ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ದೀಪಿಕಾ ದಾಸ್.. ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಿಗ್ ಬಾಸ್ ಸೀಸನ್ 7 ರಲ್ಲಿ ಟಾಪ್ ನಾಲ್ಕನೇ ಸ್ಥಾನದಲ್ಲಿ ಹೊರ ಬಂದ ದೀಪಿಕಾ ದಾಸ್ ಅವರು ಪಡೆದ ಸಂಭಾವನೆ ಇಡೀ ಮನೆಯಲ್ಲಿ ಮಹಿಳಾ ಸದಸ್ಯರಲ್ಲಿ ಅತಿ ಹೆಚ್ಚಿನ ಸಂಭಾವನೆಯಾಗಿದೆ..

ಹೌದು ಬಿಗ್ ಬಾಸ್ ಸೀಸನ್ 7 ಇನ್ನೊಂದು ದಿನ ಮಾತ್ರ ಬಾಕಿ ಇರುವಾಗ ಸತತ 111 ದಿನಗಳ ಜರ್ನಿಯನ್ನು ಸಂಪೂರ್ಣಗೊಳಿಸಿ ಹೊರ ಬಂದ ದೀಪಿಕಾ ದಾಸ್ ಅವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ಮಾತನಾಡಿಯೇ ಮನೆಯೊಳಗೆ ಕಳುಹಿಸಿದ್ದರು..

ಹೌದು ನಾಗಿಣಿ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ದೀಪಿಕಾ ಅವರಿಗೆ ಧಾರಾವಾಹಿಯಲ್ಲಿಯೂ ಅತಿ ಹೆಚ್ಚು ಸಂಭಾವನೆ ಅಂದರೆ ದಿನವೊಂದಕ್ಕೆ 8 ಸಾವಿರ ಸಂಭಾವನೆಯನ್ನು ನೀಡಲಾಗುತಿತ್ತು..

ಅದೇ ಕಾರಣಕ್ಕೆ ದೀಪಿಕಾ ದಾಸ್ ಅವರಿಗೆ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಹೆಚ್ಚಿಗೆ ಸಂಭಾವನೆಯನ್ನು ಮಾತನಾಡಲಾಗಿತ್ತು.. ಇದ್ದಷ್ಟು ಮಹಿಳಾ ಸದಸ್ಯರ ಪೈಕಿ ದೀಪಿಕಾ ಅವರಿಗೆ ಮಾತ್ರ ಇಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಲಾಗಿದೆ..

ಹೌದು ದೀಪಿಕಾ ದಾಸ್ ಅವರಿಗೆ ವಾರಕ್ಕೆ 50 ಸಾವಿರ ರೂಪಾಯಿಗಳಂತೆ ಸಂಭಾವನೆಯನ್ನು ಮಾತನಾಡಲಾಗಿತ್ತು.. ಅದರಂತೆ ಒಟ್ಟು 111 ದಿನಗಳು ಅಂದರೆ 16 ವಾರದ ಜರ್ನಿ ಮುಗಿಸಿರುವ ಕಾರಣ ಅವರಿಗೆ ವಾರಕ್ಕೆ 50 ಸಾವಿರದಂತೆ ಒಟ್ಟು 8 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಲಾಗಿದೆ..

ಇನ್ನುಳಿದಂತೆ ಪುರುಷ ಸದಸ್ಯರಲ್ಲಿ ಕುರಿ ಪ್ರತಾಪ್ ಅವರಿಗೆ ಅತಿ ಹೆಚ್ಚಿನ ಸಂಭಾವನೆಯಾಗಿದ್ದು ವಾರವೊಂದಕ್ಕೆ 80 ಸಾವಿರ ನೀಡಲಾಗುತ್ತಿದೆ ಎನ್ನಲಾಗಿದೆ..