ನಟ ಧನ್ವೀರ್ ಹಾಗೂ ನಟಿ ಶ್ರೀಲೀಲಾ ಮದುವೆ? ನೇರವಾಗಿ ಹೆಣ್ಣು ಮಗುವಿನ ಬಗ್ಗೆಯೇ ಮಾತನಾಡಿ ಧನ್ವೀರ್ ಹೇಳಿದ್ದೇನು ಗೊತ್ತಾ?

ಚಂದನವನಕ್ಕೆ ಎಂಟ್ರಿ ಕೊಟ್ಟು ಮೊದಲ ಸಿನಿಮಾ ಇಂದಲೇ ಒಳ್ಳೆಯ ಭರವಸೆ ಮೂಡಿಸಿರುವ ನಟ ಧನ್ವೀರ್ ಗೌಡ. ನೋಡಲು ಹ್ಯಾಂಡ್ಸಮ್ ಆಗಿರುವ ಧನ್ವೀರ್, ಜಿಮ್ ನಲ್ಲಿ ದೇಹ ದಂಡಿಸಿ ಒಳ್ಳೆಯ ಬಾಡಿ ಇಂದಾಗಿ ಇನ್ನಷ್ಟು ಫೇಮಸ್ ಆದರು. ಧನ್ವೀರ್ ನಟಿಸಿದ ಮೊದಲ ಸಿನಿಮಾ ಬಜಾರ್, ಮೊದಲ ಸಿನಿಮಾ ಸೂಪರ್ ಹಿಟ್ ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಆರಂಭ ಪಡೆದುಕೊಂಡರು. ಇವರ ನಟನೆ ಕೂಡ ಚೆನ್ನಾಗಿರುವ ಕಾರಣ ಧನ್ವೀರ್ ಅವರಿಗೆ ಸಾಕಷ್ಟು ಸಿನಿಮಾ ಆಫರ್ ಗಳು ಬರುತ್ತಿವೆ. ಆದರೆ ಈ ಯುವನಟ ತಮ್ಮನ್ನು ಅರಸಿ ಬರುತ್ತಿರುವ ಎಲ್ಲಾ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬಹಳ ಸೆಲೆಕ್ಟಿವ್ ಆಗಿ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಜಾರ್ ನಂತರ ಧನ್ವೀರ್ ಅಭಿನಯದ ಇನ್ಯಾವುದೇ ಸಿನಿಮಾ ಇನ್ನು ತೆರೆಕಂಡಿಲ್ಲ.

ಧನ್ವೀರ್ ಗೌಡ ಅಭಿನಯದ ಎರಡನೇ ಸಿನಿಮಾ ಬೈ ಟು ಲವ್, ಈ ಸಿನಿಮಾದಲ್ಲಿ ಧನ್ವೀರ್ ನಾಯಕಿಯಾಗಿ ಕ್ಯೂಟ್ ಬೆಡಗಿ ಶ್ರೀಲೀಲಾ ನಟಿಸಿದ್ದಾರೆ. ಒಂದು ವರ್ಷಕ್ಕಿಂತ ಈ ಸಿನಿಮಾ ಸೆಟ್ಟೇರಿತು, ಆದರೆ ಕರೊನಾ ಕಾರಣದಿಂದಾಗಿ ಬೈ ಟು ಲವ್ ಸಿನಿಮಾ ತೆರೆಕಂಡಿರಲಿಲ್ಲ, ಈಗ ಸಿನಿಮಾದ ಎಲ್ಲಾ ಕೆಲಸಗಳು ಮುಗಿದಿದ್ದು, ಇದೇ ವರ್ಷ ಫೆಬ್ರವರಿ 25ರಂದು ಬೈ ಟು ಲವ್ ಸಿನಿಮಾ ತೆರೆಕಾಣಲಿದೆ. ಬೈ ಟು ಲವ್ ಸಿನಿಮಾದ ಒಂದೆರಡು ಹಾಡುಗಳು ರಿಲೀಸ್ ಆಗಿದ್ದು, ವೀಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಧ್ಯಕ್ಕೆ ನಟ ಧನ್ವೀರ್ ಗೌಡ ಮತ್ತು ನಟಿ ಶ್ರೀಲೀಲಾ ಇಬ್ಬರು ಕೂಡ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಂದರ್ಶನ ಒಂದರಲ್ಲಿ ತಾನು ಮದುವೆಯೇ ಆಗುವುದಿಲ್ಲ ಎಂದಿದ್ದಾರೆ ನಟ ಧನ್ವೀರ್ ಗೌಡ. ಆ ರೀತಿ ಹೇಳಿದ್ದೇಕೆ ನಟ ಧನ್ವೀರ್?

