ಸರ್ಜಾ ಕುಟುಂಬಕ್ಕೆ ಮತ್ತೊಂದು ನೋವಿನ ಸಂಗತಿ..

ಕರೋನಾ ಎಂಬ ಮಹಾಮಾರಿ ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್ ವುಡ್ ವರೆಗೆ ಸಾಕಷ್ಟು ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಅತ್ತ ಬಾಲಿವುಡ್ ನ ಬಚ್ಛನ್ ಕುಟುಂಬ ಇತ್ತೀಚಿಗೆ ಕರೋನಾಗೆ ಒಳಗಾಗಿರುವ ಸುದ್ಧಿ ವರದಿಯಾಗಿತ್ತು. ಹಾಗೆಯೇ ಸ್ಯಾಂಡಲ್ ವುಡ್ ನಲ್ಲಿ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರಿಗೂ ಕರೋನಾ ಪಾಸಿಟಿವ್ ಬಂದಿದ್ದು ಅಭಿಮಾನಿಗಳ ಮನಸ್ಸಿನಲ್ಲಿ ಆತಂಕ ಮೂಡಿಸಿತ್ತು. ಕಳೆದ ಜುಲೈ ೧೫ರಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಕರೋನಾ ಪಾಸಿಟಿವ್ ಎಂದು ತಿಳಿದ ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅರ್ಜುನ್ ಅವರಿಗೆ ಕರೋನಾ ಸೋಂಕು ಪತ್ತೆಯಾಗಿದೆ.
ಧ್ರುಮ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಸ್ವಲ್ಪ ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದು ಇದಿಗ ಹೋಮ್ ಕ್ಪಾರಂಟೈನ್ ನಲ್ಲಿದ್ದಾರೆ. ಇದರ ಬೆನ್ನಲ್ಲೇ ಐಶ್ವರ್ಯಾಗೂ ಕರೋನಾ ದೃಢವಾಗಿರುವುದು ನಿಜಕ್ಕೂ ದುಃಖದ ಸಂಗತಿ.
ಐಶ್ವರ್ಯಾ ಅರ್ಜುನ್ ತನ್ನ ಆರೋಗ್ಯದ ಬಗ್ಗೆ ತಾನೇ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುವುದರ ಮೂಲಕ ಅಭಿಮಾನಿಗಳ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದಾರೆ. “ ನನಗೆ ಕರೋನಾ ಪಾಸಿಟಿವ್ ದೃಢವಾಗಿದೆ, ಅಗತ್ಯವಾದ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ವೈದ್ಯಕೀಯ ತಂಡದ ಸಲಹೆ ಮೇರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ಇತ್ತೀಚಿಗೆ ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದವರು ಕರೋನಾ ಟೆಸ್ಟ್ ಮಾಡಿಸಿಕೊಳ್ಳಿ, ಸುರಕ್ಷಿತವಾಗಿರಿ” ಎಂದು ಐಶ್ವರ್ಯಾ ಅರ್ಜುನ್ ತನ್ನ ಆರೋಗ್ಯದ ಬಗ್ಗೆ ಬರೆದುಕೊಂಡಿದ್ದಾರೆ.

ಧ್ರುವ ಸರ್ಜಾ ಕೂಡ ಲೈವ್ ವಿಡಿಯೋ ಮಾಡುವುದರ ಮೂಲಕ ತನ್ನ ಹಾಗೂ ತನ್ನ ಪತ್ನಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ತಾವು ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ ಬಗ್ಗೆಯೂ ಹೇಳಿಕೊಂಡಿದ್ದರು.
ಸರ್ಜಾ ಅವರ ಕುಟುಂಬ ಸಂಪೂರ್ಣವಾಗಿ ಗುಣಮುಖರಾಗಲಿ, ಈ ನೋವುಗಳಿಂದ ಹೊರಬರಲಿ ಎಂದು ಸರ್ಜಾ ಕುಟುಂಬದ ಅಭಿಮಾನಿಗಳ ಕೋರಿಕೆ.