ಜ಼ೀ ವಾಹಿನಿಯಲ್ಲಿ ಪ್ರಸಾರವಾದ ದಿಯಾ ಸಿನಿಮಾ ಪಡೆದ ರೇಟಿಂಗ್ ಎಷ್ಟು ಗೊತ್ತಾ?

ಈ ವರ್ಷ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾದ ಸಿನಿಮಾಗಳು ಬಹಳ ಕಡಿಮೆ.. ಲಾಕ್ ಡೌನ್ ನಂತರ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ..‌ ಆದರೆ ಈ ವರ್ಷದ ಶುರುವಿನಲ್ಲಿ ಬಿಡಿಗಡೆಯಾದ ದಿಯಾ ಹಾಗೂ ಲವ್ ಮಾಕ್ಟೈಲ್ ಸಿನಿಮಾ ಈ ವರ್ಷದ ಅತ್ಯುತ್ತಮ ಸಿನಿಮಾಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆಯುತ್ತವೆ.. ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ಇರದಿದ್ದರೂ ಸಹ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದಾಗ ನಿರೀಕ್ಷೆಗೂ ಮೀರಿ ಜನಮನ್ನಣೆ ಪಡೆದುಕೊಂಡಿತ್ತು.. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ರೀರಿಲೀಸ್ ಮಾಡಿಸುವಂತೆಯೂ ಮನವಿ‌ ಮಾಡಿದ್ದರು.. ಆದರೆ ಅಷ್ಟರಲ್ಲಿ ಲಾಕ್ ಡೌನ್ ಆದ್ದರಿಂದ ಆ ವಿಚಾರ ಅಲ್ಲಿಗೆ ನಿಂತಿತ್ತು.. ಇನ್ನು ಲವ್ ಮಾಕ್ಟೈಲ್ ಸಿನಿಮಾದ ಮುಂದುವರೆದ ಭಾಗದ ಕತೆಯನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಿದ್ಧಪಡಿಸಿದ್ದು, ಕೊರೊನಾ ಕಳೆದ ಬಳಿಕ ಲವ್ ಮಾಕ್ಟೈಲ್ 2 ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದಿದ್ದಾರೆ..

ಇನ್ನು ದುರಂತ ಅಂತ್ಯ ಕಂಡ ದಿಯಾ ಸಿನಿಮಾವನ್ನು‌ ನೋಡಿದ ನಂತರ ಒಂದೆರೆಡು ದಿನಗಳು ಅದೇ ಗುಂಗು ಕಾಡುತಿದ್ದದ್ದು ಸತ್ಯ.. ಅಮೇಜಾನ್ ಪ್ರೈಮ್ ನಲ್ಲಿ ಹೆಚ್ಚಿನ ವೀವ್ಸ್ ಪಡೆದುಕೊಂಡ ದಿಯಾ ಸಿನಿಮಾವನ್ನು ಜ಼ೀ ಕನ್ನಡ ವಾಹಿನಿಯವರು ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದ್ದರು.. ಅದರಂತೆ ಕಳೆದ ವಾರ ಸಿನಿಮಾವನ್ನು ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.. ಎಂದಿನಂತೆ ಜ಼ೀ ವಾಹಿನಿ ಸಾಕಷ್ಟು ಜಾಹಿರಾತು ಪ್ರಕಟಿಸಿ ನಂತರ ಸಿನಿಮಾವನ್ನು‌ ಪ್ರಸಾರ ಮಾಡಿದ್ದರು..

ಅದರಂತೆ ಹೊಸಬರ ಸಿನಿಮಾ ಆದರೂ ಸಹ ಒಳ್ಳೆಯ ರೇಟಿಂಗ್ ಅನ್ನು ಪಡೆದುಕೊಂಡಿದ್ದು 4 ಟಿವಿಆರ್ ಪಡೆದುಕೊಂಡಿದೆ.. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ನೋಡಿ ಇನ್ನೂ ಹೆಚ್ಚಿನ ರೇಟಿಂಗ್ ನಿರೀಕ್ಷೆ ಇತ್ತು.. ಆದರೆ ಅದಾಗಲೇ ಸಿನಿಮಾವನ್ನು ಅಮೇಜಾನ್ ಪ್ರೈಮ್ ನಲ್ಲಿ ಸಾಕಷ್ಟು ಬಾರಿ ನೋಡಿದ್ದರಿಂದ ಟಿವಿಯಲ್ಲಿ ನೋಡುವ ವೀಕ್ಷಕರ ಸಂಖ್ಯೆ ಕಡಿಮೆ ಯಾಯಿತೆನ್ನಬಹುದು..

ಇನ್ನು ಕಳೆದ ವಾರದ ರೇಟಿಂಗ್ ಪ್ರಕಾರ ಧಾರಾವಾಹಿಗಳಲ್ಲಿ ಗಟ್ಟಿಮೇಳ ಮೊದಲ ಸ್ಥಾನದಲ್ಲಿದ್ದರೆ ಜೊತೆಜೊತೆಯಲಿ ಎರಡನೇ ಸ್ಥಾನ.. ಪಾರು ಮೂರನೇ ಸ್ಥಾನ.. ನಾಗಿಣಿ ನಾಲ್ಕನೇ ಸ್ಥಾನ ಪಡೆದರೆ.. ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ‌ ಮದುವೆ 5 ನೇ ಸ್ಥಾನ ಪಡೆದಿದೆ.. ಇನ್ನು ವಾಹಿನಿಗಳ ವಿಚಾರಕ್ಕೆ ಬಂದರೆ ಜ಼ೀ ಕನ್ನಡ ವಾಹಿನಿ‌ ಮೊದಲ ಸ್ಥಾನದಲ್ಲಿದ್ದು, ಉದಯ ಟಿವಿ ಎರಡನೇ ಸ್ಥಾನದಲ್ಲಿದೆ.. ಸ್ಟಾರ್ ಸುವರ್ಣ ಮೂರನೇ, ಕಲರ್ಸ್ ಕನ್ನಡ ನಾಲ್ಕನೇ ಹಾಗೂ ಉದಯ ಮೂವೀಸ್ ಐದನೇ ಸ್ಥಾನದಲ್ಲಿದೆ..

ಸುದ್ದಿ ವಾಹಿನಿಗಳ ರೇಟಿಂಗ್ ಪ್ರಕಾರ ಎಂದಿನಂತೆ ಟಿವಿ 9 ಮೊದಲ ಸ್ಥಾನ, ಪಬ್ಲಿಕ್ ಟಿವಿ ಎರಡನೇ ಸ್ಥಾನ.. ಸುವರ್ಣ ನ್ಯೂಸ್ ಮೂರನೇ ಸ್ಥಾನ.. ನ್ಯೂಸ್ 18 ನಾಲ್ಕನೇ ಸ್ಥಾನ.. ದಿಗ್ವಿಜಯ ನ್ಯೂಸ್ ಐದನೇ ಸ್ಥಾನದಲ್ಲಿದೆ..