ದರ್ಶನ್ ಮುಂದಿನ ಸಿನಿಮಾಗೆ ಉಮಾಪತಿ ಅವರ ಬಳಿ ಪಡೆದ ಅಡ್ವಾನ್ಸ್ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ.. ಹಿಂಗೂ ಇರ್ತಾರಾ ದರ್ಶನ್??

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆವರ ರಾಬರ್ಟ್ ಸಿನಿಮಾ ಬಿಡುಗಡೆಗೆ ಸಿದ್ದಗೊಂಡಿದೆ.. ಅಭಿಮಾನಿಗಳು ತಮ್ಮ ಬಾಸ್ ಸಿನಿಮಾ ನೋಡಲು ಕಾತುರರಾಗಿದ್ದು ಬಿಡುಗಡೆಗೊಂಡಿರುವ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ..

ಇನ್ನು ರಾಬರ್ಟ್ ನಂತರ ದರ್ಶನ್ ಅವರ ರಾಜಾ ವೀರ ಮದಕರಿ ನಾಯಕ ಸಿನಿಮಾ ಶೂಟಿಂಗ್ ಶುರುವಾಗಲಿದ್ದು ಸಂಗೊಳ್ಳಿ ರಾಯಣ್ಣ ಸಿನಿಮಾ ನಂತರ ಮತ್ತೊಮ್ಮೆ ಐತಿಹಾಸಿಕ ಪಾತ್ರದಲ್ಲಿ ರಾರಾಜಿಸಲಿದ್ದಾರೆ.. ಯಾವ ಪಾತ್ರವಾದರೂ ಸೈ ಎನಿಸಿಕೊಳ್ಳುವ ದರ್ಶನ್ ಅವರನ್ನು ವೀರ ಮದಕರಿ ನಾಯಕನ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆನ್ನಬಹುದು..

ಆದರೆ ಇದೆಲ್ಲದರ ನಡುವೆ ಮತ್ತೊಂದು ಸಿನಿಮಾಗೆ ದರ್ಶನ್ ಅವರು ಅಡ್ವಾನ್ಸ್ ಪಡೆದಿದ್ದು ಅಡ್ವಾನ್ಸ್ ಮೊತ್ತವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗೋದು ಖಂಡಿತ.. ಹೌದು ರಾಜಾ ವೀರ ಮದಕರಿ ನಾಯಕ ಸಿನಿಮಾದ ಬಳಿಕ ಮತ್ತೆ ರಾಬರ್ಟ್ ಸಿನಿಮಾ ತಂಡದೊಟ್ಟಿಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ..

ಹೌದು ಕತೆ ಎಲ್ಲಾ ದರ್ಶನ್ ಅವರ ಕಡೆಯದ್ದೇ ಆಗಿದೆ.. ರಾಬರ್ಟ್ ಸಿನಿಮಾ ಶೂಟಿಂಗ್ ಸಮಯದಲ್ಲಿ ನಿರ್ದೇಶಕರಾದ ತರುಣ್ ಸುಧೀರ್, ದರ್ಶನ್ ಹಾಗೂ ನಿರ್ಮಾಪಕರಾದ ಉಮಾಪತಿ ಅವರು ಮಾತನಾಡುತ್ತಾ ಕುಳಿತಿದ್ದಾಗ ದರ್ಶನ್ ಅವರೇ ನನ್ ಹತ್ರ ಒಂದ್ ಒಳ್ಳೆ ಸ್ಟೋರಿ ಇದೆ ಅದನ್ನ ಮಾಡ್ತೀರಾ ಅಂತ ತರುಣ್ ಅವರ ಬಳಿ ಕೇಳಿದ್ರಂತೆ.. ಅದಕ್ಕೆ ಆಗಲಿ ಬಾಸ್ ಅಂತ ತರುಣ್ ಅವರು ಒಪ್ಪಿಗೆ ಸೂಚಿಸಿದರಂತೆ.. ಇನ್ನು ನಿರ್ಮಾಪಕರಾದ ಉಮಾಪತಿ ಅವರೂ ಕೂಡ ಒಪ್ಪಿಕೊಂಡರಂತೆ..

