ಗ್ರಾಮಕ್ಕೆ ರಸ್ತೆ ಆಗೋ ವರೆಗೂ ಮದುವೆಯಾಗಲ್ಲ ಎಂದಿದ್ದ ಯುವತಿ ಏನಾದಳು ಗೊತ್ತಾ..

ಸಾಮಾಜಿಕ ಜಾಲತಾಣವನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಂಡರೆ ಅದರಿಂದ ಸಾಕಷ್ಟು ಅನುಕೂಲಗಳನ್ನು ಪಡೆಯಬಹುದು ಎಂಬುದು ಅಕ್ಷರಶಃ ಸತ್ಯದ ಮಾತು.. ಅದೇ ರೀತಿ ಸಾಕಷ್ಟು ಜನರು ಆಗಾಗ ಕೆಲವೊಂದು ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದು ಆ ಸಮಸ್ಯೆಗಳು ಬಗೆಹರಿಯಲು ಸಹ ಕಾರಣರಾಗ್ತಾರೆ.. ಇನ್ನು ರಾಜಕೀಯ ಮುಖಂಡರುಗಳು ಕೆಲವೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಒಂದು ಕಮೆಂಟ್ ಗಳಿಗೂ ಸಹ ಪ್ರತಿಕ್ರಿಯೆ ನೀಡಿ ಸಾಮಾನ್ಯರ ನೆರವಿಗೆ ಬರುವಂತಹ ಕೆಲವೊಂದು ಘಟನೆಗಳು ಕೊರೊನಾ ಸಮಯದಲ್ಲಿ ನಡೆದಿರುವುದು ನಿಜಕ್ಕೂ ಮೆಚ್ಚುವಂತಹ ವಿಚಾರ.. ಇನ್ನು ಕೆಲ ದಿನಗಳ ಹಿಂದಷ್ಟೇ ಯುವತಿಯೊಬ್ಬರು ತಮ್ಮ ಗ್ರಾಮಕ್ಕೆ ರಸ್ತೆ ಆಗೋವರೆಗೂ ನಾನು ಮದುವೆಯಾಗೊಲ್ಲ ಎಂದು ವೀಡಿಯೋ ಮಾಡಿ ಹಾಕಿದ್ದು ಜೊತೆಗೆ ಈ ಬಗ್ಗೆ ಮುಖ್ಯ ಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ಸಹ ಬರೆದು ಈ ಬಗ್ಗೆ ಗಮನ ಸೆಳೆಯಲು ಮುಂದಾಗಿದ್ದರು..

ಆನಂತರ ಆ ಯುವತಿಯ ಕತೆ ಏನಾಯ್ತು.. ಆ ಗ್ರಾಮದ ರಸ್ತೆ ಕತೆ ಏನಾಯ್ತು.. ಅದಕ್ಕೂ ಮೀರಿ ಆಕೆಯ ಮದುವೆ ಆಯ್ತಾ ಎಂಬೆಲ್ಲಾ ಕುತೂಹಲಗಳು ಇದ್ದವು.. ಆದರೆ ಸದ್ಯ ಆ ಯುವತಿ ಏನಾದಳು ಇಲ್ಲಿದೆ ನೋಡಿ.. ಆಕೆಯ ಹೆಸರು ಬಿಂದು ದಾವಣಗೆರೆ ಜಿಲ್ಲೆಯ ಹೆಚ್ ರಾಂಪುರ ಎಂಬ ಗ್ರಾಮದ ಯುವತಿ.. ಈ ಗ್ರಾಮ ನಗರದಿಂದ ಕೇವಲ ನಲವತ್ತು ಕಿಲೋಮೀಟರ್ ದೂರವಿದ್ದರೂ ಸಹ ಆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳು ಇರಲಿಲ್ಲ.. ರಸ್ತೆಯಿಲ್ಲ ಬಸ್ ಇಲ್ಲ.. ಹೀಗೆ ಅಲ್ಲಿನ ಜನರು ಸಾಕಷ್ಟು ತೊಂದರ್ಸ್ ಅನುಭವಿಸುತ್ತಿದ್ದರು.. ಹೆಣ್ಣು ಮಕ್ಕಳು ಕಾಲೇಜಿಗೆ ಹೋಗಬೇಕೆಂದರೆ ಆರೇಳು ಕಿಲೋಮೀಟರ್ ನಡೆದು ಕೊಂಡು ಸಾಗಬೇಕಿತ್ತು.. ಈ ತೊಂದರೆಗೆ ಎಷ್ಟೋ ಜನರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸದೇ ಮದುವೆ ಮಾಡಿ ಕಳುಹಿಸುತ್ತಿದ್ದರು.. ಆದರೆ ಬಿಂದು ಎಂಬ ಹೆಣ್ಣು ಮಗಳು ಈ ಬಗ್ಗೆ ವೀಡಿಯೋ ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಳು.. ಗ್ರಾಮದಲ್ಲಿ ರಸ್ತೆ ಹಾಗೂ ಬಸ್ ಸೌಕರ್ಯ ಇಲ್ಲದ ಕಾರಣ ಹೆಚ್ಚು ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ..