ಬೈ ಟು ಲವ್ ಸಿನಿಮಾ ಪ್ರಚಾರದ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಧನ್ವೀರ್ ಮತ್ತು ಶ್ರೀಲೀಲಾ ಸಿನಿಮಾ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಬೈ ಟು ಲವ್ ಸಿನಿಮಾ ಕೇವಲ ಒಂದು ಹುಡುಗ ಹುಡುಗಿ ನಡುವೆ ನಡೆಯುವ ಪ್ರೀತಿ ಪ್ರೇಮದ ಕಥೆಯಲ್ಲ. ಪ್ರೀತಿಸಿದ ಮೇಲೆ ಆ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರಂತೆ. ಒಂದು ಹುಡುಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಬಹುದು, ಅಳುವಿನ ಮೂಲಕ, ಅಥವಾ ತನ್ನೆದುರು ಇರುವ ವ್ಯಕ್ತಿಗೆ ಬಯ್ಯುವ ಮೂಲಕ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತಾಳೆ, ಒಂದು ಹುಡುಗಿ ಕಣ್ಣಲ್ಲಿ ನೀರು ಬಂದರೆ ಯಾರು ಆಕೆಯನ್ನು ಜಡ್ಜ್ ಮಾಡುವುದಿಲ್ಲ, ಪಾಪ ಹೆಣ್ಣುಮಗು ಅಳುತ್ತಿದೆ ಅಂತ ಬಿಟ್ಟುಬಿಡ್ತಾರೆ. ಆದರೆ ಹುಡುಗರಿಗೆ ಹಾಗಲ್ಲ, ಹುಡುಗರು ಎಲ್ಲಾ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕು, ಹುಡುಗರು ಅತ್ತರೆ ಬೇರೆ ಥರಾನೇ ಮಾತಾಡ್ತಾರೆ, ಹುಡುಗರು ಎಲ್ಲವನ್ನು ಹೇಗೆ ಸಹಿಸಿಕೊಂಡು ಇರುತ್ತಾರೆ ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ ಎನ್ನುತ್ತಾರೆ ಶ್ರೀಲೀಲಾ.

ಹಾಗೆಯೇ ಈ ಸಿನಿಮಾದಲ್ಲಿ ಒಂದು ಪುಟ್ಟ ಮಗು ಕೂಡ ಅಭಿನಯಿಸಿದೆ. ಮಗುವನ್ನು ನೋಡಿಕೊಂಡು, ಮಗು ಮಲಗುವ ವರೆಗೂ ಕಾದಿದ್ದು, ಚಿತ್ರೀಕರಣ ಮಾಡುವುದು ಬಹಳ ಕಷ್ಟವಾಗಿತ್ತು ಎನ್ನುತ್ತಾರೆ ಧನ್ವೀರ್ ಗೌಡ. ಮಗು ಅಳುವಾಗ ರೌಡಿ ಬೇಬಿ ಹಾಡನ್ನು ಹಾಕಿದರೆ ಅಳು ನಿಲ್ಲಿಸುತ್ತಿತ್ತು, ಮಗುವನ್ನು ಸಂಭಾಳಿಸಿ ಚಿತ್ರೀಕರಣ ಮಾಡುವಷ್ಟರಲ್ಲಿ ಸಾಕಾಗಿತ್ತು ಎಂದು ಧನ್ವೀರ್ ಹೇಳಿದಾಗ, ಪಕ್ಕದಲ್ಲೇ ಇದ್ದ ಶ್ರೀಲೀಲಾ, ಇಂಥವರಿಗೆ ದೇವರು ಹೆಣ್ಣು ಮಕ್ಕಳನ್ನ ಕೊಡೋದು ಎಂದು ಹೇಳುತ್ತಾರೆ. ತಕ್ಷಣವೇ
ಧನ್ವೀರ್ ನಾನು ಮದುವೆ ಆದ್ರೆ ಅಲ್ವಾ ನನಗೆ ಹೆಣ್ಣುಮಗು ಹುಟ್ಟೋದಕ್ಕೆ, ನಾನು ಮದುವೆ ಆಗೋದೆ ಇಲ್ಲ ಎಂದು ಹೇಳುತ್ತಾರೆ.

ಇದನ್ನು ಕೇಳಿ ಒಂದು ಕ್ಷಣ ಶ್ರೀಲೀಲಾ ಮತ್ತು ಮಾಧ್ಯಮದವರು ಇಬ್ಬರು ಶಾಕ್ ಆಗುತ್ತಾರೆ. ಆದರೆ ಆ ಕೂಡಲೇ ಶ್ರೀಲೀಲಾ ಮತ್ತು ಮಾಧ್ಯಮದವರು ಇಬ್ಬರು ಕೂಡ, ಈ ಥರಾ ಹೇಳೋರೇನೆ ಬೇಗ ಮದುವೆ ಆಗೋದು ಎಂದು ಧನ್ವೀರ್ ರನ್ನು ರೇಗಿಸುತ್ತಾರೆ. ಹೀಗೆ ತಮಾಷೆಯಾಗಿ ನಡೆಯಿತು ಶ್ರೀಲೀಲಾ ಮತ್ತು ಧನ್ವೀರ್ ಸಂದರ್ಶನ. ಇತ್ತೀಚೆಗೆ ನಟ ಧನ್ವೀರ್ ಮೂರನೇ ಸಿನಿಮಾ ಒಪ್ಪಿಕೊಂಡಿದ್ದಾರೆ, ಆ ಹೊಸ ಸಿನಿಮಾಗೆ ‘ವಾಮನ’ ಎಂದು ಹೆಸರಿಡಲಾಗಿದೆ. ಪ್ರತಿ ಸಿನಿಮಾದಲ್ಲೂ ಹೊಸತನ ಹುಡುಕುವ ಧನ್ವೀರ್ ಅಭಿನಯದ ಮೂರನೇ ಸಿನಿಮಾ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಶುರುವಾಗಿದೆ.

ಇನ್ನು ಶ್ರೀಲೀಲಾ ಅವರ ವಿಚಾರಕ್ಕೆ ಬರುವುದಾದರೆ, ಕನ್ನಡ ಚಿತ್ರರಂಗಕ್ಕೆ ಕಿಸ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಸಿನಿಮಾ ಇಂದಲೇ ಕರ್ನಾಟಕದ ಹುಡುಗರ ಕ್ರಶ್ ಎನ್ನಿಸಿಕೊಂಡರು. ನಂತರ ಶ್ರೀಮುರಳಿ ಅವರ ಜೊತೆ ಭರಾಟೆ ಸಿನಿಮಾದಲ್ಲಿ ನಟಿಸಿದರು. ಇತ್ತೀಚೆಗೆ ಪೆಲ್ಲಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ ಗು ಎಂಟ್ರಿ ಕೊಟ್ಟು, ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡಿದ್ದಾರೆ. ಅನೇಕ ತೆಲುಗು ಸಿನಿಮಾ ಆಫರ್ ಗಳು ಕೂಡ ಶ್ರೀಲೀಲಾರನ್ನು ಹುಡುಕಿಕೊಂಡು ಬರುತ್ತಿವೆ ಎನ್ನಲಾಗಿದೆ. ಸಧ್ಯಕ್ಕೆ ಕನ್ನಡದಲ್ಲಿ ಶ್ರೀಲೀಲಾ ಮತ್ತು ಧನ್ವೀರ್ ಅಭಿನಯದ ಬೈ ಟು ಲವ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾ ಸಕ್ಸಸ್ ಕಾಣಲಿ ಎಂದು ಹಾರೈಸೋಣ.