ಚಿರು ಸಮಾಧಿ ಜಾಗಕ್ಕೆ ಭೇಟಿ ಕೊಟ್ಟ ದರ್ಶನ್.. ಪಾರ್ಟನರ್ ಅನ್ನು ನೆನೆದು ಕಣ್ಣೀರಿಟ್ಟರು..

ಚಿರಂಜೀವಿ ಸರ್ಜಾ ಅವರು ಎಲ್ಲರನ್ನು ಅಗಲಿ 13 ದಿನಗಳು ಕಳೆದಿವೆ.. ಕುಟುಂಬಕ್ಕೆ ಇದೀಗ ನಿಜಕ್ಕೂ ಸಾಂತ್ವಾನದ ಅಗತ್ಯ ಹೆಚ್ಚಾಗಿದೆ.. ಮಗನನ್ನು.. ಅಣ್ಣನನ್ನು.. ಇತ್ತ ಪತಿಯನ್ನು ಕಳೆದುಕೊಂಡು ನಿಜಕ್ಕೂ ಆ ಕುಟುಂಬ ಹೇಳಲಾಗದಷ್ಟು ನೋವನ್ನು ಅನುಭವಿಸುತ್ತಿದೆ.. ಇಂದು ನಾಳೆ ಮರೆಯುವ ನೋವಲ್ಲ.. ಜೀವನ ಪೂರ ಕಾಡುವ ನೋವು.. ಆದರೂ ಕನಿಷ್ಟ ಈ ಕಷ್ಟವನ್ನು ಎದುರಿಸುವ ಸಮಯದಲ್ಲಿ ಜೊತೆಯಾಗಿ ನಾವಿದ್ದೇವೆ ಎಂಬ ಸಾಂತ್ವಾನದ ಮಾತುಗಳು ಎಷ್ಟೋ ಧೈರ್ಯ ತುಂಬಬಲ್ಲದು.. ಇದೀಗ ಆ ಕೆಲಸವನ್ನು ದರ್ಶನ್ ಅವರು ಮಾಡಿದ್ದಾರೆ..

ಹೌದು ಚಿರು ಸರ್ಜಾ ಅವರು ದರ್ಶನ್ ಅವರಿಗೆ ಬಹಳ ಆಪ್ತರಾಗಿದ್ದರು.. ದರ್ಶನ್ ಅವರು ಮೈಸೂರಿನ ಫಾರ್ಮ್ ಹೌಸ್ ಗೆ ಆಗಾಗ ಭೇಟಿ ಕೊಟ್ಟು ಅಲ್ಲಿಯೇ ಸಮಯ ಕಳೆಯುತ್ತಿದ್ದರು.. ದರ್ಶನ್ ಅವರನ್ನು ಸದಾ ಪಾರ್ಟನರ್ ಪಾರ್ಟನರ್ ಎನ್ನುತ್ತಿದ್ದ ಚಿರುವನ್ನು ನೆನೆದು ದರ್ಶನ್ ಕಣ್ಣೀರಿಟ್ಟಿದ್ದಾರೆ.. ಹೌದು ಮೊನ್ನೆ ನಡೆದ ಪುಣ್ಯ ಸ್ಮರಣೆ ಕಾರ್ಯದಲ್ಲಿ ದರ್ಶನ್ ಪಾಲ್ಗೊಂಡಿದ್ದರು..

ಅರ್ಜುನ್ ಸರ್ಜಾ.. ಧೃವ ಸರ್ಜಾ ಹಾಗೂ ಮೇಘನಾ ರಾಜ್ ಸೇರಿದಂತೆ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.. ಚಿರು ಖಂಡಿತ ಮತ್ತೆ ಹುಟ್ಟಿ ಬಂದೇ ಬರ್ತಾನೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ..

ಕೆಲವೇ ತಿಂಗಳ ಹಿಂದಷ್ಟೇ ಚಿರು ಹಾಗೂ ಮೇಘನಾ ಅವರು ಇಬ್ಬರೂ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟವೆಂದು ದುಬಾರಿ ಬೆಲೆಯ ನಾಯಿಮರಿಯೊಂದನ್ನು ಕೊಂಡು ಅದನ್ನು ಖುದ್ದು ದರ್ಶನ್ ಅವರ ಮನೆಗೆ ಇಬ್ಬರು ತೆರಳಿ ಕೊಟ್ಟು ಬಂದಿದ್ದರು.. ನಮ್ಮ ಜೀವನದ ಸ್ಪೆಷಲ್ ಪರ್ಸನ್ ಗೆ ಈ ವಿಶೇಷ ಉಡುಗೊರೆ ಎಂದಿದ್ದರು.. ಆದರೆ ಕಾಲದ ನಿರ್ಣಯವೇ ಬೇರೆಯಾಗಿ ಹೋಯ್ತು.. ಚಿರು ತನ್ನೆಲ್ಲಾ ಸ್ನೇಹಿತರಿಗೆ ಕೊಟ್ಟ ಪ್ರೀತಿ ಎಂದೂ ಅಮರ..