ವೆಂಕಟೇಶ್ ಗೆ ಸಹಾಯ ಮಾಡು ಅಂತ ದರ್ಶನ್ ಗೆ ಫೋನ್ ಮಾಡಿದ ಜಗ್ಗೇಶ್ ಅವರು..‌ ದರ್ಶನ್ ಮಾಡಿದ್ದೇನು ಗೊತ್ತಾ?

ಕನ್ನಡದ ಪ್ರಖ್ಯಾತ ನಟ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ವೆಂಕಟೇಶ್ ಅವರು ಲಿವರ್ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದು ಈ ಕುರಿತು ಜಗ್ಗೇಶ್ ಅವರು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು..

250 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ನಟ.. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣಕಟ್ಟಲು ಕುಟುಂಬದವರ ಒದ್ದಾಟ.. ನನ್ನ ಕೈಲಾದದ್ದು ಸಹಾಯ ಮಾಡಿ ಬಂದಿದ್ದೇನು ಮಿಕ್ಕಿದ್ದು ರಾಯರ ಕೈಯಲ್ಲಿದೆ ಆದಷ್ಟು ಬೇಗ ವೆಂಕಟೇಶ್ ಗುಣಮುಖರಾಗಲಿ ಎಂದು ಸ್ನೇಹಿತನ ಬಗ್ಗೆ ಪೋಸ್ಟ್ ಮಾಡಿದ್ದರು..

ಜಗ್ಗೇಶ್ ಅವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ನಂತರದಲ್ಲಿ ಇಂದು ದರ್ಶನ್ ಅವರಿಗೆ ಕರೆ ಮಾಡಿ ವೆಂಕಟೇಶ್ ಅವರ ಕುರಿತು ಜಗ್ಗೇಶ್ ಅವರು ಮಾಹಿತಿ ನೀಡಿದ್ದರಂತೆ.. ಆನಂತರ ಈ ವಿಷಯ ಕೇಳಿದ ದರ್ಶನ್ ಅವರು ಒಂದು ಗಂಟೆಯೊಳಗಾಗಿ ವೆಂಕಟೇಶ್ ಅವರ ನೆರವಿಗೆ ನಿಂತಿದ್ದಾರೆ..

ಹೌದು ಜಗ್ಗೇಶ್ ಅವರು ಫೋನ್ ಮಾಡಿದ ಒಂದು ಗಂಟೆಯಲ್ಲಿ ದರ್ಶನ್ ಅವರು ಒಂದು ಲಕ್ಷ ಹಣವನ್ನು ಕಳುಹಿಸಿಕೊಟ್ಟಿದ್ದಾರಂತೆ.. ಈ ಕುರಿತು ಸ್ವತಃ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು “ಕಿಲ್ಲರ್ ವೆಂಕಟೇಶ ವಿಷಯವಾಗಿ ನಾನು ಕರೆಮಾಡಿದ 1ಘಂಟೆಯಲ್ಲಿ ಅವನ ಚಿಕಿತ್ಸೆ ಗೆ 1ಲಕ್ಷ ರೂ ಕಳಿಸಿದ ಕಲಾಬಂಧು.. ಉದ್ಯಮದಲ್ಲಿ ಪ್ರಥಮ ಸ್ಪಂದಿಸಿದ ಕಲಾಬಂಧು..

ನಿನ್ನ ಶ್ರೇಷ್ಟಗುಣ ನನ್ನ ಹೃದಯದಲ್ಲಿ ಅಚ್ಚಾಯಿತು.. ನೂರ್ಕಾಲ ಸುಖವಾಗಿ ಬಾಳಿ ಶುಭ ಹಾರೈಕೆ” ಎಂದು ದರ್ಶನ್ ಅವರು ಕಷ್ಟದಲ್ಲಿರುವವರಿಗೆ ನೆರವಾಗುವುದರ ಬಗ್ಗೆ ತಿಳಿಸಿದ್ದಾರೆ..