ದರ್ಶನ್ ಮಾಡಿದ ದೊಡ್ಡ ಕೆಲಸ ಕಂಡು, ಕೈಯೆತ್ತಿ ಮುಗಿದ ಸರ್ಕಾರ.

ಇಡೀ ಭಾರತ ದೇಶ ಈ ಮಹಾಮಾರಿಯಿಂದಾಗಿ ಬಂದಾಗಿದ್ದು, ಇದರಿಂದ ಬಡವರು ನಿರ್ಗತಿಕರು ಬಹಳ ಕಷ್ಟವನ್ನು ಅನುಭವಿಸುವಂತಾಗಿದೆ. ಈ ನಡುವೆ ನಮ್ಮ ಸೂಪರ್ ಸ್ಟಾರ್ ಗಳು, ಉದ್ಯಮಿಗಳು, ಸ್ವಯಂಸೇವಕ ಸಂಘದವರು ಬಡವರಿಗೆ ಸಹಾಯ ಮಾಡಲು ಮುಂದಾಗಿರುವುದು ನಿಜಕ್ಕೂ ಎಲ್ಲರೂ ಮೆಚ್ಚುವಂಥ ವಿಚಾರ.

ಮೊನ್ನೆಮೊನ್ನೆಯಷ್ಟೇ ಪುನೀತ್ ರಾಜ್ಕುಮಾರ್ ಅವರು ಐವತ್ತು ಲಕ್ಷ ರುಪಾಯಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟಿದ್ದರು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಕಷ್ಟ ಎಂದಾಗ ಮುಂದೆ ಬರುವ ದರ್ಶನ ರವರು ಕಾಣ್ತಿಲ್ಲ ಅವರ್ಯಾಕೆ ಇನ್ನು ದೇಣಿಗೆಯನ್ನು ಕೊಟ್ಟಿಲ್ಲ ಅಂತ ಎಲ್ಲರೂ ಮಾತನಾಡಿಕೊಂಡಿದ್ದರು.

ಆದರೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ ದವರು ಇಂಥ ಕಷ್ಟದ ಸಮಯದಲ್ಲಿ ಎಂಥ ಮಹಾನ್ ಕೆಲಸ ಮಾಡಿದ್ದಾರೆ, ಮತ್ತು ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತ ಬಯಲಾಗಿದೆ. ಆದರೆ ದರ್ಶನ ದವರು ಮಾಡಿದ ದೊಡ್ಡ ಕೆಲಸವೇನೂ ಮತ್ತು ನಿಜಕ್ಕೂ ಕೊಟ್ಟಿರುವ ದುಡ್ಡೆಷ್ಟು ನೋಡೋಣ ಬನ್ನಿ.

ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾಡಿರುವ ಕೆಲಸಕ್ಕೆ ಅಭಿಮಾನಿಗಳು ಮಾತ್ರವಲ್ಲ, ಮೈಸೂರಿನ ಸಂಸದರಾದ ಪ್ರತಾಪ್ ಸಿಂಹ ಅವರು ಕೂಡ ಫಿದಾ ಆಗಿದ್ದು ದರ್ಶನ್ ಅವರಿಗೆ ಕೈ ಮುಗಿದು ಧನ್ಯವಾದಗಳನ್ನು ತಿಳಿಸಿದ್ದಾರೆ. ಇದು ಚಾಲೆಂಜಿಂಗ್ ದರ್ಶನ್ ಅವರೆಂದೂ ತಾವು ಮಾಡುವ ಸಹಾಯದ ಬಗ್ಗೆ ಹೇಳಿಕೊಳ್ಳುವುದಿಲ್ಲ.

ತಮ್ಮ ಒಳ್ಳೆಯ ಕೆಲಸದ ಲೆಕ್ಕ ದೇವರಿಗೆ ಮಾತ್ರ ನೀಡಬೇಕು ಎನ್ನುವವರು. ಈಗಲೂ ಅದೇ ರೀತಿ ಕಷ್ಟದ ಸಮಯದಲ್ಲಿ ತಮ್ಮ ಅಭಿಮಾನಿಗಳ ಮೂಲಕ ನೂರಾರು ಬಡವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಹೌದು, ದರ್ಶನ್ ಅವರು ಭಾರತ್ ಬಂದಾದ ದಿನದಿಂದಲೂ ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಕೂಡ ರಸ್ತೆ ಬದಿಯಲ್ಲಿ ವಾಸ ಮಾಡುವ ನಿರ್ಗತಿಕರಿಗೆ ಹಾಗೂ ಹಸಿದ ಪ್ರತಿಯೊಬ್ಬರಿಗೂ ಕೂಡ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ.

ಪ್ರತಿದಿನ ಐನೂರರಿಂದ ಆರುನೂರು ಜನ ಹಸಿದವರ ಹೊಟ್ಟೆ ತುಂಬಿಸುವ ಪುಣ್ಯದ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ಬರಿ ಊಟ ಮಾತ್ರವಲ್ಲ ಪ್ರತಿದಿನ ಟೀ ಕೂಡ ಮಾಡಿಕೊಟ್ಟು, ನಿರ್ಗತಿಕರನ್ನು ತಮ್ಮ ಮನೆಯವರಂತೆ ಕಾಣುತ್ತಿದ್ದಾರೆ. ಈ ಕೆಲಸವನ್ನು ಕಣ್ಣಾರೆ ಕಂಡ ಪ್ರತಾಪ್ ಸಿಂಹ ಅವರು ಮೂರು ಹೊತ್ತು ಇಷ್ಟು ಜನರಿಗೆ ಊಟ ಕೊಡುವುದು ಸುಲಭದ ಮಾತಲ್ಲ, ಚಾಮುಂಡೇಶ್ವರಿ ತಾಯಿ ದರ್ಶನ್ ಅವರಿಗೆ ಇದೇ ರೀತಿ ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಶಕ್ತಿ ನೀಡಲಿ ಅಂತ ಮನತುಂಬಿ ಹಾರೈಸಿ ಕೈ ಮುಗಿದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಎಲ್ಲರ ಕಣ್ಣಿಗೆ ಕಾಣುವಂತೆ ಮಾಡುವುದು ಮಾತ್ರ ಸಹಾಯವಲ್ಲ, ಈ ರೀತಿ ಯಾರಿಗೂ ಗೊತ್ತಾಗದಂತೆ ಮಾಡುವುದೇ ನಿಜವಾದ ಸಹಾಯ. ಅದರಲ್ಲೂ ಹಸಿದವರಿಗೆ ಅನ್ನ ಹಾಕುವುದು ಅಂದರೆ ಅದು ನೂರು ಕೋಟಿ ದುಡ್ಡು ಕೊಟ್ಟಿದ್ದ ಕ್ಕಿಂತಲೂ ದೊಡ್ಡದು.