ಚಾಮುಂಡೇಶ್ವರಿ ತಾಯಿಯ ಮಗ ದರ್ಶನ್ ಎಂದ ಪವನ್ ಒಡೆಯರ್..

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆದ ಕಾರಣ ಜನರು ಜೀವನ ಕಟ್ಟಿಕೊಳ್ಳಲು ಬಹಳಷ್ಟು ಕಷ್ಟ ಪಡುವಂತಾಗಿದೆ.. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಜಾಗೃತಿ ಮೂಡಿಸುವ ಬದಲಾಗು ನೀನು ಎಂಬ ಹಾಡೊಂದು ತಯಾರಾಗುತ್ತಿದ್ದು ಈ ಹಾಡಿನ ಜವಾಬ್ದಾರಿಯನ್ನು ನಿರ್ದೇಶಕ ಪವನ್ ಒಡೆಯರ್ ವಹಿಸಿಕೊಂಡಿದ್ದಾರೆ.. ಈ ಹಾಡಿನಲ್ಲಿ ರವಿಚಂದ್ರನ್, ಉಪೇಂದ್ರ, ದರ್ಶನ್, ಯಶ್, ಅಪ್ಪು, ಶಿವಣ್ಣ ಸೇರಿದಂತೆ ಬಹುತಾರಾಗಣವೇ ಕಾಣಿಸಿಕೊಳ್ಳಲಿದೆ.

ಈ ಹಾಡಿನ ಚಿತ್ರೀಕರಣವನ್ನು ಆ ಆ ನಟರ ಮನೆಗಳಿಗೆ ಹೋಗಿ ಶೂಟ್ ಮಾಡಲಾಗುತ್ತಿದೆ.. ಅದೇ ರೀತಿ ಮೊನ್ನೆ ಯಶ್ ಅವರ ಬಳಿ ಹೋಗಿ ಚಿತ್ರೀಕರಣ ಮಾಡಿದ ಸಂದರ್ಭದಲ್ಲಿ ತೆಗೆದುಕೊಂಡ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪವನ್ ಒಡೆಯರ್ ಯಶ್ ಅವರನ್ನ ಬಾಸ್ ಎಂದು ಬರೆದಿದ್ದರು.. ಇದು ದರ್ಶನ್ ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.. ಸ್ಯಾಂಡಲ್ವುಡ್ ನಲ್ಲಿ ಒಬ್ಬರೇ ಬಾಸ್ ಅದು ಡಿ ಬಾಸ್ ಎಂದು ಕಮೆಂಟ್ ಗಳ ಸುರಿಮಳೆ ಆಗಿತ್ತು.. ಅಷ್ಟೇ ಅಲ್ಲದೇ ಪವನ್ ಒಡೆಯರ್ ಅವರನ್ನ ವ್ಯಯಕ್ತಿಕವಾಗಿಯೂ ಟೀಕಿಸಲಾಗಿತ್ತು..

ಆದರೆ ಈ ಬಗ್ಗೆ ನಿನ್ನೆ ಸ್ಪಷ್ಟನೆ ಕೊಟ್ಟ ಪವನ್ ಒಡೆಯರ್ ಅವರು ನಾನು ಆತ್ಮೀಯರು ಯಾರೇ ಸಿಕ್ಕರೂ ಅವರನ್ನ ಬಾಸ್ ಎಂದೇ ಕರೆಯುವುದು.. ಯಾರಿಗೂ ಅಪಮಾನ ಮಾಡಬೇಕು ಎಂದು ಹಾಕಿಲ್ಲ.. ಅಭಿಮಾನಿಗಳಿಗೆ ಅವರವರ ಸ್ಟಾರ್ ಎಲ್ಲರೂ ಬಾಸ್ ಗಳೇ.. ನಾನು ಆತ್ಮೀಯರನ್ನು ಕರೆಯುವ ರೀತಿಯಲ್ಲಿ ಹೇಳಿದೆ ಅಷ್ಟೇ.. ಎಂದಿದ್ದರು.. ಆದರೀಗ ದರ್ಶನ್ ಅವರೊಟ್ಟಿಗಿನ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಪವನ್ ಒಡೆಯರ್ ಅವರು ನಾಲ್ಕು ಸಾಲು ಬರೆದಿದ್ದಾರೆ..

ಹೌದು ಅದೇ ಹಾಡಿನ ಶೂಟಿಂಗ್ ಸಲುವಾಗಿ ದರ್ಶನ್ ಅವರ ಮನೆಗೆ ತೆರಳಿದಾಗ ತೆಗೆದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪವನ್ ಅವರು “ಎಂತಹ ಸಂಕಷ್ಟ ಎದುರಾದರೂ,ಅದನ್ನು ಎದುರಿಸಿ ಮೆಟ್ಟಿ ನಿಲ್ಲುವುದನ್ನು ಕಲಿಸಿರುವುದೇ ದರ್ಶನ್ ಸರ್ ಅವರ ವ್ಯಕ್ತಿತ್ವ. ಮಾತೃ ಮಮತೆ, ಸದಾ ಎಲ್ಲರಿಗೂ ಒಳ್ಳೆದಾಗಲಿ ಅನ್ನುವ ಅವರ ಗುಣ ಅತ್ಯದ್ಭುತ, ಜಗನ್ಮಾತೆ ಚಾಮುಂಡೇಶ್ವರಿಯ ಪುತ್ರ ದರ್ಶನ್ ಸರ್.. ಬದಲಾಗುನೀನುಬದಲಾಯಿಸುನೀನು ದೃಶ್ಯ ರೊಪಕಕ್ಕೆ ನಿಮ್ಮ ಸಮಯ ನೀಡಿದ್ದಕೆ ಥ್ಯಾಂಕ್ಸ್ ಸರ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..