ಧೃವ ಸರ್ಜಾ ಆಸ್ಪತ್ರೆಗೆ ದಾಖಲಾಗಿರೋದು ನಿಜ.. ಸ್ಪಷ್ಟನೆ ಕೊಟ್ಟ ಕುಟುಂಬದ ಆಪ್ತರು..

ಚಿರಂಜೀವಿ ಸರ್ಜಾ ಇಲ್ಲವಾಗಿ 28 ದಿನಗಳಾಗಿ ಹೋಯ್ತು.. ಸಮಯ ಯಾರ ಕೈಯಲ್ಲೂ ನಿಲ್ಲುವುದಿಲ್ಲ ಎಂಬುದಕ್ಕೆ‌ ಇದೇ ಉದಾಹರಣೆ.. ನಿನ್ನೆ‌ ಮೊನ್ನೆಯಷ್ಟೇ ಚಿರು ಸರ್ಜಾ ಅವರ ಅಂತ್ಯ ಸಂಸ್ಕಾರ ನಡೆದಂತಿದೆ.. ದಿನಗಳು ಉರುಳಿದವು ಆದರೆ ಅವರ ಕುಟುಂಬದ ನೋವು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ..

ಇನ್ನು ನಿನ್ನೆಯಿಂದ ಧೃವ ಸರ್ಜಾ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡಿತ್ತು.. ಧೃವ ಅವರ ಆರೋಗ್ಯದಲ್ಲಿ ಏರು ಪೇರು, ಖಿನ್ನತೆಗೆ ಒಳಗಾಗಿದ್ದಾರೆ ಹಾಗೆ ಹೀಗೆ ಅಂತ.. ದಯವಿಟ್ಟು ಯಾರೂ ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ.. ಅವರು ಕಳೆದುಕೊಂಡಿರುವುದು ಅವರ ಅಣ್ಣನನ್ನು… ಜೀವಕ್ಕೆ ಜೀವ ಎನ್ನುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದ ಹಾಗೆ ದೂರಾದರೆ ಎಂತವರಾದರೂ ಕುಗ್ಗಿ ಹೋಗುತ್ತಾರೆ.. ಅದೇ ರೀತಿ ಧೃವ ಸರ್ಜಾ ಅವರೂ ಸಹ ಬಹಳಷ್ಟು ನೋವಿನಲ್ಲಿದ್ದಾರೆ..

ಅದನ್ನು ಹೊರತುಪಡಿಸಿ ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಕುಟುಂಬದ ಆಪ್ತರು ಸ್ಪಷ್ಟನೆ ನೀಡಿದ್ದಾರೆ.. ಧೃವ ಸರ್ಜಾ ಅವರು ನಿದ್ರೆ ಬರುತ್ತಿಲ್ಲ ಎಂದಷ್ಟೇ ಆಸ್ಪತ್ರೆಗೆ ಭೇಟಿ‌ ನೀಡಿ ಚಿಕಿತ್ಸೆ ಪಡೆದು ಬಂದಿದ್ದಾರಷ್ಟೇ.. ಯಾವುದೇ ಮನೆಯಲ್ಲಾದರೂ ಸಾವು ಸಂಭವಿಸಿದಾಗ ಕುಟುಂಬದವರಲ್ಲಿ ಇದೇ ರೀತಿ ಆಗುತ್ತದೆ.. ಅದರಲ್ಲೂ ಚಿರು ಬಹಳ ಚಿಕ್ಕ ವಯಸ್ಸಿನವರು.. ಯಾರೂ ಕೂಡ ಈ ಘಟನೆಯನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ.‌ ಅದೇ ಕಾರಣಕ್ಕೆ‌ ಕುಟುಂಬ ಇನ್ನೂ ಸಹ ಶಾಕ್ ನಲ್ಲಿಯೇ ಇದೆ..

ಈ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಧೃವ ಸರ್ಜಾ ಅವರ ಮನೆಯ ಬಳಿ ತೆರಳಿದ್ದಾರೆ ಎನ್ನಲಾಗಿದೆ.. ಮನೆಗೆ ಬಂದ ಅಭಿಮಾನಿಗಳ ಬಳಿ ಅವರ ಪ್ರೀತಿಗೆ ಧನ್ಯವಾದಗಳನ್ನ ತಿಳಿಸಿ, ನನ್ನನ್ನು ನಾನು ನಿಭಾಯಿಸಿಕೊಳ್ಳಬಲ್ಲೇ.. ನನಗೇನು ಆಗಿಲ್ಲ.. ಆದರೆ ಸ್ವಲ್ಪ ದಿನ ನನ್ನನ್ನು ಒಬ್ಬನೆ ಇರಲಿ ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ..

ಯಾರೇ ಸ್ಟಾರ್ ಆದರೂ ಕುಟುಂಬದಲ್ಲಿ ಆತನೂ ಒಬ್ಬ ಸಾಮಾನ್ಯ ಸದಸ್ಯನೇ ಎಲ್ಲರಂತೆ ಆತನಿಗೂ ಭಾವನೆಗಳಿರುತ್ತವೆ.. ಅವರಿಗೆ ಅವರದ್ದೇ ಆದ ಪರ್ಸನಲ್ ಸ್ಪೇಸ್ ಅನ್ನೋದು ಬೇಕಿರುತ್ತದೆ.. ಧೃವ ಸರ್ಜಾ ಅವರಿಗೂ ಸಹ ಅದೇ ರೀತಿ ಕೆಲಸ ಸಮಯ ಕೊಟ್ಟು ಬಿಡುವುದೇ ಒಳ್ಳೆಯದೇ.. ನೋವಿನಿಂದ ಹೊರ ಬರುವುದು ಎಂದೂ ಸಾಧ್ಯವಿಲ್ಲ.. ಆದರೆ ಇದೇ ವಾಸ್ತವ ಬದುಕು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ.. ಅದಕ್ಕಾಗಿ ಅವರಿಗೂ ಸಮಯ ಬೇಕಿರುತ್ತದೆ..

ಆದರೆ ಇಂತಹ ಸಮಯದಲ್ಲಿ ಅವರ ಬಗ್ಗೆ ಊಹಾಪೋಹಗಳ ಸುದ್ದಿಯನ್ನು ಹರಡುವುದು ಬೇಡ.. ಅವರ ತಾಯಿ ಅಥವಾ ಪತ್ನಿ ಅಂತಹ ಕೆಟ್ಟ ಸುದ್ದಿಗಳನ್ನು ನೋಡಿದರೆ ಅವರ ಮನಸ್ಸಿಗೂ ನೋವುಂಟಾಗುತ್ತದೆ.. ಎಲ್ಲಕ್ಕಿಂತ ದೊಡ್ಡದು ಮನುಷ್ಯತ್ವ ಮಾತ್ರ.. ಅದನ್ನು ಮರೆಯದಿರೋಣ..