ಡಿ ಬಾಸ್ ಆತ್ಮೀಯವಾಗಿ ಊಟ ತಿನ್ನಿಸಿದ ಇವರು ಯಾರು ಗೊತ್ತಾ?

ದರ್ಶನ್ ಸರಳತೆಗೆ ಮತ್ತೊಂದು ಹೆಸರೆನ್ನಬಹುದು.. ಸ್ನೇಹಿತರ ಜೊತೆ ಆತ್ಮೀಯವಾಗಿ ವರ್ತಿಸೋ ಇವರಿಗೆ ದೊಡ್ಡ ಸ್ಟಾರ್ ಎನ್ನುವ ಯಾವುದೇ ಅಹಂ ಭಾವ ಒಂದು ಸ್ವಲ್ಪವೂ ಇಲ್ಲ.. ಇನ್ನು ದರ್ಶನ್ ಅವರ ಫೋಟೋಗಳು ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.. ಅದೇ ರೀತಿ ನಿನ್ನೆ ದರ್ಶನ್ ಅವರು ಆತ್ಮೀಯರೊಬ್ಬರಿಗೆ ಊಟ ತಿನ್ನಿಸುವ ಫೋಟೋ..‌ ಮಗುವೊಂದರ ಜೊತೆ ತಾನೂ ಮಗುವಾದ ಫೋಟೋ ಹಾಗೂ ವೀಡಿಯೋ ವೈರಲ್ ಆಗಿತ್ತು.. ಅಷ್ಟಕ್ಕೂ ಇವರು ಯಾರು ಎಂಬ ಪ್ರಶ್ನೆ ಹಲವರಿಗೆ ಮೂಡಿತ್ತು.. ಇಲ್ಲಿದೆ ನೋಡಿ..

ಆ ಮಹಿಳೆ ಮತ್ಯಾರೂ ಅಲ್ಲ.. ನಿರ್ಮಾಪಕ ರಮೇಶ್ ಅವರ ಮಗಳು.. ರಮೇಶ್ ಹಾಗೂ ದರ್ಶನ್ ಅವರು ಬಹಳ ಆತ್ಮೀಯರು.. ಒಂದೇ ಕುಟುಂಬ ಎಂದರೂ ತಪ್ಪಾಗಲಾರದು.. ವಾರಕ್ಕೊಮ್ಮೆಯಾದರೂ ಮನೆಗೆ ಭೇಟಿ ನೀಡುತ್ತಾರೆ.‌ ಅಷ್ಟೇ ಅಲ್ಲದೆ ದರ್ಶನ್ ತಮ್ಮ ತಂಗಿಯಂತೆ ರಮೇಶ್ ಅವರ ಮಗಳನ್ನು ಕಾಣುತ್ತಾರೆ.. ಅವರಿಗೂ ಸಹ ಅಣ್ಣನೆಂದರೆ ಅಷ್ಟೇ ಪ್ರೀತಿ‌.. ಆತ್ಮೀಯತೆ.. ಇನ್ನು ನಿರ್ಮಾಪಕ ರಮೇಶ್ ಅವರ ಅಳಿಯನೂ ಕೂಡ ಕಮರೊಟ್ಟು ಚೆಕ್ ಪೋಸ್ಟ್ ಸಿನಿಮಾದ ನಿರ್ಮಾಪಕ ಚೇತನ್ ರಾಜ್.. ಚೇತನ್ ರಾಜ್ ಅವರು ದರ್ಶನ್ ಅವರ ಆತ್ಮೀಯ ಸ್ನೇಹಿತನೂ ಹೌದು..

ಮೊನ್ನೆ ಮೊನ್ನೆಯಷ್ಟೇ ಚೇತನ್ ಅವರ ಮನೆಯಲ್ಲಿ ಸಮಾರಂಭವೊಂದು ನೆರವೇರಿದ್ದು, ಕಾರ್ಯಕ್ರಮಕ್ಕೆ ದರ್ಶನ್ ಅವರು ಭಾಗಿಯಾಗಲು ಸಾಧ್ಯವಾಗಿರಲಿಲ್ಲ..‌ ಅದೇ ಕಾರಣಕ್ಕೆ ನಿನ್ನೆ ದರ್ಶನ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು.. ದರ್ಶನ್ ಅವರು ನಿನ್ನೆ ಚೇತನ್ ರಾಜ್ ಅವರ ಮನೆಗೆ ಭೇಟಿ‌ ನೀಡಿ ಎಲ್ಲರೊಟ್ಟಿಗೆ ಊಟ ಮಾಡಿ.. ಅದೇ ಸಮಯದಲ್ಲಿ ಚೇತನ್ ರಾಜ್ ಅವರ ಮುದ್ದು ಮಗು ಕಾನಿಷ್ಕ ರಾಜ್ ಗೂ ಸಹ ತನ್ನ ಕೈಯ್ಯಾರೆ ಊಟ ತಿನ್ನಿಸಿ..‌ ಆ ಮಗುವಿನೊಂದಿಗೆ ಕೆಲ ಸಮಯ ಕಳೆದು ಮರಳಿದ್ದಾರೆ.. ದರ್ಶನ್ ಅವರು ಸದ್ಯ ಕಂದನ ಜೊತೆ ಆಟವಾಡಿರುವ ವೀಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು ದರ್ಶನ್ ಅವರ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..