ಅಧಿಕೃತವಾಗಿ ಸಿಹಿ ಸುದ್ದಿ ನೀಡಿದ ದಿವ್ಯಾ ಅರವಿಂದ್.. ಮದುವೆ ಯಾವಾಗ ಗೊತ್ತಾ..

ಬಿಗ್ ಬಾಸ್‍ ಸೀಸನ್ ಎಂಟರ ಸ್ಪರ್ಧಿಗಳು ಸಧ್ಯ ಸೀಸನ್ ಮುಗಿದ ಬಳಿಕ ಕೊಂಚ ವಿಶ್ರಾಂತಿ ಪಡೆದು ಇದೀಗ ತಮ್ಮ ತಮ್ಮ ವೃತ್ತಿ ಬದುಕಿನ ಬಗ್ಗೆ ಗಮನ ಕೊಟ್ಟು ಆಗಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.. ಇನ್ನು ಸೀಸನ್ ಎಂಟರಲ್ಲಿ ಸಾಕಷ್ಟು ಸ್ಪರ್ಧಿಗಳು ಒಂದೊಂದು ವಿಚಾರವಾಗು ಹೆಸರು ಮಾಡಿದ್ದರು.. ಶುಭಾ ಪೂಂಜಾ ತಮ್ಮ ಮೇಲೆ ಜನರಿಗಿದ್ದ ಅಭಿಪ್ರಾಯವನ್ನೇ ತಮ್ಮ ನಡವಳಿಕೆ ಮೂಲಕ ಬದಲಾಯಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದರು.. ಇನ್ನು ಇತ್ತ ದಿವ್ಯಾ ಉರುಡುಗ ಹಾಗೂ ಅರವಿಂದ್ ಈ ಸೀಸನ್ ನ ಕ್ಯೂಟ್ ಜೋಡಿಯೆಂದೇ ಹೆಸರಾದರು.. ಹೆಸರು ಮಾತ್ರವಲ್ಲದೇ ಆ ಜೋಡಿಯ ನಡುವಿನ ಪ್ರೀತಿ ಮದುವೆ ಹಂತದವರೆಗೂ ತಲುಪಿರುವುದು ದಿವ್ಯಾ ಹಾಗೂ ಅರವಿಂದ್ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ..

ಹೌದು ಚಂದನ್ ಹಾಗೂ ನಿವೇದಿತಾ ಗೌಡ ಜೋಡಿ ನಂತರ ಸಧ್ಯ ಅರವಿಂದ್ ದಿವ್ಯಾ ಜೋಡಿ ಬಿಗ್ ಬಾಸ್ ಜೋಡಿ ಎನಿಸಿಕೊಳ್ಳುತ್ತಿದ್ದು ಅದಾಗಲೇ ಇಬ್ಬರ ಮದುವೆ ವಿಚಾರ ಸದ್ದು ಮಾಡುತ್ತಿದೆ.. ಹೌದು ಒಂದು ಕಡೆ ಮಂಜು ಪಾವಗಡ ಬಿಗ್ ಬಾಸ್ ಸೀಸನ್ ಎಂಟರ ಗೆಲುವಿನ ಕಿರೀಟ ಪಡೆದು ಐವತ್ತ ಮೂರು‌ಲಕ್ಷ ರೂಪಾಯಿ ಬಹುಮಾನದ ಹಣವನ್ನು ತಮ್ಮದಾಗಿಸಿಕೊಂಡರು.. ಆದರೆ ಇತ್ತ ಅರವಿಂದ್ ಬಿಗ್ ಬಾಸ್ ಗೆಲ್ಲಲಿದ್ದಾರೆ ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು.. ಅದರಲ್ಲೂ ಅರವಿಂದ್ ಅಭಿಮಾನಿಗಳು ಅರವಿಂದ್ ಬಿಗ್ ಬಾಸ್ ಗೆಲ್ಲದಿದ್ದಾಗ ವಾಹಿನಿಯ ವೀಡಿಯೋಗಳಲ್ಲಿ ಬೇರೆ ಬೇರೆ ರೀತಿ ಭಾಷೆಯಲ್ಲಿ ಕಮೆಂಟ್ ಮೂಲಕ ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು..

