ಹೆಣ್ಣು ಮಗುವಿಗೆ ತಂದೆಯಾದ ಧೃವ ಸರ್ಜಾ.. ಮಗು ಹೇಗಿದೆ ನೋಡಿ..

ಸ್ಯಾಂಡಲ್ವುಡ್ ನ ನಟ ಧ್ರುವ ಸರ್ಜಾ ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ.. ಹೌದು ಕಳೆದ ತಿಂಗಳಷ್ಟೇ ತಮ್ಮ ಕುಟುಂಬಕ್ಕೆ ಮಗು ಆಗಮನದ ವಿಚಾರ ತಿಳಿಸಿದ್ದ ಧೃವ ಸರ್ಜಾ ಇದೀಗ ಹೆಣ್ಣು ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಪತ್ನಿ ಪ್ರೇರಣಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ..ಅದರಲ್ಲೂ ಗಾಂಧಿ ಜಯಂತಿ ದಿನವೇ ಹೆಣ್ಣು ಮಗು ಹುಟ್ಟಿರುವುದು ಮತ್ತೊಂದು ವಿಶೇಷ.. ನಿನ್ನ ಸಂಜೆ ಕೆಆರ್‌ ರಸ್ತೆಯಲ್ಲಿನ ಅಕ್ಷ ಆಸ್ಪತ್ರೆಗೆ ಪ್ರೇರಣಾ ದಾಖಲಾಗಿದ್ದರು.. ಇಂದು ಬೆಳಗ್ಗೆ 8.30 ರ ಸಮಯದಲ್ಲಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ..

ಹೌದು ಕಳೆದ ಎರಡು ವರ್ಷದ ಹಿಂದೆ ಸರ್ಜಾ ಕುಟುಂಬಕ್ಕೆ ರಾಯನ್ ರಾಜ್‌ ಸರ್ಜಾ ಎಂಟ್ರಿ ಕೊಟ್ಟಾಗ ನೋವಿನ ನಡುವೆಯೇ ಮಗು ಆಗಮನದ ಸಂಭ್ರಮ ಮನೆ ಮಾಡಿತ್ತು.. ಈಗ ಧ್ರುವ ಸರ್ಜಾ ಅವರ ಮಡದಿ ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕುಟುಂಬದಲ್ಲಿ ಸಂಭ್ರಮ ಹೆಚ್ಚಾಗಿದೆ.. ಹೌದು ವಾರ್ಡ್ ನ ಹೊರಗೆ ಧ್ರುವ ಸರ್ಜಾ ಅವರು ಆಸ್ಪತ್ರೆ ಗೌನ್ ಧರಿಸಿ ಕಾಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು..

ಸೆಪ್ಟೆಂರ್ 3ರಂದು ಧ್ರುವ ಸರ್ಜಾ ಮತ್ತು ಪ್ರೇರಣಾ ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ಹೊಸ ಅತಿಥಿ ಅಗಮನದ ಬಗ್ಗೆ ಸಿಹಿ ಸುದ್ದಿ ನೀಡಿದ್ದರು. ಸೆಪ್ಟೆಂಬರ್ 8ರಂದು ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಸಂಪ್ರದಾಯದ ಪ್ರಕಾರಣ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿತ್ತು. ಕೆಲವು ದಿನಗಳ ಹಿಂದೆ ಪ್ರೇರಣಾ ಆಪ್ತ ಸ್ನೇಹಿತರು ಮಾಡ್ರನ್ ಬೇಬಿ ಶವರ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧ್ರುವ ಮತ್ತು ಪ್ರೇರಣಾ ಅವರಿಗೆ ಆಲ್ ದಿ ಬೆಸ್ಟ್‌ ವಿಶ್‌ಗಳು ಹರಿದು ಬರುತ್ತಿದೆ.

ಈ ಹಿಂದೆ ಖಾಸಗಿ ಸಂದರ್ಶನದಲ್ಲಿ ಗಂಡು ಮಗು ಬೇಕಾ ಹೆಣ್ಣು ಮಗು ಬೇಕಾ ಎಂದು ಧ್ರುವ ಸರ್ಜಾಗೆ ಪ್ರಶ್ನೆ ಮಾಡಲಾಗಿತ್ತು. ಆಗ ಯಾವ ಮಗು ಹುಟ್ಟರೂ ಖುಷಿನೇ. ಈಗಾಗಲೆ ನಮ್ಮ ಗಂಡು ಮಗು ರಾಯನ್ ಇದ್ದಾನೆ ಹೆಣ್ಣು ಮಗು ಆಗಬೇಕು. ಪರ್ಸನಲ್ ಆಗಿ ನನಗೆ ಹೆಣ್ಣು ಮಗು ಅಂದ್ರೆ ತುಂಬಾನೇ ಇಷ್ಟ. ಹೆಣ್ಣು ಮಗುನೇ ಆಗಬೇಕು ಎಂದು ಧ್ರುವ ಸರ್ಜಾ ಹೇಳಿದ್ದಾರೆ. ಪ್ರೇರಣಾ ಪ್ರೆಗ್ನೆಂಟ್ ಆದ ಮೇಲೆ ಮುಖದಲ್ಲಿ ಸಖತ್ ಗ್ಲೋ ಬಂದಿದೆ ಎಂದು ನೆಟ್ಟಿಗರು ಹೆಣ್ಣು ಮಗುನೇ ಆಗೋದು ಎಂದು ಈ ಹಿಂದೆ ಗೆಸ್ ಮಾಡಿದ್ದರು.

ಅಣ್ಣನ ಮಗ ರಾಯನ್ ರಾಜ್ ಸರ್ಜಾ ಹುಟ್ಟಿದ ದಿನವೇ ಆಸ್ಪತ್ರೆ ಮುಂದೆ ಧ್ರುವ ಅಭಿಮಾನಿಗಳ ಜೊತೆ ಸೇರಿಕೊಂಡು ರಸ್ತೆಯಲ್ಲಿ ಪಟಾಕಿ ಹೊಡೆದು ಸ್ವೀಟ್ ಹಂಚಿದ್ದರು. ಅಲ್ಲದೆ ರಾಯನ್ ಹುಟ್ಟಿದ ಎರಡು ಮೂರು ದಿನಕ್ಕೆ ಮನೆಗೆ ಬೆಳ್ಳಿ ತೊಟ್ಟಿಲು ಗಿಫ್ಟ್ ಮಾಡಿದ್ದರು. ಈಗ ಸ್ವತಃ ಧೃವ ಸರ್ಜಾ ಅವರೇ ತಂದೆಯಾಗಿದ್ದು ಮನೆಗೆ ಮಹಾಲಕ್ಷ್ಮಿಯನ್ನು ಬರಮಾಡಿಕೊಂಡಿದ್ದಾರೆ.. ಇನ್ನು ಸಧ್ಯ ತಾಯಿ ಮಗು ಇಬ್ಬರೂ ಸಹ ಆರೋಗ್ಯವಾಗಿದ್ದು ನಾರ್ಮಲ್ ಡೆಲಿವೆರಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622