ದರ್ಶನ್ ಋಣ ತೀರಿಸಲು‌ ಮುಂದಾದ ರಚಿತಾ ರಾಮ್.. ಕೊಡ್ತಾ ಇರೋ ಉಡುಗೊರೆ ಏನು ಗೊತ್ತಾ?

ರಚಿತಾರಾಮ್ ಸದ್ಯ ಕನ್ನಡ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು.. ಅದರಲ್ಲೂ ರಚಿತಾ ರಾಮ್ ಅವರನ್ನು ನಾಯಕಿಯಾಗಿ ಸಿನಿಮಾದಲ್ಲಿ ಹಾಕಿಕೊಂಡರೆ ಬಹುತೇಕ ಸಿನಿಮಾಗಳು ಸಕ್ಸಸ್ ಆಗತ್ತೆ ಅನ್ನೋ ಮಾತು ಕೂಡ ಗಾಂಧಿನಗರದಲ್ಲಿದೆ.‌. ಇದೆಲ್ಲವನ್ನು ಹೊರತು ಪಡಿಸಿದರೂ ರಚಿತಾರಾಮ್‌ ತಮ್ಮ ನಟನೆಯ ಮೂಲಕ ಹೆಸರು ಮಾಡಿದ್ದು ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ..

ಅರಸಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡ ರಚಿತಾ ರಾಮ್ ಅವರಿಗೆ ಅದೃಷ್ಟ ಕೈಹಿಡಿದಿತ್ತು.. ಮೊದಲ ಸಿನಿಮಾವೇ ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ದರ್ಶನ್ ಅವರ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿತು.. ಮೊದಲ ಸಿನಿಮಾನೇ ದೊಡ್ಡ ಹಿಟ್ ಆಯಿತು.. ನಂತರ ರಚಿತಾ ರಾಮ್ ಹಿಂತಿರುಗಿ ನೋಡಲೇ ಇಲ್ಲ.. 7 ವರ್ಷ ಸತತವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿದರು.. ಇತ್ತೀಚೆಗೆ ತಮ್ಮ ಕನಸಿನ ಬೆಂಜ್ ಕಾರ್ ಕೊಳ್ಳುವ ಮಟ್ಟಕ್ಕೆ ಬೆಳೆದರು..

ಇನ್ನು ಸದ್ಯ ಕನ್ನಡ ಮಾತ್ರವಲ್ಲದೇ ತಮಿಳು ಇಂಡಸ್ಟ್ರಿಯಲ್ಲೂ ಅವಕಾಶ ಬಂದಿದ್ದು ಸೂಪರ್ ಮಚ್ಚಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.. ಇನ್ನು ರಚಿತಾ ರಾಮ್ ಅವರಿಗೆ ಅವಕಾಶ ಕೊಟ್ಟ ದರ್ಶನ್‌ ಅವರ ಋಣ ತೀರಿಸಲು ಇದೀಗ ರಚಿತಾ ರಾಮ್ ಅವರು ಮುಂದಾಗಿದ್ದಾರೆ..

ಹೌದು ರಚಿತಾ ರಾಮ್ ಅವರು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಒಂದನ್ನು ತೆರೆಯುತ್ತಿದ್ದು, ರಚಿತಾ ರಾಮ್ ನಿರ್ಮಾಪಕಿಯಾಗಿಯೂ ಇನ್ನು ಮುಂದೆ ಕನ್ನಡ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ..

ಹೌದು ಈಗಾಗಲೇ ತಮ್ಮದೇ ಆದ ಒಂದು ಟೀಮ್ ಅನ್ನು ಕ್ರಿಯೇಟ್ ಮಾಡಲಾಗಿದ್ದು ಸಧ್ಯದಲ್ಲಿಯೇ ತಮ್ಮ ಪ್ರೊಡಕ್ಷನ್ ಹೌಸ್ ಅನ್ನು ವಿಶೇಷವಾಗಿ ಲಾಂಚ್ ಮಾಡಲಿದ್ದಾರಂತೆ.. ಆದರೆ ತಮ್ಮ ಪ್ರೊಡಕ್ಷನ್ ಹೌಸ್ ನಲ್ಲಿ ಮೊದಲ ಸಿನಿಮಾವನ್ನು ದರ್ಶನ್ ಅವರಿಗೇ ಮಾಡಬೇಕು ಅನ್ನೋ ಆಸೆಯಿದೆಯಂತೆ.. ನನಗೆ ಅವಕಾಶ ಕೊಟ್ಟದ್ದು ಅವರೇ.. ಅವರ ಋಣವನ್ನು ತೀರಿಸಲು ಅವರ ಸಿನಿಮಾವನ್ನು ನಾನು ಮಾಡಬೇಕು ಎಂದಿದ್ದಾರೆ..