ಆ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ದಯವಿಟ್ಟು ವಾಹಿನಿ ಬಗ್ಗೆ ಯಾರೂ ಏನೂ ಮಾತನಾಡಬೇಡಿ ವಾಹಿನಿಯಿಂದಲೇ ನನಗೆ ನಿಮ್ಮೆಲ್ಲರ ಪ್ರೀತಿ ಸಿಕ್ಕಿದ್ದು ಪಾಸಿಟಿವ್ ಆಗಿರಿ ಎಂದಿದ್ದರು.. ಆ ಸಮಯದಲ್ಲಿ ದಿವ್ಯಾ ಜೊತೆಗಿನ ಮದುವೆ ಬಗ್ಗೆ ಪ್ರಶ್ನೆ ಮಾಡಿದ ಜನರಿಗೆ ಅದು ನನ್ನ ವ್ಯಯಕ್ತಿಕ ವಿಚಾರವೆಂದಿದ್ದರು.. ಆ ಮಾತುಗಳನ್ನು ಕೇಳಿ ಇವರಿಬ್ಬರ ಪ್ರೀತಿ ಕೇವಲ ಶೋ ಗೆ ಮಾತ್ರ ಸೀಮಿತವಷ್ಟೇ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತು ಕೇಳಿ ಬಂದಿತ್ತು.. ಆದರೆ ಆದರೀಗ ದಿವ್ಯಾ ಉರುಡುಗ ಕಡೆಯಿಂದ ಸಿಹಿಸುದ್ದಿಯೊಂದು ಹೊರ ಬಂದಿದೆ.. ಹೌದು ದಿವ್ಯಾ ಉರುಡುಗ ತಮ್ಮ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಅರವಿಂದ್ ಜೊತೆಗಿನ ಫೋಟೋಗಳನ್ನೇ ಹಂಚಿಕೊಂಡಿದ್ದು ನಲವತ್ತಕ್ಕೂ ಹೆಚ್ಚು ಪೋಸ್ಟ್ ಗಳನ್ನು ಶೇರ್ ಸಹ ಮಾಡಿಕೊಂಡಿದ್ದಾರೆ..

ಅದರಲ್ಲೂ ಬಿಗ್ ಬಾಸ್ ಮನೆಯೊಂದ ಹೊರ ಬಂದ ನಂತರ ಅರವಿಂದ್ ಜೊತೆಗೆ ತೆಗೆಸಿರುವ ಆತ್ಮೀಯವಾದ ಫೊಟೋವನ್ನು ಸಹ ಹಂಚಿಕೊಂಡಿದ್ದು ತಮ್ಮಿಬ್ಬರ ನಡುವಿನ ಸಂಬಂಧದ ಕುರಿತು ಸಂತೋಷ ವ್ಯಕ್ತ ಪಡಿಸಿದ್ದಾರೆ.. ಜೊತೆಗೆ ಫೋಟೋಗಳ ಮೂಲಕ ಇವರಿಬ್ಬರ ಮದುವೆ ಸಹ ಖಚಿತ ಎನ್ನುವ ಅರ್ಥದಲ್ಲಿ ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಇಬ್ಬರ ನಡುವಿನ ಸ್ನೇಹ ಶುರುವಾಗಿ ಇಂದಿಗೆ ಆರು ತಿಂಗಳು ಕಳೆದಿದ್ದು ಇದೇ ಸಮಯದಲ್ಲಿ ಮನೆಗೆ ಹೊಸ ಅತಿಥಿಯನ್ನೂ ಸಹ ಬರಮಾಡಿಕೊಂಡಿದ್ದಾರೆ.. ಹೌದು ದಿವ್ಯಾ ಉರುಡುಗ ದುಬಾರಿ ಬೆಲೆಯ ಕಾರ್ ಒಂದನ್ನು ಕೊಂಡುಕೊಂಡಿದ್ದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಹನ್ನೆರೆಡು ಲಕ್ಷ ಮೌಲ್ಯದ ಹ್ಯುಂಡೈ ವೆನ್ಯೂ ಕಾರ್ ಅನ್ನು ಕೊಂಡುಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ಂಜ್ ಹಂಚಿಕೊಂಡಿದ್ದಾರೆ.. ಒಟ್ಟಿನಲ್ಲಿ ತನ್ನ ಹಾಗೂ ಅರವಿಂದ್ ನಡುವಿನ ಸ್ನೇಹ ಸಂಬಂಧದ ಆರು ತಿಂಗಳ ನೆನಪಿಗಾಗಿ ಕಾರ್ ಕೊಂಡುಕೊಂಡಿದ್ದು ಸಂಭ್ರಮದಲ್ಲಿದ್ದಾರೆ.. ಅಷ್ಟೇ ಅಲ್ಲದೇ ದಿವ್ಯಾ ಉರುಡುಗ ಅವರಿಗೆ ವಯಸ್ಸು ಸಹ ಮೂವತ್ತು‌ ದಾಟುತ್ತಿರುವ ಕಾರಣ ಮನೆಯಲ್ಲಿ‌ ಮದುವೆಯ ಬಗ್ಗೆ ಮಾತುಕತೆ ಶುರುವಾಗಿದ್ದು ಸಧ್ಯದಲ್ಲಿಯೇ ಅರವಿಂದ್ ಜೊತೆಗೆ ದಿವ್ಯಾ ಉರುಡುಗ ಕಲ್ಯಾಣ ನಡೆಯಲಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..