ಹೆಣ್ಣು‌ ಮಕ್ಕಳು ಹೆಚ್ಚು ಓದಿಲ್ಲವೆಂಬ ಕಾರಣಕ್ಕೆ ಮದುವೆಯಾಗಲು ಉನ್ನತ ವ್ಯಾಸಂಗ ಮಾಡಿರುವ ಹುಡುಗರು ಮುಂದೆ ಬರ್ತಿಲ್ಲಾ.. ಜನರಿಗೆ ಸಾಕಷ್ಟು ತೊಂದರೆ ಆಗ್ತಾ ಇದೆ.. ಗ್ರಾಮಕ್ಕೆ ರಸ್ತೆ ಆಗೋವರೆಗೂ ನಾನು ಮದುವೆಯಾಗೊಲ್ಲಾ ಎಂದು ತಿಳಿಸಿದ್ದಳು.. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಮಹಂತೇಶ್ ಬೀಳಗಿ ಅವರು ತಕ್ಷಣ ಈ ಬಗ್ಗೆ ಸ್ಪಂದಿಸಿ ಖುದ್ದು ಅವರೇ ರಾಂಪುರಕ್ಕೆ ಭೇಟಿ‌ ನೀಡಿದ್ದರು.. ಹೊರವಲಯದಲ್ಲಿ ಕಾರು ನಿಲ್ಲಿಸಿ ರಾಂಪುರಕ್ಕೆ ಕಾಲ್ನಡಿಗೆಯಲ್ಲಿಯೇ ಹೋದ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಇನ್ನು ಎರಡು ತಿಂಗಳಲ್ಲಿ ರಸ್ತೆಯೂ ಆಗತ್ತೆ ಬಸ್ ಕೂಡ ಬರತ್ತೆ ಎಂದಿದ್ದರು.. ಅಷ್ಟೇ ಅಲ್ಲದೇ ಯುವತಿಯ ಜೊತೆ ಮಾತನಾಡಿ ಬಸ್ ಜೊತೆಗೆ ನಿಮ್ಮ ಮದುವೆಯನ್ನೂ ಸಹ ನಾವೇ ಮಾಡಿಸ್ತೀವಿ ಎಂದು ಜಿಲ್ಲಾಧಿಕಾರಿಗಳು ಫೋನಿನಲ್ಲಿ ತಿಳಿಸಿದ್ದರು..

ಆದರೆ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಾತನಾಡಿ ವಾರವಾಗಿಲ್ಲ ಅದಾಗಲೇ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.. ಹೌದು ದಾವಣಗೆರೆಯ ರಾಂಪುರಕ್ಕೆ ಇದೇ ಮೊದಲ ಬಾರಿಗೆ ಬಸ್ ಆಗಮಿಸಿದೆ.. ಹೌದು ಕಳೆದ ವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಮರು ದಿನದಿಂದಲೇ ಗ್ರಾಮಕ್ಕೆ ರಸ್ತೆ ಮಾಡುವ ಕೆಲಸ ಶುರುವಾಗಿದ್ದು ಅದಾಗಲೇ ರಸ್ತೆಯೂ ಆಗಿ ಇದೀಗ ಬಸ್ ಸಹ ಆಗಮಿಸಿದೆ.. ಹೌದು ಸಾರಿಗೆ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.. ಮೊದಲ ಬಸ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಬಸ್ ಅನ್ನು ಬರಮಾಡಿಕೊಂಡಿದ್ದಾರೆ.. ಸಧ್ಯಕ್ಕೆ ಬಸ್ ಸಂಚಾರವನ್ನು ತಕ್ಷಣ ಆರಂಭಿಸುವ ಸಲುವಾಗಿ ಮಣ್ಣಿನ ರಸ್ತೆ ಮಾಡಿದ್ದು ಸಧ್ಯದಲ್ಲಿಯೇ ಡಾಂಬರ್ ರಸ್ತೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ..

ಇನ್ನು ಇತ್ತ ತನ್ನ ಗ್ರಾಮದ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದ ಬಿಂದು ಎಂಬ ಯುವತಿಗೆ ಸಧ್ಯ ಉನ್ನತ ವ್ಯಾಸಂಗ ಮಾಡುವಂತೆ ತಿಳಿಸಿದ್ದು ಅವರ ವಿಧ್ಯಾಭ್ಯಾಸಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.. ಜೊತೆಗೆ ಮದುವೆಯ ನಿರ್ಧಾರ ಮಾಡಿದ ಬಳಿಕ ಮದುವೆಯನ್ನೂ ಸಹ ಮಾಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.. ಸಧ್ಯ ತನ್ನ ಗ್ರಾಮಕ್ಕೆ ಬಸ್ ತರಿಸಿದ ಸಂತೋಷದಲ್ಲಿ ಆ ಯುವತಿ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಉದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದು ಇನ್ನು ಮದುವೆ ಯಾವಾಗ ಎಂದು ಜನರು ಕೇಳಿದ ಪ್ರಶ್ನೆಗೆ ಸಧ್ಯ ತನ್ನ ವಿಧ್ಯಾಭ್ಯಾಸವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ..