ಅಣ್ಣನನ್ನು ಕೊನೆಯದಾಗಿ ತಾನೇ ಹೊತ್ತು ನಡೆದು ದಾರಿಯ ಉದ್ದಕ್ಕೂ ಬಿಕ್ಕಿ ಬಿಕ್ಕಿ ಅತ್ತ ಧೃವ.. ಯಾರಿಗೂ ಬೇಡ ಈ ಸ್ಥಿತಿ..

ಚಿರಂಜೀವಿ ಸರ್ಜಾ ಅವರ ಅಂತಿಮ ಯಾತ್ರೆ ಶುರುವಾಗಿದೆ.. ಚಿಕ್ಕ ವಯಸ್ಸಿಗೆ ಬಾಳ ಪಯಣ ಮುಗಿಸಿ ಹೊರಟ ಚಿರಂಜೀವಿ ಕರುನಾಡೇ ಕಂಬನಿ‌ ಮಿಡಿದಿದೆ.. ಆ ಗರ್ಭಿಣಿ ಪತ್ನಿ ಮೇಘನಾರಿಗಾಗಿ ಎಲ್ಲರೂ ಪ್ರಾರ್ಥಿಸಿದ್ದಾರೆ.. ತಾನು ಹೆತ್ತ ಕಂದನ ಕೊನೆಯ ಯಾತ್ರೆ ನೋಡುವ ದೌರ್ಭಾಗ್ಯ ಯಾವ ತಾಯಿಗೂ ಬಾರದಿರಲಿ.. ಕೊನೆವರೆಗೂ ಜೊತೆಯಾಗಿರುವೆ ಎಂದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡ ಬಾಳ ಪಯಣ ಶುರುವಾಗುತ್ತಲೇ ಬಿಟ್ಟು ದೂರ ಹೋಗುವಾಗ ಆಗುವ ಆ ನೋವು ಯಾವ ಪತ್ನಿಗೂ ಬಾರದಿರಲಿ..

ರಾಮ ಲಕ್ಷ್ಮಣರಂತಿದ್ದ ಚಿರು ಧೃವ.. ಇಂದು ಚಿತು ದೂರವಾಗುವಾಗ ಧೃವನ ನೋವು ಯಾವ ತಮ್ಮನಿಗೂ ಬಾರದಿರಲಿ.. ನಿಜಕ್ಕೂ ಒಂದು ದಿನ ಕಳೆದರೂ ಅರಗಿಸಿಕೊಳ್ಳಲಾಗದ ಸತ್ಯ.. ಏನಾದರೂ ಮ್ಯಾಜಿಕ್ ರೀತಿಯಲ್ಲಿ ನಡೆ ಚಿರಂಜೀವಿ ಎದ್ದು ಬಂದು ಬಿಟ್ಟರೆ ಸಾಕೆನಿಸಿಬಿಡುತ್ತದೆ ಒಮ್ಮೊಮ್ಮೆ.. ಇದು ಹುಚ್ಚುತನ ಎನಿಸಿದರೂ ಕೂಡ ಮೇಘನಾ ಹಾಗೂ ಧೃವ ಸರ್ಜಾರನ್ನು ನೋಡಿದಾಗ ಈ ರೀತಿಯ ಹುಚ್ವು ಕಲ್ಪನೆ ಬರುವುದು ಸಹಜ.. ಆದರೆ ವಾಸ್ತವ ಕೈ ಮೀರಿ ಹೋಗಿದೆ..

ಇತ್ತ ಕನಕಪುರ ರಸ್ತೆಯಲ್ಲಿನ ಧೃವ ಸರ್ಜಾ ಅವರ ತೋಟದ ಮನೆಯಲ್ಲಿ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಯನ್ನು‌ ಮಾಡಿಕೊಳ್ಳಲಾಗಿದೆ.. ಮನೆಯ ಬಳಿ ಪಾರ್ಥೀವ ಶರೀರಕ್ಕೆ ಎಲ್ಲಾ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿದ್ದು ಕೊನೆಯದಾಗಿ ಪೂಜೆ ಸಲ್ಲಿಸಿ.. ಅವರನ್ನು ಹೊತ್ತು ಕೆಲ ದೂರ ಸಾಗುವ ಶಾಸ್ತ್ರವನ್ನು ಸ್ವತಃ ಧೃವ ಸರ್ಜಾರೇ ಹೆಗಲು ಕೊಟ್ಟು ಬಿಕ್ಕಿ ಬಿಕ್ಕಿ ಅತ್ತರು..

ಹೆಗಲ ಮೇಲೆ ಕೂರಿಸಿ ಆಟವಾಡಿಸಸಿ ಬೆಳೆಸಿದ್ದ ಮಾವ ಅರ್ಜುನ್ ಸರ್ಜಾ ಮತ್ತೊಂದು ಕಡೆ ಹೆಗಲು ಕೊಟ್ಟರು.. ನಿಜಕ್ಕೂ ಧೃವ ಸರ್ಜಾರ ಸ್ಥಿತಿ ಯಾರಿಗೂ ಬಾರದಿರಲಿ.. ಆತನ ಆಕ್ರಂದನ ಮುಗಿಲು ಮುಟ್ಟಿದೆ.. ಜವರಾಯನೇಕೆ ಜೇನು ಗೂಡಿಗೆ ಕಲ್ಲು ಹೊಡೆದುಬಿಟ್ಟ…..