ನಿನ್ನೆ ದರ್ಶನ್ ಆಯ್ತು..‌ ಇಂದು ವೆಂಕಟೇಶ್ ಸಹಾಯಕ್ಕೆ ನಿಂತ ಮತ್ತೊಬ್ಬ ನಟ..

ಕಲಾವಿದರು ಸಂಕಷ್ಟದಲ್ಲಿದ್ದಾಗ ಅನೇಕರಿಗೆ ದರ್ಶನ್ ಸಹಾಯಕ್ಕಾಗಿ ನಿಂತಿರುವುದು ಎಲ್ಲರಿಗೂ ತಿಳಿದೇ ಇದೆ.. ಅದೇ ರೀತಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಕಿಲ್ಲರ್ ವೆಂಕಟೇಶ್ ಅವರು ಲಿವರ್ ಸಂಬಂಧಪಟ್ಟ ಖಾಯಿಲೆಯಿಂದ ಬಳಲುತ್ತಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ..

ಇತ್ತ ಅವರ ಕುಟುಂಬದವರು ಆಸ್ಪತ್ರೆಯ ಬಿಲ್ ಕಟ್ಟೋದಕ್ಕೆ ಒದ್ದಾಡುತ್ತಿದ್ದ ವಿಷಯ ತಿಳಿದ ಜಗ್ಗೇಶ್ ಅವರು ಖುದ್ದು ಆಸ್ಪತ್ರೆಗೆ ಭೇಟಿ ಕೊಟ್ಟು ಸ್ನೇಹಿತನಿಗೆ ತಮ್ಮ ಕೈಲಾದ ಸಹಾಯ ಮಾಡಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು..

ಮರುದಿನ ದರ್ಶನ್ ಅವರಿಗೆ ಈ ಕುರಿತು ಜಗ್ಗೇಶ್ ಅವರು ಫೋನ್ ಮಾಡಿ ವಿಷಯ ತಿಳಿಸಿದ್ದರು.. ವಿಷಯ ತಿಳಿಸಿದ ಒಂದು ಗಂಟೆಯೊಳಗೆ ದರ್ಶನ್ ಅವರು ವೆಂಕಟೇಶ್ ಅವರ ಚಿಕಿತ್ಸೆಗಾಗಿ ಒಂದು ಲಕ್ಷ ಹಣವನ್ನು ಕಳುಹಿಸಿಕೊಟ್ಟಿದ್ದರು..

ಈ ವಿಷಯವನ್ನು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಫೋನ್ ಮಾಡಿದ ಒಂದು ಗಂಟೆಯಲ್ಲಿ ದರ್ಶನ್ ಒಂದು ಲಕ್ಷ ಕಳುಹಿಸಿಕೊಟ್ಟಿದ್ದಾರೆ.. ನಾನು ವಿಷಯ ತಿಳಿಸಿದ ತಕ್ಷಣ ವೆಂಕಟೇಶ್ ಅವರಿಗೆ ಸಹಾಯ ಮಾಡಿದ ಮೊದಲ ಕಲಾಬಂಧು.. ದರ್ಶನ್ ಗೆ ಶುಭವಾಗಲಿ ಎಂದಿದ್ದರು..

ಇದೀಗ ದರ್ಶನ್ ಬಳಿಕ ಮತ್ತೊಬ್ಬ ನಟ ವೆಂಕಟೇಶ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.. ಹೌದು ಸೃಜನ್ ಲೋಕೇಶ್ ಅವರು ವೆಂಕಟೇಶ್ ಅವರ ನೆರವಿಗೆ ನಿಂತಿದ್ದಾರೆ..

ಹೌದು ನಿನ್ನೆ ಜಗ್ಗೇಶ್ ಅವರು ನೀಡಿದ್ದ ಅಕೌಂಟ್ ನಂಬರ್ ಗೆ ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯ ಮೂಲಕ 50 ಸಾವಿರ ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ.. ಯಾರಿಗೇ ಆಗಲಿ ಒಬ್ಬ ಮನುಷ್ಯನ ಕಷ್ಟಕ್ಕೆ ಮತ್ತೊಂಬರು ಸ್ಪಂದಿಸುವುದೇ ನಿಜವಾದ ಮನುಷ್ಯತ್ವ.. ಅದೇ ಮಾನವೀಯತೆ.. ದರ್ಶನ್, ಸೃಜನ್ ಹಾಗೂ ವೆಂಕಟೇಶ್ ಅವರ ಚಿಕಿತ್ಸೆಗೆ ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು..

Latest from News

Go to Top