ಹದಿನೇಳು ವರ್ಷಕ್ಕೆ ಇಬ್ಬರ ನಡುವೆ ಪ್ರೀತಿ.. ಆದರೆ ಕೊನೆಗೆ ಈ ಇಬ್ಬರ ಸ್ಥಿತಿಯೂ ಏನಾಗಿ ಹೋಯ್ತು ಗೊತ್ತಾ..

ವಯಸ್ಸಿನಲ್ಲಿ ಆಗುವ ಆಕರ್ಷಣೆಗಳು, ಮನದ ಆಸೆಗಳನ್ನು ನಾವು ಹಿಡಿತದಲ್ಲಿ ಇಟ್ಟುಕೊಂಡರೆ ಜೀವನದಲ್ಲಿ ನಾವು ಏನು ಬೇಕಾದರು ಸಾಧಿಸಬಹುದು.. ಆದರೆ ಆ ಆಸೆಗಳೇ ಬಯಕೆಗಳೇ ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಜೀವನ ನಾವುಗಳು ಎಂದೂ ಊಹಿಸದ ತಿರುವುಗಳನ್ನು ಕೊಟ್ಟು ಬಿಡುತ್ತದೆ.. ಇಂತಹ ತಿರುವುಗಳು ಜೀವನದಲ್ಲಿ ನಡೆಯಬಾರದ ಘಟನೆಗಳು ನಡೆದು ನೋವನ್ನೂ ಸಹ ನೀಡುತ್ತವೆ.. ಹೌದು ಅಂತಹುದೇ ಒಂದು ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದ್ದು ಹದಿನೇಳು ವರ್ಷಕ್ಕೆ ಪ್ರೀತಿ ಮಾಡಿದ ಈ ಇಬ್ಬರ ಬದುಕು ಏನಾಗಿ ಹೋಯ್ತು ಎಂಬುದನ್ನು ನೋಡಿದರೆ ಅವರಿಬ್ಬರ ಪ್ರೀತಿಯಿಂದ ಕ್ಷಣ ಮಾತ್ರದಲ್ಲಿ ಏನೇನೆಲ್ಲಾ ಆಗಿ ಹೋಯ್ತು ಎನಿಸುತ್ತಿದೆ..

ಹೌದು ಈಕೆಯ ಹೆಸರು ಮಾನ್ವಿತಾ.. ವಯಸ್ಸಿನ್ನು ಕೇವಲ ಹದಿನೇಳು.. ಆ ಹುಡುಗನ ಹೆಸರು ದರ್ಶನ್ ಆತನಿಗೂ ವಯಸ್ಸು ಹದಿನೇಳು.. ಆಕೆ ಮಂಡ್ಯ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಶಿವಲಿಂಗು ಎಂಬುವವರ ಮಗಳು.. ಈತ ಕಲ್ಲಹಳ್ಳಿಯ ನಿವಾಸಿ.. ಹದಿನೇಳು ವರ್ಷಕ್ಕೆ ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು.. ಈ ವಿಚಾರ ಮಾನ್ವಿತಾಳ ಮನೆಯಲ್ಲಿ ಗೊತ್ತಾಗಿದೆ.. ಇನ್ನೂ ತಿಳುವಳಿಕೆ ಇಲ್ಲವೆಂದು ಇಬ್ಬರಿಗೂ ಬುದ್ಧಿ ಹೇಳಿದಿದ್ದರೆ ಇಂದು ಬದುಕು ಈ ರೀತಿ ಆಗುತ್ತಿರಲಿಲ್ಲವೇನೋ.. ಆದರೆ ಮಾನ್ವಿತಾಳ ಹೆತ್ತವರು ಮಾಡಿದ್ದೇ ಬೇರೆ.. ಹೌದು ದರ್ಶನ್ ನನ್ನು ಮನೆಗೆ ಕರೆಸಿಕೊಂಡ ಮಾನ್ವಿತಾಳ ತಂದೆ ತಾಯಿ ಆತನ ಮೇಲೆ ಕೈ ಮಾಡಿದ್ದಾರೆ.. ಅದು ಮಿತಿ ಮೀರಿಯೂ ಹೋಗಿದೆ.. ಅತ್ತ ದರ್ಶನ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದರೆ ಆಗಸ್ಟ್ ಇಪ್ಪತ್ತೈದರಂದು ಆತ ಕೊನೆಯುಸಿರೆಳೆದುಬಿಟ್ಟ..

ಅತ್ತ ಈ ವಿಚಾರ ಕಲ್ಲಹಳ್ಳಿ ತುಂಬೆಲ್ಲಾ ಕ್ಷಣಮಾತ್ರದಲ್ಲಿ ಹಬ್ಬಿತ್ತು.. ಕೋಪಗೊಂಡ ಜನರು ಮಾನ್ವಿತಾಳ ಮನೆ ಮುಂದೆ ಪ್ರತಿಭಟನೆ ನಡೆಸಿದರು.. ಅತ್ತ ಮಾನ್ವಿತಾಳ ಅಪ್ಪ ಅಮ್ಮ ಹಾಗೂ ಒಟ್ಟು ಹದಿನೇಳು ಜನರ ಮೇಲೆ ದೂರು ದಾಖಲಾಗಿ ಅವರುಗಳನ್ನು ಪೊಲೀಸರು ತಮ್ಮ ವಶಕ್ಕೂ ಪಡೆದಿದ್ದರು. ಇತ್ತ ಮಾನ್ವಿತಾ ಗೆ ಪ್ರೀತಿಸಿದ ಹುಡುಗನೂ ಇಲ್ಲ.. ಹೆತ್ತ ಅಪ್ಪ ಅಮ್ಮನೂ ಇಲ್ಲ.. ಆಕೆಯ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬೇಡವೆನ್ನುವಂತಾಗಿತ್ತು.. ಆಕೆಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು.. ಇದರಿಂದ ತೀರಾ ನೊಂದ ಮಾನ್ವಿತಾ ದುಡುಕಿನ ನಿರ್ಧಾರ ಕೈಗೊಂಡುಬಿಟ್ಟಳು.. ಹೌದು ದರ್ಶನ್ ಇಲ್ಲವಾಗಲೂ ನಾನೇ ಕಾರಣ.. ಅಪ್ಪ ಅಮ್ಮ ಪೊಲೀಸ್ ಠಾಣೆ ಸೇರಲು ಸಹ ನಾನೇ ಕಾರಣ ಇನ್ನು ನನಗೆ ಯಾರೂ ಇಲ್ಲ ಎಂದು ಆಲೋಚಿಸಿ ನಿನ್ನೆ ಆಗಸ್ಟ್ ಮೂವತ್ತೊಂದರಂದು ಬಾಲಮಂದಿರದಲ್ಲಿಯೇ ಜೀವ ಕಳೆದುಕೊಂಡು ಬಿಟ್ಟಳು.

ಹೌದು ತಿಳುವಳಿಕೆ ಬರುವ ಮುನ್ನ ಮಾನ್ವಿತಾ ಹಾಗೂ ದರ್ಶನ್ ಮಾಡಿದ ಪ್ರೀತಿಗೆ.. ತಿಳುವಳಿಕೆ ಇದ್ದೂ ಮಾನ್ವಿತಾ ತಂದೆ ತಾಯಿ ಮಾಡಿದ ತಪ್ಪಿಗೆ ಇಂದು ಆ ಇಬ್ಬರೂ ಸಹ ಜೀವ ಕಳೆದುಕೊಂಡರು.. ಇತ್ತ ಮಗಳು ಬಾಳಿ ಬದುಕಬೇಕಾದ್ದನ್ನು ನೋಡಬೇಕಾದ ತಂದೆ ತಾಯಿ ಪೊಲೀಸ್ ಠಾಣೆಯಲ್ಲಿ ಉಳಿದರು.. ಇನ್ನು ಮಗಳು ಈ ರೀತಿ ಮಾಡಿಕೊಂಡ ವಿಚಾರ ಕೇಳಿ ಕಣ್ಣೀರಿಟ್ಟ ಮಾನ್ವಿತಾಳ ಅಪ್ಪ ಅಮ್ಮ ಮಗಳ ಅಂತ್ಯಕ್ರಿಯೆ ಮಾಡಲು ಸಹ ಅವಕಾಶ ದೊರೆಯಲಿಲ್ಲ.. ಕೊನೆಗೆ ಆಸ್ಪತ್ರೆಯಲ್ಲಿಯೇ ಒಂದು ದಿನ ಪೂರ್ತಿ ಮಾನ್ವಿತಾಳನ್ನು ಇರಿಸಲಾಗಿತ್ತು..

ಮಾರನೆಯ ದಿನ ಅಂತ್ಯ ಸಂಸ್ಕಾರ ಮಾಡಲು ಅನುಮತಿ ಸಿಕ್ಕು ಅಪ್ಪ ಅಮ್ಮ ಹೊರ ಬಂದು ಅಂತ್ಯ ಸಂಸ್ಕಾರ ನೆರವೇರಿಸಿ ಮತ್ತೆ ಪೊಲೀಸ್ ಠಾಣೆಗೆ ತೆರಳಿದರು. ಇಲ್ಲಿ ಯಾರಿಗೆ ಏನು ದೊರೆಯಿತು.. ಎಲ್ಲರೂ ಕಳೆದುಕೊಂಡವರೇ.. ಅತ್ತ ವಯಸ್ಸಿಗೆ ಬಂದ ಮಗ ದರ್ಶನ್ ನನ್ನು ಆತನ ಅಪ್ಪ ಅಮ್ಮ ಕಳೆದುಕೊಂಡು ನೋವು ಅನುಭವಿಸುತ್ತಿದ್ದರೆ ಇತ್ತ ಮಗಳನ್ನು ಕಳೆದುಕೊಂಡು ಪೊಲೀಸ್ ಠಾಣೆಯಲ್ಲಿ ಮಾನ್ವಿತಾಳ ಅಪ್ಪ ಅಮ್ಮ ಕಣ್ಣೀರು ಇಟ್ಟಿದ್ದಾರೆ.. ದುಡುಕಿನ ನಿರ್ಧಾರಗಳು ಬದುಕನ್ನು ಯಾವ ರೀತಿಯಲ್ಲಿ ಬದಲಿಸುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..