ಧರ್ಮಸ್ಥಳದ ದರ್ಶನದ ವಿಚಾರದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡ ಧರ್ಮಾಧಿಕಾರಿಗಳು..

ಕೊರೊನಾ ಕಾರಣದಿಂದಾಗಿ ದೇಶ ಸಂಪೂರ್ಣ ಲಾಕ್ ಡೌನ್ ಆಗಿತ್ತು.. ಎಲ್ಲಾ ದೇವಸ್ಥಾನಗಳು ಸಹ ಬಂದ್ ಆಗಿದ್ದವು.. ಅದೇ ರೀತಿಯಾಗಿ ನಾಡಿನ ಧರ್ಮ ಭೂಮಿ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದಲ್ಲಿಯೂ ಸಹ ಭಕ್ತರ ದರ್ಶನವನ್ನು ನಿಲ್ಲಿಸಲಾಗಿತ್ತು.. ಇದೀಗ ಲಾಕ್ ಡೌನ್ ಸಡಿಲಿಕೆಯ ಬಳಿಕ ದೇವಸ್ಥಾನಗಳು ತೆರೆಯಲು ಅನುಮತಿ ನೀಡಲಾಗಿದ್ದು, ಜೂನ್ 8 ರಿಂದ ಎಲ್ಲಾ ದೇವಸ್ಥಾನಗಳನ್ನು ಕೆಲ ಷರತ್ತುಗಳೊಂದಿಗೆ ತೆರೆಯಲಾಗುತ್ತಿದೆ..

ಅದೇ ರೀತಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತರ ಮುಕ್ತ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು ಇದರ ಜೊತೆಗೆ ಮಹತ್ವದ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ..

ಹೌದು ಈಗಾಗಲೇ ಜೂನ್ 1 ರಿಂದಲೇ ಧರ್ಮಸ್ಥಳದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.. ಆದರೆ ಪ್ರತಿದಿನ 800 ರಿಂದ ಸಾವಿರ ಜನರಿಗಷ್ಟೇ ಅವಕಾಶ ನೀಡಲಾಗಿತ್ತು‌.. ಆದರೆ ಜೂನ್ 8 ರಿಂದ ಮುಕ್ತ ಅವಕಾಶ ನೀಡಲಾಗುತ್ತಿದೆ.. ಆದರೆ ಬರುವ ಭಕ್ತಾದಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಿರಲೇ ಬೇಕು.. ಜೊತೆಗೆ ಸ್ಯಾನಿಟೈಸರ್ ಬಳಸಬೇಕು ಹಾಗೂ ದೇವಸ್ಥಾನದ ಬಳಿ ಏರ್ಪಡಿಸಿರುವ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಲೇಬೇಕು.. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಮಾಡಬೇಕಿದೆ.. ಯಾರಿಗಾದರೂ ಜ್ವರ ಕೆಮ್ಮು ಕಂಡುಬಂದರೆ ಅಂತವರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ.. ಭಕ್ತಾದಿಗಳು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ..

ಇದೆಲ್ಲದರ ಜೊತೆಗೆ ಬಹು ಮುಖ್ಯವಾಗಿ ಧರ್ಮಾಧಿಕಾರಿಗಳು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಅನ್ನಪೂರ್ಣ ಭೋಜನಾಲಯವನ್ನು ತೆರೆಯಲಾಗುತ್ತಿದೆ.. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.. ಹೌದು ಬಹುತೇಕ ದೇವಸ್ಥಾನಗಳಲ್ಲಿ ದರ್ಶನಕ್ಕೆ ಅವಕಾಶ ಮಾಡಲಾಗಿದ್ದು, ದಾಸೋಹವನ್ನು ಬಂದ್ ಮಾಡಲಾಗಿದೆ.. ಆದರೆ ಧರ್ಮಸ್ಥಳದಲ್ಲಿ ದಾಸೋಹ ಎಂದಿನಂತೆ ನಡೆಯಲಿದ್ದು, ಸಾಮಾಜಿಕ ಅಂತರದಲ್ಲಿಯೇ ದಾಸೋಹ ವ್ಯವಸ್ಥೆ ಮಾಡಲು ಸಂಪೂರ್ಣ ಸಿದ್ಧತೆಗಳು ನಡೆಯುತ್ತಿವೆ.. ಯಾರೊಬ್ಬರೂ ಹಸಿವಿನಿಂದ ಹೋಗಬಾರದು ಎಂದು ಹೆಚ್ಚಿನ ಗಮನ ಹರಿಸಿ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಧರ್ಮಾಧಿಕಾರಿಗಳು ತಿಳಿಸಿದ್ದಾರೆ..