತಮ್ಮ ವೀಡಿಯೋಗಳ ಜೊತೆ ಸೃಷ್ಟಿಯಾಗುವ ಹಾಸ್ಯ ವೀಡಿಯೋಗಳನ್ನು ತಾವು ಸಹ ನೋಡಿ ಸಂತೋಷ ಪಡುವ ದಿವ್ಯ ಜ್ಯೋತಿ ಅವರು ಎಲ್ಲವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಎಂಜಾಯ್ ಮಾಡೋದು ಉಂಟು.. ಇನ್ನು ಕಳೆದ ಮೂರು ವರ್ಷದ ಹಿಂದೆ ಇಂಜಿನಿಯರ್ ಆಗಿರುವ ಮಹೇಶ್ ಗೌಡ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಿವ್ಯ ಜ್ಯೋತಿ ಅವರು ಕಳೆದ ವರ್ಷ ಮಗುವಿನ ಆಗಮನದ ಸಂತೋಷವನ್ನು ಹಂಚಿಕೊಂಡಿದ್ದರು..

ಏಳು ತಿಂಗಳಿನ ವರೆಗೂ ಕಾರ್ಯ ನಿರ್ವಹಿಸಿ ಸಧ್ಯ ತಾಯ್ತನದ ಹಾರೈಕೆಯ ರಜೆ ತೆಗೆದುಕೊಂಡಿದ್ದು ಇನ್ನು ಆರು ತಿಂಗಳುಗಳ ಕಾಲ ದಿವ್ಯ ಜ್ಯೋತಿ ತೆರೆ ಮೇಲೆ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು.. ಇನ್ನು ಇತ್ತ ದಿವ್ಯಾ ಅವರಿಗಾಗಿ ಪತಿ ಮಹೇಶ್ ಗೌಡ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದು ವಾಹಿನಿ ಸ್ನೇಹಿತರು ಸಿನಿಮಾ ಸ್ನೇಹಿತರು ಸಂಬಂಧಿಕರು ಎಲ್ಲರೂ ಆಗಮಿಸಿ ತಾಯಿ ಹಾಗೂ ಮಗುವಿಗೆ ಶುಭ ಹಾರೈಸಿದ್ದರು‌.. ಇನ್ನು ಸ್ಟಾರ್ ಸುವರ್ಣ ವಾಹಿನಿಯ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿಯೂ ಸಹ ಮಹಿಳಾ ದಿನದ ವಿಶೇಷವಾಗಿ ದಿವ್ಯ ಜ್ಯೋತಿ ಅವರನ್ನು ಆಹ್ವಾನಿಸಿ ಸೀಮಂತ ಶಾಸ್ತ್ರ ನೆರವೇರಿಸಿ ಹಾರೈಸಿದ್ದರು..

ಇದೀಗ ಕಳೆದ ಹದಿನೈದು ದಿನದ ಹಿಂದೆ ಮಾರ್ಚ್ ಹನ್ನೊಂದರಂದು ದಿವ್ಯ ಜ್ಯೋತಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಹೇಶ್ ಹಾಗೂ ದಿವ್ಯ ಜ್ಯೋತಿ ತಮ್ಮ ಜೀವನಕ್ಕೆ ಕಂದನ ಬರಮಾಡಿಕೊಂಡಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ ಮಹೇಶ್ ಅವರು ಹೆಣ್ಣು ಮಗುವಿನ ಆಶೀರ್ವಾದವಾಗಿದೆ.. ಎಂದಿದ್ದರು.. ಮಗು ಹೇಗಿದೆ ಎಂದು ಸ್ನೇಹಿತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹೇಶ್ ತಾಯಿ‌ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.. ಸಧ್ಯ ಮಗುವಿನ ಆಗಮನದ ಸಂತೋಷದಲ್ಲಿರುವ ದಿವ್ಯ ಜ್ಯೋತಿ ಹಾಗೂ ಮಹೇಶ್‌ ದಂಪತಿಗೆ ಸ್ನೇಹಿತರು ಹಾಗೂ ಆಪ್ತರು ಶುಭಾಶಯ ತಿಳಿಸಿ ಮಗುವಿಗೆ ಶುಭ ಹಾರೈಸಿದ್ದಾರೆ..