ಆ ತಕ್ಷಣ ಯಾರ ಯಾರ ಜೇಬಿನಲ್ಲಿ ಎಷ್ಟೆಷ್ಟು ಹಣ ಇದೆಯೋ ತೆಗಿರಿ ಅಂದರಂತೆ.. ಆಗ ಎಲ್ಲರೂ ಸಾವಿರ ಐನೂರು ಹೀಗೆ ತೆಗೆದುಕೊಟ್ಟಾಗ ಅದನ್ನೇ ಒಟ್ಟಾಗಿ ಕೂಡಿಸಿ ಎಲ್ಲರಿಗೂ ಐನೂರು ರೂಪಾಯಿ ಅಡ್ವಾನ್ಸ್ ಮಾಡಿದರಂತೆ.. ತಾವೂ ಕೂಡ ಐನೂರು ರೂಪಾಯಿ ಅಡ್ವಾನ್ಸ್ ಪಡೆದರಂತೆ.. ಈಗ ಎಲ್ಲರಿಗೂ ಅಡ್ವಾನ್ಸ್ ಸಿಕ್ಕಾಯ್ತು.. ಮುಂದಿನ ಸಿನಿಮಾ ಒಟ್ಟಿಗೆ ಮಾಡೋಕೆ ಕಮಿಟ್ ಆಗಿ ಆಯ್ತು ಎಂದರಂತೆ.. ದರ್ಶನ್ ಅವರ ಈ ದೊಡ್ಡ ಗುಣ ನೋಡಿ ಎಲ್ಲರೂ ಖುಷಿ ಪಟ್ಟರಂತೆ..

ಹೌದು ಸಾಮಾನ್ಯವಾಗಿ ಸ್ಟಾರ್ ನಟರು ಅಡ್ವಾನ್ಸ್ ಆಗಿ ಕೋಟಿಗಳ ಲೆಕ್ಕದಲ್ಲಿ ಹಣವನ್ನು‌ ಪಡೆಯುತ್ತಾರೆ.. ಆದರೆ ದರ್ಶನ್ ಅವರು ಮಾತ್ರ ಸ್ನೇಹ ಎಂಬ ವಿಷಯ ಬಂದಾಗ ಅವರ ಬಳಿ ಐನೂರು ರೂಪಾಯಿ ಪಡೆದರೂ ಅದನ್ನು ಅಡ್ವಾನ್ಸ್ ಎಂದು‌‌ ಮುಂದಿನ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ..

ಈ ಬಗ್ಗೆ ಸ್ವತಃ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಅವರೇ ಮದಗಜ ಸಿನಿಮಾ ಮುಹೂರ್ತದ ಸಮಯದಲ್ಲಿ ತಮ್ಮ ಮುಂದಿನ ಸಿನಿಮಾ ದರ್ಶನ್ ಅವರ ಜೊತೆ ಎಂದು ಮಾದ್ಯಮದವರ ಜೊತೆ ಹೇಳಿಕೊಂಡಿದ್ದು, ದರ್ಶನ್ ಅವರು ಐನೂರು ರೂಪಾಯಿ ಅಡ್ವಾನ್ಸ್ ಪಡೆದು, ತಮಗೂ ಸಾವಿರ ರೂಪಾಯಿ ಅಡ್ವಾನ್ಸ್ ಅನ್ನು ದರ್ಶನ್ ಅವರೇ ಕೊಟ್ಟ ವಿಚಾರವನ್ನು ತಿಳಿಸಿದ್ದಾರೆ.. ದರ್ಶನ್ ರನ್ನು ದೊಡ್ಡಗುಣದ ವ್ಯಕ್ತಿ ಅನ್ನೋದು ಬಹುಶಃ ಇದೇ ಕಾರಣಕ್ಕಿರಬಹುದು..

Latest from News

Go to Top