ತಂಗಿಯ ಒತ್ತಾಯಕ್ಕೆ ಮಣಿದ ಡಿ ಬಾಸ್ ಸಖತ್ ಡ್ಯಾನ್ಸ್..‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳು ಸ್ನೇಹಿತರಿಗಾಗಿ ಏನು ಬೇಕಾದರು ಮಾಡುವ ವ್ಯಕ್ತಿತ್ವದವರು..‌ ಸ್ನೇಹಿತರ ಜೊತೆಯಿದ್ದರೇ ಸ್ಟಾರ್ ಎಂಬ ಸಣ್ಣ ಅಹಂಕಾರವೂ ಇಲ್ಲದ ದೊಡ್ಡ ಗುಣದವರು ದರ್ಶನ್.. ಸ್ನೇಹಿತರು ಹೇಗಿರ್ತಾರೋ ಅದೇ ರೀತಿ ಅತ್ಯಂತ ಸರಳವಾಗಿರ್ತಾರೆ.‌ ಅಷ್ಟೇ ಅಲ್ಲದೆ ಎಲ್ಲರೂ ಒಟ್ಟಿಗೆ ಅಡುಗೆ ತಯಾರಿ ಮಾಡುತ್ತಿದ್ದರೆ ದರ್ಶನ್ ಅವರು ಸಹ ಅವರಲ್ಲೊಬ್ಬರಾಗಿ ಅಡುಗೆ ತಯಾರಿ ಕೆಲಸದಲ್ಲಿ ಸಹಾಯ ಮಾಡುತ್ತಾರೆ..

ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಡ್ಯಾನ್ಸ್ ವೀಡಿಯೋವೊಂದು ವೈರಲ್ ಆಗಿದೆ.. ಹೌದು ಕರಿಯ ಸಿನಿಮಾದ ಕೆಂಚಾಲೋ ಮಂಚಾಲೋ ಹಾಡಿಗೆ ದರ್ಶನ್ ಅವರು ಸಖತ್ ಸ್ಟೆಪ್ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಹೌದು ಆದರೆ ಆ ವೀಡಿಯೋ ಈಗಿನದ್ದಲ್ಲ.. ಬದಲಾಗಿ ವರ್ಷಗಳ ಹಿಂದಿನ ವೀಡಿಯೋವದು‌. ದರ್ಶನ್ ಅವರು ತಮ್ಮ ಸ್ವಂತ ತಂಗಿಯ ರೀತಿಯಲ್ಲಿ ಕಾಣುವ ಹೆಣ್ಣು ಮಗಳೊಬ್ಬರು ತಮ್ಮ ಸ್ನೇಹಿತರೊಡಗೂಡಿ ಹಮ್ಮಿಕೊಂಡಿದ್ದ ಸ್ನೇಹಿತರ ರೀಯೂನಿಯನ್ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನ ಅಣ್ಣಾ ಬರಲೇ ಬೇಕೆಂದು ಒತ್ತಾಯ ಮಾಡಿದ್ದರು..

ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗದ ದರ್ಶನ್ ಅವರು ಸಹೋದರಿಯ ಮಾತಿಗೆ ಮಣಿದು ಕಾರ್ಯಕ್ರಮಕ್ಕೆ ಒಂದು ಭೇಟಿ ಕೊಟ್ಟು ಬಂದರು.. ಆದರೆ ಕಾರ್ಯಕ್ರಮಕ್ಕೆ ಬಂದ ದರ್ಶನ್ ಅವರನ್ನು ಡ್ಯಾನ್ಸ್ ಮಾಡಲು ಬಹಳ ಒತ್ತಾಯಿಸಿ ದರ್ಶನ್ ಅವರ ಬಳಿ ಸ್ಟೆಪ್ ಹಾಕಿಸದೇ ಬಿಡಲೇ ಇಲ್ಲ..

ಕೊನೆಗೆ ಕರಿಯ ಸಿನಿಮಾದ ಹಾಡಿಗೆ ದರ್ಶನ್ ಅವರು ಸಖತ್ ಆಗಿಯೇ ಸ್ಟೆಪ್ ಹಾಕಿದ್ದರು.. 30 ಸೆಕೆಂಡ್ ಡ್ಯಾನ್ಸ್ ಮಾಡಿ ಆ ನಂತರ ದಯವಿಟ್ಟು ಬಿಟ್ಟು ಬಿಡಮ್ಮ ಎಂದು ಅವರ ಸಹೋದರಿಗೆ ಕೈ ಮುಗಿದು ನಂತರ ಎಲ್ಲರನ್ನೂ ಮಾತನಾಡಿಸಿ ಮರಳಿದರು..

ಸದ್ಯ ಇದೀಗ ಆ ವೀಡಿಯೋ ವೈರಲ್ ಆಗಿದ್ದು ಡಿ ಬಾಸ್ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..