ಕುರುಕ್ಷೇತ್ರದ 100 ದಿನದ ಸಂಭ್ರಮಕ್ಕೆ ಬಂದ ದರ್ಶನ್ ಮಾತನಾಡಿದ್ದು ಮಾತ್ರ ಬೇರೆಯವರ ಬಗ್ಗೆ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರುಕ್ಷೇತ್ರ ಸಿನಿಮಾದ 100 ದಿನದ ಸಂಭ್ರಮಾಚರಣೆ ನಿನ್ನೆ ಅದ್ಧೂರಿಯಾಗಿ ನೆರವೇರಿತು.. ರಾಜ್ಯದ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪನವರು, ಅನೇಕ ಸಚಿವರು, ಸಿನಿಮಾ ಮಿತ್ರರು ಕುರುಕ್ಷೇತ್ರ ತಂಡದವರು ಭಾಗಿಯಾಗಿದ್ದರು.. ಶಿವರಾತ್ರಿಗೆ ಒಂದೊಳ್ಳೆ ಕಾರ್ಯಕ್ರಮವನ್ನು ಮುನಿರತ್ನ ಅವರು ಆಯೋಜಿಸಿದ್ದರು..

ಆದರೆ ಕುರುಕ್ಷೇತ್ರ ಸಿನಿಮಾದ ಸಂಭ್ರಮಕ್ಕೆ ಬಂದ ದರ್ಶನ್ ಅವರು ಮಾತನಾಡಿದ್ದು ಮಾತ್ರ ಬೇರೆಯವರ ಬಗ್ಗೆ.. ಹೌದು ಸಮಾರಂಭದಲ್ಲಿ ಅತಿಥಿಗಳಿಗೆ ಹಾಗೂ ಕುರುಕ್ಷೇತ್ರ ಸಿನಿಮಾ ತಂಡದವರಿಗೆ ಕುರುಕ್ಷೇತ್ರ ಸಿನಿಮಾದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು..

ಕಾರ್ಯಕ್ರಮದಲ್ಲಿ ಮೊದಲಿಗೆ ಅನೇಕ ಕಿರುತೆರೆ ಕಲಾವಿದರು ಗಾಯಕರಿಂದ ಮನರಂಜನಾ ಕಾರ್ಯಕ್ರಮ ನೀಡಲಾಯಿತು.. ನಂತರ ಯಡಿಯೂರಪ್ಪನವರು, ದರ್ಶನ್ ಅಭಿಷೇಕ್ ಅಂಬರೀಶ್ ಸೇರಿದಂತೆ ಎಲ್ಲಾ ಗಣ್ಯರು ವೇದಿಕೆಗೆ ಬಂದರು.. ಬಂದವರೆಲ್ಲರೂ ಕುರುಕ್ಷೇತ್ರ ಸಿನಿಮಾದ ಬಗ್ಗೆ ಮಾತನಾಡಿ ಧೈರ್ಯ ಮಾಡಿ ಕನ್ನಡದಲ್ಲಿ ಹೊಸ ಪ್ರಯತ್ನ ಮಾಡಿ ಅದ್ಭುತವಾಗಿ ಸಿನಿಮಾ ತಂದು ಯಶಸ್ಸು ಪಡೆದದ್ದಕ್ಕೆ ಅಭಿನಂದಿಸಿದರು..

ಆನಂತರ ದರ್ಶನ್ ಅವರು ಕೂಡ ಮಾತನಾಡಿದರು.. ಆದರೆ ಮಾತು ಶುರು ಮಾಡಿದ ದರ್ಶನ್ ಅವರು ಕುರುಕ್ಷೇತ್ರ ಸಿನಿಮಾ ಬಗ್ಗೆ ಮಾತನಾಡುವ ಮೊದಲು ಬೇರೆಯವರ ಬಗ್ಗೆ ಮಾತನಾಡಿದರು.. ಹೌದು ಶಿವಾರಾತ್ರಿಯ ಜಾಗರಣೆ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಆಗಿದ್ದರಿಂದ ಮೊದಲು ಜನರನ್ನು ಹಾಗೂ ವಿದ್ಯಾರ್ಥಿಗಳ ಬಗ್ಗೆ ದರ್ಶನ್ ಮಾತನಾಡಿದರು.. ಇನ್ನೇನು ಎಲ್ಲಾ ಮಕ್ಕಳಿಗೂ ಪರೀಕ್ಷೆ ಬರ್ತಾ ಇದೆ.. ಚೆನ್ನಾಗಿ ಓದಿ.. ಪರೀಕ್ಷೆನ ಪರೀಕ್ಷೆ ತರ ಮಾತ್ರ ನೋಡಿ ಅದೇ ಜೀವನವಲ್ಲ.. ಯಾರೂ ಹೆಚ್ಚು ಟೆಂಷನ್ ತೆಗೆದುಕೊಳ್ಳಬೇಡಿ.. ಓದನ್ನ ಓದೋ ತರ ಓದಿ, ಎಲ್ಲರೂ ಚೆನ್ನಾಗಿ ಪರೀಕ್ಷೆ ಬರೆಯಿರಿ ಎಂದರು..

ಆ ನಂತರವಷ್ಟೇ ಕುರುಕ್ಷೇತ್ರ ಸಿನಿಮಾ ಬಗ್ಗೆ ಮಾತನಾಡಿ ಇಂತಹ ದೊಡ್ಡ ಸಿನಿಮಾ ಮಾಡಲು ನೀವೆಲ್ಲರು ಕೊಟ್ಟ ಪ್ರೋತ್ಸಾಹ ದೊಡ್ಡದು ಎಂದು ಎಲ್ಲರಿಗೂ ಧನ್ಯವಾದಗಳನ್ನ ತಿಳಿಸಿದರು.. ಸಿನಿಮಾ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಸಿನಿಮಗಳನ್ನು ನೋಡಿ ಅನ್ನೋದು ಕಾಮನ್.. ಆದರೆ ಇನ್ನೇನು ಮಕ್ಕಳಿಗೆ ಪರೀಕ್ಷೆ ಹತ್ತಿರ ಬರುತ್ತಿದೆ ಎಂಬ ವಾಸ್ತವವನ್ನು ತಿಳಿದು ಸಿನಿಮಾಗಳನ್ನು ನೋಡಿ ಎನ್ನುವ ಬದಲು ಚೆನ್ನಾಗಿ ಓದಿ.. ಪರೀಕ್ಷೆ ಚೆನ್ನಾಗಿ ಬರೆಯಿರಿ ಎಂಬ ಮಾತುಗಳನ್ನು ದರ್ಶನ್ ಆಡಿದ್ದು ನಿಜಕ್ಕೂ ಮೆಚ್ಚುವಂತದ್ದು..

Latest from Entertainment

Go to Top