ಬ್ರೇಕಿಂಗ್ ನ್ಯೂಸ್ ದಾವುದ್ ಗೆ ಕೊರೊನಾ ಪಾಸಿಟಿವ್.. ಯಾರೇ ಬಿಟ್ಟರೂ ದೇವರು ಬಿಡ್ತಾನಾ?

ದಾವುದ್ ಇಬ್ರಾಹಿಂ ಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.. ಹೌದು ದಾವುದ್ ಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದಾಗಿ ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿದೆ.. ಅಷ್ಟೇ ಅಲ್ಲದೆ ಆತನ ಪತ್ನಿಗೂ ಸೋಂಕು ಅಂಟಿಕೊಂಡಿದ್ದು ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ..

ಅಂದು ಮುಂಬೈ ನಲ್ಲಿ ಈತನಿಂದ ನಡೆದ ದುರ್ಘಟನೆಯಿಂದಾಗಿ ತಪ್ಪೇ ಮಾಡದ ಅದೆಷ್ಟೋ ಜೀವಗಳು ಹೋಗಿದ್ದವು.. ಇಂದು ಲಸಿಕೆಯೇ ಇಲ್ಲದ ರೋಗ ಈತನಿಗೆ ಕಾಣಿಸಿಕೊಂಡಿದ್ದು, ಎಲ್ಲರ ಕೈಲೂ ತಪ್ಪಿಸಿಕೊಂಡವ ದೇವರ ಬಳಿ ತಪ್ಪೊಸಿಕೊಳ್ಳಲಾದೀತೆ ಎನ್ನುವುದು ಸತ್ಯವಾಗಿದೆ..

ಹೌದು ದಾವುದ್ ಹಾಗೂ ಆತನ ಪತ್ನಿಗೆ ಸೋಂಕು ಇರುವುದು ಧೃಡಪಟ್ಟಿದೆ ಎಂದು ಪಾಕಿಸ್ಥಾನದ ಉನ್ನತ ಮೂಲಗಳು ಖಚಿತ ಪಡಿಸಿದೆ.. ಪಾಕ್‍ನ ಸರ್ಕಾರಿ ಮೂಲಗಳ ಪ್ರಕಾರ ದಾವೂದ್ ಮತ್ತು ಅವನ ಪತ್ನಿ ಮೆಹಜಾಬಿನ್‍ಗೂ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಅವರನ್ನು ಕರಾಚಿಯಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಇಟ್ಟು ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಜೊತೆಗೆ ದಾವೂದ್ ಜೊತೆ ಇದ್ದ ಅವನ ಭದ್ರತಾ ಸಿಬ್ಬಂದಿಗಳಿಗೂ ಸೋಂಕು ಹಬ್ಬಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಪಾಕ್ ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ..

ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಈತ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿದ್ದಾನೆ ಎನ್ನಲಾಗುತಿತ್ತು.. 1993 ರ ಮುಂಬೈ ದುರ್ಘಟನೆಗೆ ಈತನೇ ಪ್ರಮುಖ ರುವಾರಿಯಾಗಿದ್ದು ಹಲವಾರು ಇಂಟರ್ ಪೋಲ್ ನೋಟೀಸ್ ಜಾರಿಯಾಗಿದೆ.. ಆದರೆ ಆತ ಮಾತ್ರ ಕರಾಚಿಯಲ್ಲಿ ಅವಿತಿದ್ದಾನೆ ಎನ್ನಲಾಗುತಿತ್ತು.. ಆದರೆ ಸಂದರ್ಭವೇ ಆತ ಹೊರ ಬರುವಂತೆ ಮಾಡಿಬಿಟ್ಟಿತು..