ಅಣ್ಣ ಸದಾ ನನ್ನ ಜೊತೆಯೇ ಇರ್ಬೇಕು.. ಅಂತಿಮ ಕಾರ್ಯದ ಜಾಗವನ್ನೇ ಬದಲಿಸಿಬಿಟ್ಟ ಧೃವ ಸರ್ಜಾ..

ಅಣ್ಣ ತಮ್ಮ ಎಂದರೆ ಹೀಗಿರಬೇಕು ಎನ್ನುವಂತೆ ಇದ್ದವರು ಚಿರು ಹಾಗೂ ಧೃವ ಸರ್ಜಾ.. ಆದರೆ ಆ ವಿಧಿಗೂ ಇವರಿಬ್ಬರ ನೋಡಿ‌ ಹೊಟ್ಟೆ ಕಿಚ್ಚು ಬಂದುಬಿಟ್ಟಿತ್ತೇನೋ.. ಚಿರು ಸರ್ಜಾ ಅವರನ್ನು ತಮ್ಮನಿಂದ ದೂರ ಮಾಡಿಯೇ ಬಿಟ್ಟಿತು..

ಚಿರು ಸರ್ಜಾ ವಯಸ್ಸಿನಲ್ಲಿ ಅಣ್ಣನಿರಬಹುದು.. ಆದರೆ ಧೃವ ಸರ್ಜಾ ಚಿರುವನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು.. ಬಹಳ ಸೌಮ್ಯ ಸ್ವಭಾವವಾದ್ದರಿಂದ ಅವರನ್ನು ಬಹಳ ಕೇರ್ ಮಾಡುವ ರೀತಿಯಲ್ಲಿ‌ ಧೃವ ಸರ್ಜಾ ನಡೆದುಕೊಳ್ಳುತ್ತಿದ್ದರು.. ಮನೆಯಲ್ಲಿ ಅಣ್ಣನಿಗೆ ಮಗುವಿನಂತೆ ಕೈತುತ್ತು ತಿನ್ನಿಸುತ್ತಿದ್ದ ವೀಡಿಯೋ ಕೂಡ ಈ ಮುನ್ನ ವೈರಲ್ ಆಗಿತ್ತು..

ಆದರೀಗ ಅಣ್ಣನಿಲ್ಲ ಎಂದು ಹೇಗೆ ತಡೆದುಕೊಳ್ಳುವರೋ ಧೃವ ಸರ್ಜಾ.. ಆ ಭಗವಂತ ಇವರ ಕುಟುಂಬಕ್ಕೆ ಕಲ್ಲು ಮನಸ್ಸು ಕೊಟ್ಟು ಬಿಡಲಿ ಎಂದೆನಿಸುತ್ತದೆ.. ಇದೀಗ ಚಿರು ಇಲ್ಲವಾದ ನಂತರವೂ ಧೃವ ಸರ್ಜಾ ಅವರು ತಮ್ಮ ಜೊತೆಯಲ್ಲಿಯೇ ಇರಿಸಿಕೊಳ್ಳಬೇಕು ಎಂದುಕೊಂಡಿದ್ದಾರೆ.. ಹೌದು ಧೃವ ಸರ್ಜಾ ಅವರು ಕಳೆದ ವರ್ಷ ಫಾರ್ಮ್ ಹೌಸ್ ಒಂದನ್ನು ತೆಗೆದುಕೊಂಡಿದ್ದರು.. ಅದೇ ಜಾಗದಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯ ಕ್ರಿಯೆ ನಡೆಯಬೇಕು ಎಂದಿದ್ದಾರೆ.. ಅಣ್ಣ ನನ್ನ ಜೊತೆಯೇ ಇರ್ಬೇಕು.. ನನ್ನ ಫಾರ್ಮ್ ಹೌಸ್ ನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದಿದ್ದಾರಂತೆ..

ತಾತ ಶಕ್ತಿ ಪ್ರಸಾದ್ ಅವರ ಅಂತ್ಯಕ್ರಿಯೆ ಮಧುಗಿರಿಯ ಜಕ್ಕೇನ ಹಳ್ಳಿಯಲ್ಲಿ‌ ನೆರವೇರಿತ್ತು.. ಚಿರು ಸರ್ಜಾ ಅವರ ಅಂತ್ಯ‌ಕ್ರಿಯೆಯೂ ಅಲ್ಲಿಯೇ ನೆರವೇರಲಿದೆ ಎನ್ನಲಾಗುತಿತ್ತು..‌ ಆದರೆ ಅಣ್ಣನನ್ನು ಬಿಟ್ಟಿರಲಾರದ ಧೃವ ಈ ನಿರ್ಧಾರ ತೆಗೆದುಕೊಂಡಿದ್ದಾರೆ.. ಕಮಕಪುರ ರಸ್ತೆ ಬಳಿಯ ನೆಲಗೂಳಿ ಗ್ರಾಮದಲ್ಲಿನ ಧೃವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ..