ಸ್ಟಾರ್ ನಟಿ ದೀಪಿಕಾ ಪಡುಕೋಣೆ ಧರಿಸಿರುವ ಇದೊಂದು ಸೀರೆಯ ಬೆಲೆಯಲ್ಲಿ 50 ಸೀರೆ ಬರುತ್ತಿತ್ತು.. ಈ ದುಬಾರಿ ಸೀರೆಯ ಬೆಲೆ ಎಷ್ಟು ಗೊತ್ತಾ.. ಶಾಕ್‌ ಆಗ್ತೀರಾ..

ಬಾಲಿವುಡ್ ನಟಿಯರು ಸ್ಟೈಲ್ ಮತ್ತು ಗ್ಲಾಮರ್ ಗೆ ಹೇ ಚು ಪ್ರಾಮುಖ್ಯತೆ ಕೊಡುತ್ತಾರೆ. ಅವರು ಧರಿಸುವ ಉಡುಪುಗಳು, ಅದಕ್ಕೆ ತಕ್ಕಂತಹ ಓಲೆ, ಸ್ಯಾಂಡಲ್ಸ್, ಬ್ಯಾಗ್, ಸರಿಹೊಂದುವ ಮೇಕಪ್, ಹೀಗೆ ಅನೇಕ ರೀತಿಯಲ್ಲಿ ತಮ್ಮನ್ನು ತಾವು ಸುಂದರವಾಗಿ ಕಾಣುವ ಹಾಗೆ ಮಾಡಿಕೊಳ್ಳುತ್ತರೆ. ಒಬ್ಬೊಬ್ಬ ನಟಿಯ್ ಸ್ಟೈಲ್ ಸ್ಟೇಟ್ಮೆಂಟ್ ಗಳು ವಿಭಿನ್ನವಾಗಿ ಇರುವುದು ವಿಶೇಷ. ಬಾಲಿವುಡ್ ನಲ್ಲಿ ಹಲವು ವರ್ಷಗಳಿಂದ ನಾಯಕಿಯಾಗಿ ನೆಲೆಯೂರಿ, ಇಂದಿಗೂ ಬಾಲಿವುಡ್ ಮತ್ತು ಹಾಲಿವುಡ್ ಎರಡು ಚಿತ್ರರಂಗದಲ್ಲೂ ಭಾರಿ ಬೇಡಿಕೆ ಉಳಿಸಿಕೊಂಡಿರುವವರು ನಟಿ ದೀಪಿಕಾ ಪಡುಕೋಣೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಎಲ್ಲರ ಗಮನ ಸೆಳೆದಿದ್ದು, ಇದೊಂದು ಸೀರೆಯ ಬೆಲೆಯಲ್ಲಿ, 50 ಸೀರೆಗಳನ್ನು ಕೊಂಡುಕೊಳ್ಳಬಹುದು ಎನ್ನಲಾಗುತ್ತಿದೆ.

ನಟಿ ದೀಪಿಕಾ ಮೂಲತಃ ಬೆಂಗಳೂರಿನ ಹುಡುಗಿ. ಕನ್ನಡದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿ, ನಂತರ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಮೊದಲ ಸಿನಿಮಾದಲ್ಲೇ ಬಾಲಿವುಡ್ ಬಾದ್ ಶಾ, ಶಾರುಖ್ ಖಾನ್ ಅವರೊಡನೆ ನಟಿಸುವ ಅವಕಾಶ ಪಡೆದುಕೊಂಡರು ದೀಪಿಕಾ, ಓಂ ಶಾಂತಿ ಓಂ ಸಿನಿಮಾದಲ್ಲಿ ಎರಡು ತರಹದ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಅಲ್ಲಿಂದ ದೀಪಿಕಾ ಪಡುಕೋಣೆ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು.

ಎಲ್ಲಾ ಸ್ಟಾರ್ ಗಳಿಗೂ ನಾಯಕಿಯಾಗಿ ನಟಿಸಿ, ಲಕ್ಕಿ ಹೀರೋಯಿನ್ ಆಗಿ, ಬೇಡಿಕೆ ಉಳಿಸಿಕೊಂಡರು ದೀಪಿಕಾ. ಬಾಲಿವುಡ್ ನಲ್ಲಿ ಇಷ್ಟು ವರ್ಷಗಳ ಕಾಲ ಅದೇ ರೀತಿಯ ಬೇಡಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ದೀಪಿಕಾ ಪಡುಕೋಣೆ ಅವರು ಅದ್ಭುತವಾದ ನಟನೆ, ಸ್ಟೈಲ್, ಫ್ಯಾಶನ್, ಒಳ್ಳೆಯ ಗುಣ ನಡತೆ ಇದೆಲ್ಲದರಿಂದ ವಿಶ್ವಮಟ್ಟದಲ್ಲಿ ಅಭಿಮಾನಿ ಬಳಗ ಗಳಿಸಿ, ಇಂದಿಗೂ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ. ಬಾಲಿವುಡ್ ಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಹಾಲಿವುಡ್ ನಲ್ಲಿ ಸಹ ಸಿನಿಮಾದಲ್ಲಿ ನಟಿಸಿದ್ದಾರೆ ದೀಪಿಕಾ ಪಡುಕೋಣೆ. ಅಲ್ಲಿಯೂ ಸಹ ಇವರಿಗೆ ಬೇಡಿಕೆ ಇದೆ.

ಹಾಲಿವುಡ್ ನಲ್ಲಿ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ ದೀಪಿಕಾ. ಜೊತೆಗೆ ಸೌತ್ ಚಿತ್ರರಂಗದ ಕಡೆಗೆ ಮತ್ತೊಮ್ಮೆ ಮುಖ ಮಾಡಿದ್ದಾರೆ. ಬಾಹುಬಲಿ ನಟ ಪ್ರಭಾಸ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.. ದೀಪಿಕಾ ಪಡುಕೋಣೆ ಅಭಿನಯದ ಗೆಹರಾಯಿಯಾ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು. ತಮ್ಮ ಸ್ಟೈಲ್ ಇಂದಲೇ ಹೆಚ್ಚು ಸುದ್ದಿಯಾಗುವ ದೀಪಿಕಾ ಪಡುಕೋಣೆ ಅವರು, ಮಾರ್ಚ್ 28ರಂದು ಮುಂಬೈ ನಲ್ಲಿ ನಡೆದ ಕಾರ್ಯಕ್ರಮ ಒಂದಕ್ಕೆ ಧರಿಸಿದ್ದ ಸೀರೆಯೊಂದರ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇದೊಂದು ಡಿಸೈನರ್ ಸೀರೆ ಆಗಿದ್ದು, ಬಹಳ ವಿಶೇಷವಾಗಿ ಈ ಸೀರೆಯನ್ನು ತಯಾರಿಸಲಾಗಿದೆ.

ಸಿಲ್ವರ್ ಬಣ್ಣದ ಟಿಕ್ಲಿ ವರ್ಕ್ ಇರುವ ಸೀರೆಯನ್ನು ಧರಿಸಿದ್ದ ದೀಪಿಕಾ, ಸ್ಟನ್ನಿಂಗ್ ಆಗಿ ಕಾಣುತ್ತಿದ್ದರು. ಈ ಸೀರೆಯಲ್ಲಿ ದೀಪಿಕಾ ಅವರನ್ನು ನೋಡಿ ಫಿದಾ ಆಗದವರೆ ಇಲ್ಲ. ಸೆಟ್ಟೇಡ್ ಮೆಟೀರಿಯಲ್ ಇಂದ ತಯಾರಿಸಲಾಗಿರುವ ಈ ಸೀರೆ ಬಹಳಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಸೀರೆಯಲ್ಲಿ ಹೂವಿನ ಕಸೂತಿಯ ವರ್ಕ್ ಇದೆ, ದುಬಾರಿಯಾದ ಹಾಗೂ ತೆಳುವಾದ ದಾರದಿಂದ ಸೀರೆಯನ್ನು ಮಾಡಲಗಿದ್ದು, ಮೀನು ಮತ್ತು ಹೂವುಗಳ ಡಿಸೈನ್ ನ ಕಸೂತಿ ಈ ಸೀರೆಯಲ್ಲಿದೆ. ಈ ಸ್ಪೆಷಲ್ ಸೀರೆಯ ಪ್ರತಿಯೊಂದು ಕೆಲಸವನ್ನು ಸಹ ಕೈಯಿಂದಲೇ ಕಸೂತಿ ಮಾಡಿರುವುದು ಇದರ ಮತ್ತೊಂದು ವಿಶೇಷ..

ಇದಕ್ಕೆ ಸಿಲ್ವರ್ ಬಣ್ಣದ ಟಿಕ್ಲಿಯನ್ನು ಸೂಕ್ಷ್ಮವಾಗಿ ಜೋಡಿಸಲಾಗಿದೆ. ಈ ಸೀರೆಗೆ ಮಿರರ್ ವರ್ಕ್ ಇರುವ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದರು ದೀಪಿಕಾ ಪಡುಕೋಣೆ. ಸಬ್ಯಸಾಚಿ ಮುಖರ್ಜಿ ಅವರು ಈ ಸೀರೆ ಡಿಸೈನ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರೇ ಈ ರೀತಿಯ ಸೀರೆ ಬೇಕು ಎಂದು ವಿಶೇಷವಾಗಿ ಡಿಸೈನ್ ಮಾಡಿಸಿದ್ದಾರೆ. ಈ ಸೀರೆಯ ಬೆಲೆ ಬರೋಬ್ಬರಿ 1.50 ಲಕ್ಷ ರೂಪಾಯಿ ಆಗಿದೆ. ಕೆಲವು ನೆಟ್ಟಿಗರು ತಾವು ಈ ರೀತಿಯ ಸೀರೆ ಕೊಂಡುಕೊಳ್ಳಬಹುದಿತ್ತು ಎನ್ನುತ್ತಿದ್ದಾರೆ. ಇನ್ನು ಕೆಲವರು ಇಷ್ಟು ಬೆಲೆಯಲ್ಲಿ 100 ಸೀರೆಗಳನ್ನು ಕೊಂಡುಕೊಳ್ಳಬಹುದಿತ್ತು ಎನ್ನುತ್ತಿದ್ದಾರೆ.